ಹಾಸನ: ಹಾಸನದ ದೊಡ್ಡಪುರ ಗೇಟ್ ಬಳಿ ಇರುವ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಘಟಕ ಇಂದು (ಏ.11) ಒಕ್ಕಲಿಗರ ಸಮುದಾಯದ ಬಹುಮುಖ ಪ್ರತಿಭೆ, ಮಹಿಳಾ ಸಾಧಕಿ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಮಹಿಳಾ ಸಾಧಕಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹವನ್ನು ನೀಡಬೇಕು. ಬೆಂಬಲ ನೀಡಿ ಸಹಕಾರ ನೀಡಬೇಕು. ಮಹಿಳೆಯು ತಮ್ಮ ಹಕ್ಕುಗಳ ಬಗ್ಗೆ ಧೈರ್ಯವಾಗಿ ಪ್ರಶ್ನಿಸುವಂತೆ ಆಗಬೇಕು. ಆಗ ಮಾತ್ರ ಮಹಿಳೆಯ ಶೋಷಣೆಯು ಮುಕ್ತವಾಗುತ್ತದೆ. ಪ್ರತಿಯೊಂದು ಮನೆಯಿಂದಲೇ ಮಹಿಳೆಗೆ ಪ್ರೋತ್ಸಾಹ ಮತ್ತು ಗೌರವ ನೀಡುವಂತಾಗಬೇಕು ಎಂದರು.
ಇಂದು ಅವಿಭಕ್ತ ಕುಟುಂಬಗಳು ನಶಿಸಿ ಹೋಗುತ್ತಿವೆ. ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿರುವುದು ಸಂಸ್ಕೃತಿಯ ಕೊರತೆಗೆ ಕಾರಣವಾಗುತ್ತಿದೆ. ಸಾಹಿತ್ಯ ಲೋಕದಲ್ಲಿ ಮಹಿಳೆಯು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಕನ್ನಡವನ್ನು ಉಳಿಸಲು ಸಾಧ್ಯ. ಪ್ರತಿಯೊಬ್ಬ ಮಹಿಳೆಯು ವಿದ್ಯಾವಂತಳಾಗಬೇಕು. ಮತ್ತು ಪ್ರತಿಭೆಗಳ ಮುಖಾಂತರ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಆಗಬೇಕು. ಒಳ್ಳೆಯ ಕಾರ್ಯಗಳಿಗೆ ಛಲದಿಂದ ಮುನ್ನುಗ್ಗಬೇಕು. ಮಾನಿನಿಯರಿಗೆ ಪುರುಷರಿಂದ ಪ್ರೋತ್ಸಾಹ ಹೆಚ್ಚಾಗಿ ದೊರೆಯಬೇಕು. ಯಾರು ಸಹಕಾರ ನೀಡದಿದ್ದಾಗ ಅವರಿಗೆ ಅವರೇ ಗುರು ಆಗಿ ಕಾರ್ಯನಿರ್ವಹಿಸುವಂತಹ ಶಕ್ತಿ ಸಿಗಬೇಕು. ಮಹಿಳೆಯು ಅಪಾರವಾದ ಶಕ್ತಿಯನ್ನು ಹೊಂದಿದವಳು. ಮಹಿಳೆಯರು ಹೆಚ್ಚು ಹೆಚ್ಚಾಗಿ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವ ಕಾರ್ಯವನ್ನು ಮಾಡುವುದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಹಾಸನ ಜಿಲ್ಲಾಧ್ಯಕ್ಷೆ ತಾರಾಮಣಿ ಹಾಸನ್, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಗುರುತಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಿದೆ. ಎಷ್ಟೇ ಸಮಾನತೆ ಇದೆ ಎಂದರೂ ಪೂರ್ಣ ಪ್ರಮಾಣದ ಸಮಾನತೆ ಹೆಣ್ಣು ಮಕ್ಕಳಿಗೆ ಸಿಕ್ಕಿಲ್ಲ; ಅಂತಹ ಸಮಾನತೆ ಮಹಿಳೆ ಪಡೆಯುವಲ್ಲಿ ಯಶಸ್ವಿಯಾಗಬೇಕಾದರೆ ಧೈರ್ಯವಾಗಿ ಮುನ್ನುಗ್ಗಬೇಕೆಂದರು ತಿಳಿಸಿದರು.
ರಾಜ್ಯ ಖಜಾಂಜಿ ಧರಣಿ ನಾಗೇಶ್ ರವರು ಸಂಘದ ಉದ್ದೇಶಗಳ ಬಗ್ಗೆ ತಿಳಿಸಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಹಲವಾರು ಸ್ಪರ್ಧೆಗಳನ್ನು ಮಾಡಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಸಂತ ಮಹಾದೇವಿ ಪ್ರಾರ್ಥನೆ, ತಾರಮಣಿ ಬೇಲೂರು ನಿರೂಪಣೆ, ಇಂದ್ರಾಣಿ ಎಂಡಿ ರವರು ವಂದನಾರ್ಪಣೆ ನೆರವೇರಿಸಿದರು. ಜಿಲ್ಲಾಧ್ಯಕ್ಷ ಶಿವಣ್ಣ, ಲವ ರಾಜ್ಯ ಸಂಚಾಲಕಿ ಸುಧಾಮಣಿ, ಸಂಘದ ಪದಾಧಿಕಾರಿ ಮತ್ತು ಸದಸ್ಯರಾದ ರಾಧಾ, ಸುಧಾ, ವಸಂತ, ಮೀನಾಕ್ಷಿ, ಮಹಾದೇವಿ, ಸವಿತಾ ಬೇಲೂರು, ಮೇಘನ, ಶಿವಮ್ಮ, ಶಕುಂತಲಾ ಇನ್ನು ಹಲವಾರು ಸದಸ್ಯರುಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ