ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ನಾರಿ ಶಕ್ತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ "ಮೋದಿ ಸರ್ಕಾರದ ಮಹಿಳಾ ಕೇಂದ್ರಿತ ಯೋಜನೆಗಳಿಂದ ಇಂದು ನಾರಿ ಶಕ್ತಿಗೆ ಸಮಾಜದಲ್ಲಿ ಸಮಾನ ಅವಕಾಶ ಸಿಗುತ್ತಿದೆ. ಸಮಾಜದ ಪ್ರತಿಯೊಂದು ವಾಹಿನಿಯಲ್ಲಿ ಮಹಿಳೆಯರನ್ನು ಸೇರಿಸಿಕೊಂಡಲ್ಲಿ ರಾಷ್ಟ್ರದ ಅಭಿವೃದ್ಧಿ ಸಾಧ್ಯ" ಎಂದು ಹೇಳಿದರು.
ತಾಯಂದಿರು ಕ್ರೋಡೀಕರಿಸಿ ನೀಡಿದ ದೇಣಿಗೆಯ ಠೇವಣಿ ಹಣ ನನಗೆ ಅಮೂಲ್ಯ:
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಠೇವಣಿ ಹಣ ನೂರಾರು ಕೋಟಿ ರೂಗಳನ್ನು ಘೋಷಿಸಿದ ಅಭ್ಯರ್ಥಿಗಳಿಗೆ ಇದು ಕೇವಲ ಹಣವಷ್ಟೇ, ಆದರೆ ನನಗೆ ವಿವಿಧ ಸಮುದಾಯದ ತಾಯಂದಿರು ಕ್ರೋಡೀಕರಿಸಿ ನೀಡಿದ ದೇಣಿಗೆಯ ಠೇವಣಿ ಹಣ ನನಗೆ ಅಮೂಲ್ಯವಾದದ್ದು ಹಾಗೂ ತಾಯಂದಿರ ಬೆಂಬಲದ ಬಲದಿಂದ ನನಗೆ ಅತ್ಯಧಿಕ ಅಂತರದ ಗೆಲುವಾಗಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಭಿಮಾನದಿಂದ ಹೇಳಿದರು.
ನಂತರ ಸಂಜೆ ಕೊಲ್ಯದ ಕುಲಾಲ ಭವನದಲ್ಲಿ ನಡೆದ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ನಾರಿ ಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ