'ಮತ ಚಲಾಯಿಸಿಯೇ ಆಸ್ಪತ್ರೆಗೆ ಹೋದರು ಕೊನೆಯುಸಿರೆಳೆದರು'
ವೋಟ್ ಹಾಕಿದರೆ ನಮಗೇನು ಲಾಭ ಎನ್ನುವವರು ಈ ತಾಯಯ ಕರ್ತವ್ಯಪ್ರಜ್ಞೆಯನ್ನು ಗಮನಿಸಬೇಕು.
ನಮ್ಮಲ್ಲಿ ಸುಶಿಕ್ಷಿತರು ಯುವಕರು ಸೇರಿದಂತೆ ಅನೇಕ ಮಂದಿ ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೌರವಿಸಿ ಅಂದ್ರೆ ಸಾವಿರ ಕುಂಟು ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುವವರಿದ್ದಾರೆ. ಅಂಥವರಿಗೆ ಒಂದು ಪಾಠ ಈ ಯಶೋದಮ್ಮ.
ಉಡುಪಿ ಜಿಲ್ಲೆ ಸಾಸ್ತಾನ ಪಾಂಡೇಶ್ವರದ ಚಡಗರಬೆಟ್ಟು ನಿವಾಸಿ 82 ವರ್ಷ ಪ್ರಾಯದ ಹಿರಿಯಬ್ಬೆ ನಿನ್ನೆ ಬೆಳಿಗ್ಗೆ ಆರೋಗ್ಯ ಏರುಪೇರಾದಗಲೂ ಆಸ್ಪತ್ರೆಗೆ ಹೋಗಲು ಒಪ್ಪದೇ ಚುನಾವಣಾ ಅಧಿಕಾರಿಗಳು ಮನೆಗೆ ಬಂದಮೇಲೆ ಮತಚಲಾಯಿಸಿಯೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರಾತ್ರಿವೇಳೆ ಕೊನೆಯುಸಿರೆಳೆದಿದ್ದಾರೆ. ಓಟ್ ಹಾಕಿ ಯಾರು ಉದ್ಧಾರ ಆಗಿದ್ದಾರೆ, ನಂಗೇನು ಲಾಭ, ಯಾರು ಅಧಿಕಾರಕ್ಕೆ ಬಂದ್ರೂ ನಾವು ದುಡಿಯೋದು ದುಡೀಲೇ ಬೇಕಲ್ವಾ? ಎಲ್ಲ ಅವರವರ ಉದ್ಧಾರ ಮಾತ್ರ ಮಾಡ್ಕೊಳ್ತಾರೆ ದೇಶ ಉದ್ಧಾರ ಮಾಡೋರು ಯಾರೂ ಇಲ್ಲ. ಇತ್ಯಾದಿ ಇತ್ಯಾದಿ ಕ್ಲೀಷೆಯ ಮಾತುಗಳನ್ನಾಡುವ ಮಂದಿ ಯಶೋದಮ್ಮನ ರಾಷ್ಟ್ರನಿಷ್ಠೆಯನ್ನು ತಪ್ಪದೇ ಗಮನಿಸಬೇಕು.
ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿಃ
-ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ