- ರಾಹುಲ್ ರ ರೋಹಿಡೇಕರ್, ವಿಜಯಪುರ
ಪ್ರಾಚೀನ ಭಾರತದ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ರಾಜರ ಆಳ್ವಿಕೆಯ ಜೊತೆಜೊತೆಗೆ ಅವರ ಆಡಳಿತವನ್ನು ನಾವು ಓದುತ್ತೇವೆ ಮತ್ತು ಅಧ್ಯಯನ ಮಾಡುತ್ತೇವೆ. ಭಾರತದ ರಾಜಕೀಯ ಇತಿಹಾಸವು ಪ್ರಾಚೀನ ಗ್ರಂಥಗಳ ತಳಹದಿಯ ಮೇಲೆ ನಿರೂಪಿತವಾಗಿದೆ. ಕೇವಲ ಐತಿಹಾಸಿಕ ಗ್ರಂಥಗಳಷ್ಟೇ ಅಲ್ಲದೆ ಧಾರ್ಮಿಕ ಗ್ರಂಥಗಳು ಸಹಿತ ಆಡಳಿತ ವಿಷಯಗಳನ್ನು ತಿಳಿಪಡಿಸುತ್ತವೆ. ಅದಕ್ಕೆ ಉತ್ತಮ ಉದಾಹರಣೆಗಳೆಂದರೆ ರಾಮಾಯಣ ಮತ್ತು ಮಹಾಭಾರತ. ಎರಡು ಮಹಾಕಾವ್ಯಗಳು ಪ್ರಾಚೀನ ಭಾರತದ ಒಬ್ಬ ರಾಜ ಆಡಳಿತವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿಸಿಕೊಡುತ್ತವೆ.
ಮಹಾಭಾರತ ಕಿಂತಲೂ ಮೊದಲು ರಾಮಾಯಣ ರಚಿತವಾಗಿದ್ದು ಅದರಲ್ಲಿ ಪ್ರಾಚೀನ ಕಾಲದ ಭಾರತದ ಆಡಳಿತ ನಿರ್ವಹಣೆಯನ್ನು ಅಧ್ಯಯನ ಮಾಡಬಹುದಾಗಿದೆ. ರಾಮಾಯಣ ಕೇವಲ ಧಾರ್ಮಿಕ ವಿಷಯಗಳನ್ನು ಅಷ್ಟೇ ಪ್ರಸ್ತಾಪಿಸದೆ ರಾಜನ ಕರ್ತವ್ಯಗಳು ರಾಜ ಮಾಡುವ ಆಡಳಿತ ಪದ್ಧತಿಯನ್ನು ಕಾಣಬಹುದು. ದಶರಥ, ರಾಮ, ಸುಗ್ರೀವ ರಾವಣ ಇವರೆಲ್ಲರೂ ರಾಜರಾಗಿ ಅಥವಾ ಆಡಳಿತಗಾರರಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ ಇವರ ಆಡಳಿತ ನಿರ್ವಹಣೆಯೂ ಮುಂಬರುವ ಪ್ರಾಚೀನ ರಾಜರಿಗೆ ಮಾರ್ಗದರ್ಶನ ಮಾಡುತ್ತವೆ.
ರಾಮಾಯಣದಲ್ಲಿ ಬರುವ ಅನೇಕ ಪಾತ್ರಗಳು ಉತ್ತಮ ಆಡಳಿತವನ್ನು ಮಾಡಿರುವುದಾಗಿ ತೋರುತ್ತವೆ. ರಾಮನ ತಂದೆ ದಶರಥನು ಕೂಡ ಉತ್ತಮ ಆಡಳಿತಗಾರನಾಗಿದ್ದ ಸಮಯ ಸಂದರ್ಭ ಅವನಿಗೆ ಕೆಟ್ಟದಾಗಿ ಓದಿಗೆ ಬಂದಿದ್ದರಿಂದ ರಾಮನನ್ನು ಕಾಡಿಗೆ ಕಳುಹಿಸಬೇಕಾಗಿ ಬಂತು. ಅದನ್ನು ಹೊರತುಪಡಿಸಿದರೆ ದಶರಥ ಇಡೀ ಜೀವಮಾನದಲ್ಲಿ ಉತ್ತಮ ಆಡಳಿತವನ್ನೇ ನಡೆಸಿದ್ದ. ಅಯೋಧ್ಯ ಅವನ ಕಾಲದಲ್ಲಿ ಉತ್ತಮ ಆಳ್ವಿಕೆಯನ್ನು ಕಂಡಿತ್ತು. ಜನಕ ಮಹಾರಾಜನು ಕೂಡ ಒಳ್ಳೆ ಆಡಳಿತಗಾರನಾಗಿದ್ದು ಬರಗಾಲದ ಸಮಯದಲ್ಲಿ ರಾಜನ ಪದವಿಯನ್ನು ಮರೆತು ತಾನೇ ಸ್ವತಃ ಭೂಮಿಯಲ್ಲಿ ಉಳುವ ಕೆಲಸವನ್ನು ಮಾಡಿ ಜನರಲ್ಲಿ ಉತ್ಸಾಹವನ್ನು ತುಂಬಿದ ವ್ಯಕ್ತಿ.
ಸುಗ್ರೀವ ಕೂಡ ಒಬ್ಬ ಒಳ್ಳೆಯ ಆಡಳಿತಗಾರನಾಗಿದ್ದು ವಾಲಿಯ ನಂತರ ಸಂಪೂರ್ಣ ವಾಹನರ ಸೇನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ವಾನರ ಸೇನೆಯನ್ನು ಮುನ್ನಡೆಸಿ ಶ್ರೀ ರಾಮನಿಗೆ ಸೀತೆಯನ್ನು ದೊರಕಿಸಿ ಕೊಡುವಲ್ಲಿ ಅವನು ಅವಿರತವಾಗಿ ಶ್ರಮಿಸಿದ. ಸುಗ್ರೀವನ ಸೇನೆಯಲ್ಲಿರುವಂತಹ ಜಾಂಭವಂತು ಕೂಡ ಚತುರ ಸೇನಾಡಳಿತಗಾರ ಮತ್ತು ಮುತ್ಸದ್ದಿನಾಯಕನಾಗಿದ್ದ ವಿಶೇಷವಾಗಿ ಹನುಮನಿಗೆ ಸಮುದ್ರ ದಾಟಲು ಪ್ರೇರೇಪಣೆಯಾದ. ಜಾಂಬವಂಥನಿಗೆ ಹನುಮನಲ್ಲಿರುವ ಪ್ರತಿಭೆಯನ್ನು ಅರಿತುಕೊಂಡು ಸೂಕ್ತ ಸಮಯದಲ್ಲಿ ಪ್ರೇರೇಪಣೆಯನ್ನು ಮಾಡಿ ಸಮುದ್ರ ದಾಟಲು ತಿಳಿಸಿಕೊಟ್ಟನು. ಇದು ಒಬ್ಬ ಒಳ್ಳೆಯ ಆಡಳಿತಗಾರನ ಲಕ್ಷಣ.
ಹನುಮ ಶ್ರೀ ರಾಮನ ಭಕ್ತನಾಗಿದ್ದು ಶ್ರೀ ರಾಮನಿಗಾಗಿ ಎಂತಹ ಸಾಹಸದ ಕೆಲಸವನ್ನು ಮಾಡಲು ತಯಾರಿದಂತಹ ಭಕ್ತ. ಯಾವಾಗ ಹನುಮನಿಗೆ ತನ್ನ ಸಾಮರ್ಥ್ಯದ ಅರಿವಾಯಿತೊ ಅವಾಗ ಸಮುದ್ರವನ್ನು ದಾಟಿ ಲಂಕೆಗೆ ಪಯಣಿಸಿದ. ಹನುಮ ಲಂಕೆಗೆ ಹೋಗಿದ್ದು ಒಂದು ಸಾಮಾನ್ಯ ಘಟನೆ ಆಗಿರದೆ ಅಸಾಮಾನ್ಯ ಘಟನೆ ಯಾಗಿತ್ತು. ಹನುಮ ವಾನರ ಸೇನೆಯ ತಂಡದ ಸದಸ್ಯನಾಗಿದ್ದು ತನ್ನ ಮುಖ್ಯಸ್ಥನಿಗೆ ಅನುಕೂಲ ಮಾಡಿಕೊಡುವ ಎಲ್ಲ ಕಾರ್ಯವನ್ನು ಇಲ್ಲಿ ಮಾಡಿದ. ಲಂಕೆಗೆ ಹೋಗಿ ಅಲ್ಲಿ ರಾಮಣನ ಸೇನೆಯ ಬಗ್ಗೆ ವಿವರಣೆಯನ್ನು ಪಡೆದ ಅಲ್ಲಿನ ಸೈನಿಕರೊಂದಿಗೆ ಅನೇಕ ಹೋರಾಟಗಳನ್ನು ಮಾಡಿದ. ಲಂಕೇಯಲ್ಲಿ ಇರುವಂತಹ ಸ್ಥಳಗಳನ್ನು ನೋಡಿಕೊಂಡು ರಾವಣನ ಸಾಮರ್ಥ್ಯವನ್ನು ಬಲ ಹೀನತೆಗಳನ್ನು ತಿಳಿದುಕೊಂಡು ಅಲ್ಲಿನ ವೈಭವಗಳನ್ನೆಲ್ಲವನ್ನು ಅರಿತು ತನ್ನ ಸ್ವಾಮಿ ಶ್ರೀ ರಾಮನ ಹತ್ತಿರ ಇವೆಲ್ಲ ಅಂಶವನ್ನು ತಿಳಿಸಿಕೊಟ್ಟನು. ಶ್ರೀ ರಾಮನಿಗೆ ರಾವಣನ ವಿರುದ್ಧ ಗೆಲ್ಲಲು ಸಾಕಷ್ಟು ಸಹಾಯ ಮಾಡಿತು. ಇದು ಒಬ್ಬ ಚತುರ ಆಡಳಿತಗಾರನ ಒಂದು ಲಕ್ಷಣವಾಗಿದೆ.
ರಾಮಾಯಣದಲ್ಲಿ ಮತ್ತೊಂದು ಪಾತ್ರ ಬಹಳಷ್ಟು ಮಹತ್ವದದ್ದು ಅದುವೇ ರಾವಣನ ಪಾತ್ರ. ರಾವಣ ಶ್ರೀಲಂಕಾವನ್ನು ಆಳುತ್ತಿದ್ದು ಅವನು ಕೂಡ ಶ್ರೀಲಂಕಾದ ಜನರಿಗಾಗಿ ಒಳ್ಳೆಯ ಆಡಳಿತವನ್ನು ನೀಡಿದ್ದ. ಬಂಗಾರದ ಅರಮನೆಯನ್ನೇ ಅವನು ಕಟ್ಟಿದ್ದ. ಶಿವ ಭಕ್ತನಾಗಿದ್ದು ತಪಸ್ವಿಯಾಗಿದ್ದ. ಅನೇಕ ಒಳ್ಳೆಯ ಆಯುರ್ವೇದ ಗ್ರಂಥಗಳನ್ನು ಕೂಡ ರಚಿಸಿದ್ದ. ಆದರೆ ಅವನಲ್ಲಿ ಇರತಕ್ಕಂತಹ ದೋಷ ಏನೆಂದರೆ ಅವನ ಅಹಂಕಾರ. ಈ ಅಹಂಕಾರದ ಪರಿಣಾಮವಾಗಿ ಒಳ್ಳೆ ಸಲಹೆಗಳನ್ನು ನೀಡುವ ಜೊತೆಗಾರನ್ನು ದೂರು ಇಟ್ಟು ಕೆಟ್ಟ ಮಂತ್ರಿಗಳ ಸಲಹೆಯನ್ನ ತೆಗೆದುಕೊಂಡಿದ್ದು ಅವನ ಪತನಕ್ಕೆ ದಾರಿಯಾಯಿತು. ಒಬ್ಬ ಆಡಳಿತಗಾರನಿಗೆ ಇರಬಾರದು ಲಕ್ಷಣಗಳು ಇವಾಗಿದ್ದವು. ಒಳ್ಳೆ ಆಡಳಿತಗಾರ ತನ್ನ ಒಳ್ಳೆಯ ಕಾರ್ಯಗಳಿಗೆ ವಿಶ್ವಸನಿಯ ಜನರಿಂದ ಸಲಹೆಗಳನ್ನ ಪಡೆಯಬೇಕು ಆದರೆ ರಾವಣ ಈ ರೀತಿಯ ಕಾರ್ಯಗಳನ್ನು ಮಾಡಲಿಲ್ಲ. ಒಳ್ಳೆ ಸಲಹೆಯನ್ನು ನೀಡುತ್ತಿರುವ ವಿಭೀಷಣನ್ನು ದೂರ ಇಟ್ಟು ಕೆಟ್ಟ ಸಲಹೆಯನ್ನು ನೀಡುತ್ತಿರುವ ಜನರೊಂದಿಗೆ ಹೋದದ್ದು ಅವನ ವಿನಾಶಕ್ಕೆ ಮತ್ತೊಂದು ಕಾರಣವಾಯಿತು.
ಶ್ರೀ ರಾಮನ ಸಹೋದರರ ಕುರಿತಾಗಿ ರಾಮಾಯಣ ಆಡಳಿತದಲ್ಲಿ ಅಧ್ಯಯನ ಮಾಡಬಹುದು. ಲಕ್ಷ್ಮಣನು ಒಳ್ಳೆಯ ಗುಣಲಕ್ಷಣವು ಒಬ್ಬ ಸಹೋದರನ. ನಿಜವಾದ ಸೋದರತ್ವದ ಲಕ್ಷಣವನ್ನು ಎತ್ತಿ ತೋರಿಸುತ್ತನೆ. ಆಡಳಿತದಲ್ಲಿ ಆಗಲಿ ವ್ಯಾಪಾರದಲ್ಲಿ ಆಗಲಿ ಈ ರೀತಿಯ ಸಹೋದರರ ಒಳ್ಳೆಯ ಸಂಬಂಧ ಅತ್ಯವಶ್ಯಕವಾಗಿರುತ್ತದೆ. ರಾಜ್ಯ ನಡೆಸುವವರ ಪರಿವಾರವೂ ಒಗ್ಗಟ್ಟಿನಿಂದ ಇರಬೇಕು. ಆಗ ಬಾಹ್ಯ ಶತ್ರುಗಳು ರಾಜ್ಯವನ್ನು ನಾಶಪಡಿಸಲು ಸಾಧ್ಯವಾಗುವುದಿಲ್ಲ. ಭರತ ಶತ್ರುಘ್ನರು ಸಹಿತ ರಾಮನ ಆದರ್ಶವನ್ನೇ ಅನುಸರಿಸಿದರು. ಶ್ರೀ ರಾಮ ಕಾಡಿನಲ್ಲಿದ್ದರೂ ಸಹಿತ ಭರತ ಶತ್ರುಘ್ನರೂ ಶ್ರೀ ರಾಮನನ್ನೇ ತಮ್ಮ ನಾಯಕ ಎಂದು ತಿಳಿದಿದ್ದು ಒಬ್ಬ ಉತ್ತಮ ಆಡಳಿತಗಾರರ ಲಕ್ಷಣವಾಗಿದೆ. ಪ್ರಾಚೀನ ಕಾಲದಲ್ಲಿ ಮಹಿಳೆಯರು ಸಹಿತ ಪುರುಷರ ಸಮನಾಗಿ ವಿದ್ಯೆ ಮತ್ತು ಶಿಕ್ಷಣವನ್ನು ಪಡೆಯುತ್ತಿದ್ದರು ಆಡಳಿತ ಪಟ್ಟುಗಳನ್ನು ತಿಳಿಯುತ್ತಿದ್ದರು ಹೀಗೆ ಸೀತಾ ದೇವಿ ಕೂಡ ರಾಣಿಯಾಗಿ ಗೂಢಚಾರಿಣಿಯಾಗಿ ರಾಜ್ಯದ ರಕ್ಷಣೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದಳು.
ಇನ್ನು ರಾಮಾಯಣದ ಕೇಂದ್ರ ಬಿಂದುವಾದ ಶ್ರೀ ರಾಮ ಅವನ ಆಡಳಿತ ಜಗತ್ತಿನ ಅತ್ಯಂತ ಸರ್ವ ಶ್ರೇಷ್ಠ ಆಡಳಿತಗಳಲ್ಲಿ ಒಂದಾಗಿತ್ತು. ಅವನ ರಾಜವು ಸುಖೀ ರಾಜ್ಯವಾಗಿದ್ದು ಅವನ ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ಪ್ರಜೆಯೂ ಸುಖ ಶಾಂತಿ ನೆಮ್ಮದಿಯಿಂದ ಇರುತ್ತಿದ್ದರು. ಅವನ ರಾಜ್ಯ ಒಂದು ಮಾದರಿ ರಾಜ್ಯವಾಗಿದ್ದು ಅದಕ್ಕಾಗಿ ಆ ರಾಜ್ಯವನ್ನು ರಾಮರಾಜ್ಯ ಎಂದು ಕರೆಯುತ್ತಿದ್ದರು.
ಶ್ರೀ ರಾಮ ಒಬ್ಬ ಒಳ್ಳೆಯ ರಾಜ ಮತ್ತು ನಾಯಕ ಆಗಿದ್ದನು ನಾಡಿನಲ್ಲಿನೇ ಇರಲಿ ಅಥವಾ ಕಾಡಿನಲ್ಲಿನೇ ಇರಲಿ ಉತ್ತಮ ನಾಯಕತ್ವ ಗುಣ ಮುಖಾಂತರ ಆಡಳಿತವನ್ನು ನಡೆಸುತ್ತಿದ್ದನು. ಶ್ರೀ ರಾಮ ಕೇವಲ ರಾಜನಾಗಿದ್ದಾಗ ಅಷ್ಟೇ ಅಲ್ಲದೆ ಕಾಡಿನಲ್ಲಿಯೂ ಕೂಡ ತನ್ನ ಜ್ಞಾನದ ಮುಖಾಂತರ ಆಡಳಿತ ನಿರ್ವಹಣೆಯನ್ನು ಚೆನ್ನಾಗಿ ಮಾಡಿದ್ದಾನೆ.. ವಾನರ ಸೇನೆಯನ್ನು ಗುಂಪುಗೂಡಿಸಿ ಅವರೆಲ್ಲರನ್ನು ಯುದ್ಧಕ್ಕೆ ಹಣಿ ಗೊಳಿಸುವುದು ಉತ್ತಮ ಸೈನ್ಯಾಡಳಿತವನ್ನು ಸೂಚಿಸುತ್ತದೆ. ವಾನರ ಸೇನೆ ಬಲಶಾಲಿ ಪರಾಕ್ರಮಿಯಾಗಿದ್ದರು ಸಹಿತ ಈ ಮುಂಚೆ ಇಂತಹ ಯುದ್ಧವನ್ನು ಮಾಡಿರಲಿಲ್ಲ. ಅವರು ರಾಮನ ನಾಯಕತ್ವದಲ್ಲಿ ರಾವಣನ ವಿರುದ್ಧ ಯುದ್ಧದಲ್ಲಿ ಪಾಲ್ಗೊಂಡು ಯಶಸ್ವಿಯಾದರು. ಯುದ್ಧ ಕೌಶಲ್ಯ ತಂತ್ರಗಾರಿಕೆಯು ಸೇನಾಡಳಿತದ ಒಂದು ಭಾಗವಾಗಿರುತ್ತದೆ.
ಶ್ರೀ ರಾಮ, ಸಂದರ್ಭ ಎಂತಹದೇ ಇರಲಿ ಎಲ್ಲವನ್ನು ಶಾಂತ ರೀತಿಯಿಂದ ತೆಗೆದುಕೊಂಡು ಮುನ್ನಡೆಯುತ್ತಿದ್ದನು. ತಂದೆ ದಶರಥ ಕಾಡಿಗೆ ಹೋಗು ಎಂದರು ಸಹಿತ ಪ್ರತಿರೋಧ ಮಾಡದೆ ಶಾಂತತೆಯಿಂದ ಕಾಡಿಗೆ ನಡೆದನು. ಪಟ್ಟಾಭಿಷೇಕವಾದ ನಂತರವೂ ಸಹಿತ ಉತ್ತಮ ಆಡಳಿತವನ್ನು ಪ್ರಜೆಗಳಿಗೆ ನೀಡಿದನು. ನ್ಯಾಯ ನಿರ್ಣಯವಾಗಲಿ ಕರ ವಸೂಲಿಯಾಗಲಿ ಎಲ್ಲದರಲ್ಲಿಯೂ ಸಮಾನತೆಯನ್ನು ತೋರುತ್ತಿದ್ದನು. ಪರಿವಾರ ಪ್ರಜೆಗಳೆಂದು ಭೇದ ಭಾವ ಮಾಡುತ್ತಿರಲಿಲ್ಲ.
ಜನರ ಅಭಿಪ್ರಾಯ ಕೇಳಿದ ಅವರ ಮನಸ್ಸಿನಲ್ಲಿ ಸೀತೆಯ ಕುರಿತು ಕೆಟ್ಟ ಮಾತು ಬರಬಾರದು ಎಂದು ಅವಳನ್ನು ಕಾಡಿಗೆ ಕಳಿಸಿದ. ರಾಜ್ಯ ಎಷ್ಟೇ ದೊಡ್ಡದಲ್ಲಿ ಸಣ್ಣದೇ ಇರಲಿ ಎಲ್ಲ ರಾಜರಿಗೂ ಸಮಾನ ಗೌರವ ನೀಡಿದ. ರಾವಣನ ಸೋಲಿಸಿ ಲಂಕೆಯನ್ನು ಗೆದ್ದರು ಕೂಡ ವಿಭೀಷಣನಿಗೆ ಪಟ್ಟಾಭೀಷೇಕ ಮಾಡುತ್ತಾನೆ ಸ್ಥಳೀಯ ರಾಜನು ಅಲ್ಲಿಯ ಅಭಿವೃದ್ಧಿ ಚೆನ್ನಾಗಿ ಮಾಡುತ್ತಾನೇ ಮತ್ತು ಆಡಳಿತ ಮಾಡುವಾಗ ಪರಸ್ಪರ ಸಹಕಾರ ಇರಬೇಕು ದುರಾಸೆ ಇರಬಾರದು ಎಂಬ ಅಂಶ ತಿಳಿದು ಬರುತ್ತದೆ.
ಶ್ರೀ ರಾಮನ ಕಾಲದಲ್ಲಿ ಜನರು ನೇರವಾಗಿ ಬಂದು ನ್ಯಾಯ ಕೇಳಬಹುದಾಗಿತ್ತು. ಪ್ರಜೆಗಳ ಕಲ್ಯಾಣವೇ ಅವನ ಧ್ಯೇಯವಾಗಿತ್ತು. ಪ್ರಜಾಪರವಾದ ಕಾರ್ಯಕ್ರಮಗಳು, ಉತ್ಸವಗಳು ಯಜ್ಞ ಯಾಗಾದಿಗಳನ್ನು ಮಾಡಿ ದಾನ ಧರ್ಮಗಳನ್ನು ಸಹಿತ ಮಾಡುತ್ತಿದ್ದ. ಅದಕ್ಕೆ ಇಂದಿಗೂ ಸಹಿತ ಯಾವುದೇ ರಾಜ್ಯದಲ್ಲಿ ಒಳ್ಳೆಯ ಆಡಳಿತವಿದ್ದರೆ ಆ ರಾಜ್ಯವನ್ನು ರಾಮರಾಜ್ಯವನ್ನು ಕರೆಯುತ್ತಾರೆ. ಶ್ರೀ ರಾಮ ದೇವರೆಂದು ಆರಾಧಿಸುವುದರ ಜೊತೆಗೆ ರಾಮನ ಆಡಳಿತದಿಂದಲೂ ಸಹಿತ ಸಾಕಷ್ಟು ವಿಷಯಗಳನ್ನು ಕರೆಯಬಹುದು ವ್ಯಕ್ತಿತ್ವವನ್ನು ಹೊಂದಿದ ಶ್ರೀರಾಮ ಅದಕ್ಕಾಗಿ ಮರ್ಯಾದ ಪುರುಷೋತ್ತಮನೆಂದು ಕರೆಸಿಕೊಂಡಿದ್ದಾನೆ.
ಇಷ್ಟೆಲ್ಲಾ ಅಂಶಗಳನ್ನು ನೋಡಿದಾಗ ರಾಮಾಯಣವು ಒಂದು ಅತ್ಯುತ್ತಮ ಆಡಳಿತದ ಕೋಶವಾಗಿದೆ ಎಂದು ತಿಳಿದು ಬರುತ್ತದೆ ಮತ್ತು ಆಡಳಿತದಲ್ಲಿ ಪ್ರಜೆಗಳ ಅಭಿಪ್ರಾಯ ಮುಖ್ಯ ಎನ್ನುವ ಪ್ರಜಾ ಪ್ರಭುತ್ವ ಪರಿಕಲ್ಪನೆ ಆಗಿನಿಂದಲೂ ಇದ್ದು ಪ್ರಾಚೀನ ಭಾರತದ ಆಡಳಿತದ ಬುನಾದಿಯನ್ನು ಹಾಕುವುದರ ಜೊತೆಗೆ ರಾಮಾಯಣದ ಆಡಳಿತ ಅಂಶಗಳು ಈಗಿನ ಆಡಳಿತ, ಕಂಪನಿ ಮತ್ತು ಸಂಸ್ಥೆಗಳು ನಡೆಸಲು ಸಹಿತ ಪ್ರೇರಣಾದಾಯಕವಾಗಿವೆ.
- ರಾಹುಲ್ ರ ರೋಹಿಡೇಕರ್, ವಿಜಯಪುರ
99162 46883
ಇತಿಹಾಸ ಮತ್ತು ಸಮಾಜಶಾಸ್ತ್ರ ಗಳಲ್ಲಿ ಎರಡು ಎಂ.ಎ ಪದವಿಗಳನ್ನು ಪಡೆದಿದ್ದಾರೆ. 2009 ರಿಂದ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪಿಯುಸಿ ಮತ್ತು ಪದವಿ ಉಪನ್ಯಾಸಕರಾಗಿ ಸೇವೆ, ಸದ್ಯದ ಕರ್ತವ ಸ್ಥಳ: ಪಿಡಿಜೆ ಪದವಿಪೂರ್ವ ಕಾಲೇಜು ವಿಜಯಪುರ.
ಕೃತಿ: ಯಶಸ್ಸಿನ ಸೋಪಾನಗಳು (ವ್ಯಕ್ತಿತ್ವ ವಿಕಶನದ ಪುಸ್ತಕ) 2015ರಲ್ಲಿ ಬಿಡುಗಡೆಯಾಗಿದೆ. ಓದು ಬರಹದಲ್ಲಿ ತೊಡಗಿರುವುದು ಅಭ್ಯಾಸಗಳು. ವ್ಯಕ್ತಿತ್ವ ವಿಕಸನ, ಇತಿಹಾಸ ಲೇಖನ ಬರೆಯುವಲ್ಲಿ ಆಸಕ್ತಿ. ಚುಟುಕುಗಳು ಹನಿಗಾನಗಳ ನುಡಿಮುತ್ತುಗಳ ರಚನೆ ಮೇಲೆ ಹೆಚ್ಚು ಆಸಕ್ತಿ. ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ, ನಿರೂಪಣೆ ಮತ್ತು ಕಾರ್ಯಕ್ರಮಗಳ ಆಯೋಜನೆ. ಫೇಸ್ಬುಕ್ಕಿನಲ್ಲಿ ಕರ್ನಾಟಕ ಮತ್ತು ವಿಜಯಪುರದ ವೈಭವವನ್ನು ಎತ್ತಿ ತೋರಿಸುವ ಪೇಜುಗಳನ್ನು ಸೃಷ್ಟಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ