ಬೆಂಗಳೂರು: ಏ.9ರಂದು ಹೊಸ ವರ್ಷದ ಯುಗಾದಿ ಹಬ್ಬದ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷ "ರತ್ನ ಕವಚದ ಅಲಂಕಾರ" ಮತ್ತು ಸಂಜೆ 6-30 ಕ್ಕೆ ವಿದ್ವಾನ್-ಅಗ್ನಿಹೋತ್ರಿ ವೇಣುಗೋಪಾಲ ಆಚಾರ್ಯರಿಂದ "ಪಂಚಾಂಗ ಶ್ರವಣ" ನಡೆಯಲಿದೆ.
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ 9-4-2024 ಮಂಗಳವಾರ ಬೆಳಗ್ಗೆ ರಾಯರ ಬೃಂದಾವನಕ್ಕೆ ತೈಲಾಭ್ಯಂಜನ, ಫಲಪಂಚಾಮೃತ ಅಭಿಷೇಕ ನವರತ್ನ ಕವಚದ ಅಲಂಕಾರ, ಉತ್ಸವ ನೆರವೇರಲಿದೆ, ಮತ್ತು ವಿಶೇಷವಾಗಿ ಸಂಜೆ 6:30ಕ್ಕೆ "ಪಂಚಾಂಗ-ಶ್ರವಣವನ್ನು" ವಿದ್ವಾನ್- ಅಗ್ನಿಹೋತ್ರಿ ವೇಣು ಗೋಪಾಲಾಚಾರ್ಯರು ನಡೆಸಿ ಕೊಡಲಿದ್ದಾರೆ ಎಂದು ನಂದಕಿಶೋರಾಚಾರ್ಯರು ತಿಳಿಸಿದ್ದಾರೆ.
ಶ್ರೀ ಗುರು ರಾಯರ ಸೇವೆಯಲ್ಲಿ ಭಾಗವಹಿಸುವ ಭಕ್ತರು ಶ್ರೀಮಠದ ವಾಟ್ಸಾಪ್ ಈ ನಂಬರ್ -9449133929 ಆನ್ಲೈನ್ ಮುಖಾಂತರ ಸೇವೆ ಸಲ್ಲಿಸಿ ಫಲ ಮಂತ್ರಾಕ್ಷತೆ ಯನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ