ದೇಶದ ಭವಿಷ್ಯಕ್ಕಾಗಿ ಮತದಾನ ಅವಶ್ಯಕ -ಪ್ರೋ. ವಿಷ್ಣುಗಣಪತಿ ಭಟ್

Upayuktha
0


ಪುತ್ತೂರು: ಭಾರತೀಯ ಸಂವಿಧಾನವು ತನ್ನದೇ ಆದ ಮಹತ್ವವನ್ನು ಹೊಂದಿದೆ.ಮತದಾನ ಒಂದು ಹಬ್ಬ ಇದ್ದಂತೆ.ವಿದ್ಯಾರ್ಥಿಯಾಗಿ ಕಾಲೇಜಿನಲ್ಲಿ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ದೇಶದ ಪ್ರಜೆಯಾಗಿ ಒಂದು ಒಳ್ಳೆಯ ನಾಯಕನನ್ನು ಆಯ್ಕೆಮಾಡುವಲ್ಲಿಯೂ ಇದೆ.ಒಂದೊಂದು ಮತದಾನವು ತುಂಬಾ ಮುಖ್ಯವಾಗಿರುತ್ತದೆ,ಯಾಕೆಂದರೆ ಆ ಮತ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೋ.  ವಿಷ್ಣುಗಣಪತಿ ಭಟ್ ಹೇಳಿದರು.

            

ಇವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ,ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಎನ್.ಸಿ.ಸಿ, ಎನ್.ಎಸ್.ಎಸ್,ರೋವರ್ಸ್ ಹಾಗೂ ರೇಂಜರ್ಸ್, ಯೂತ್ ರೆಡ್ ಕ್ರಾಸ್,ಪೊಲಿಟಿಕಲ್ ಪೋರಂ,ಮಾನವಿಕ ಸಂಘ ಹಾಗೂ ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

         

ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ. ಬಿ ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು , ಎಲ್ಲರಿಗೂ ಮತದಾನ ಮಾಡಲು ಅವಕಾಶ ಕೊಟ್ಟ ಮೊದಲ ದೇಶ ಭಾರತ. ಸೂಕ್ತವಾದ ಪ್ರತಿನಿಧಿ ಸಿಗಬೇಕೆಂದರೆ ಮತದಾನ ಮಾಡಬೇಕು. ಅಷ್ಟೇ ಅಲ್ಲದೆ ದೇಶವು ಅಭಿವೃದ್ಧಿ ಹೊಂದಬೇಕಾದರೆ ಮತದಾನದ ಅವಶ್ಯಕತೆಯಿದೆ ಎಂದು ನುಡಿದರು.

            

ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್ ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿದರು. ಮತದಾನ ಜಾಗೃತಿ ಅಭಿಯಾನ ಜಾಥಾವು ವಿವೇಕಾನಂದ ಪದವಿ ಕಾಲೇಜಿನಿಂದ ಹೊರಟು ಹೊರಟು ವಿವೇಕಾನಂದ ಪಾಲಿಟೆಕ್ನಿಕ್ ಮಹಾವಿದ್ಯಾಲಯ ಪುತ್ತೂರು ಇಲ್ಲಿ ಸಂಪನ್ನಗೊAಡಿತು.

           

ವೇದಿಕೆಯಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ಹಾಗೂ ಕಲಾ ವಿಭಾಗದ ಡೀನ್  ಡಾ.ಸಿ ದುರ್ಗಾರತ್ನ , ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಕಾಲೇಜಿನ ವಿಶೇಷಾಧಿಕಾರಿ ಡಾ. ಬಿ ಶ್ರೀಧರ್ ನಾಯ್ಕ್, ವಾಣಿಜ್ಯ ವಿಭಾಗದ ಉಪನ್ಯಾಸಕಿ ಹಾಗೂ ಎನ್ ಎಸ್ ಎಸ್ ಸಂಯೋಜಕಿ ವಿದ್ಯಾ ಕೆ.ಎನ್ , ವಾಣಿಜ್ಯ ವಿಭಾಗದ ಉಪನ್ಯಾಸಕ ಹಾಗೂ ರೋವರ್ಸ್ ಸಂಯೋಜಕ ಪುನೀತ್ ಎಸ್ ಉಪಸ್ಥಿತರಿದ್ದರು.

         

ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾ ಕಾಮತ್ ಕೆ ಸ್ವಾಗತಿಸಿ, ಉಪನ್ಯಾಸಕಿ ಕವಿತಾ ಬಿ ವಂದಿಸಿ , ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ವಿಷ್ಣು ಕುಮಾರ್ ಎ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಉಪನ್ಯಾಸಕಿ ದೀಪಿಕಾ ಎಸ್ ನಿರ್ವಹಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top