ಎನ್ಎಂಎಎಂಐಟಿ ಅಧ್ಯಾಪಕರಿಂದ ಯುಎಸ್ಎಯ ಪೆನ್ ಸ್ಟೇಟ್ ಯೂನಿವರ್ಸಿಟಿಗೆ ಭೇಟಿ

Upayuktha
0

 ಅಂತರರಾಷ್ಟ್ರೀಯ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ ಅಡಿಯಲ್ಲಿ 



ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 8 ಬೋಧಕರು ನಿಟ್ಟೆ ವಿಶ್ವವಿದ್ಯಾಲಯದ ಇಂಟರ್ನ್ಯಾಷನಲ್ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಐಎಫ್ಡಿಪಿ) ಅಡಿಯಲ್ಲಿ 29 ಮಾರ್ಚ್ ರಿಂದ 28 ಏಪ್ರಿಲ್ ರವರೆಗೆ 1 ತಿಂಗಳ ಅವಧಿಗೆ ಅಮೆರಿಕದ ಹ್ಯಾರಿಸ್ಬರ್ಗ್ನ ಪೆನ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ.


ಶೈಕ್ಷಣಿಕ ಪ್ರಯಾಣದ ಮೂಲಕ ನಿಟ್ಟೆ ವಿಶ್ವವಿದ್ಯಾಲಯದ ಬೋಧಕ ಸದಸ್ಯರಿಗೆ ಅತ್ಯಂತ ಸಮೃದ್ಧ ಅಂತರರಾಷ್ಟ್ರೀಯ ಅನುಭವವನ್ನು ಒದಗಿಸಲು ಐಎಫ್ ಡಿಪಿಯನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದ ಮೂಲಕ, ಬೋಧಕರು ಉನ್ನತ ಶಿಕ್ಷಣದಲ್ಲಿನ ಅಂತರಗಳನ್ನು ನಿವಾರಿಸುತ್ತಾರೆ, ಅಂತರ್-ಸಾಂಸ್ಕೃತಿಕ ಸಂಪತ್ತಿನ ಹಂಚಿಕೆ, ಜಾಗತಿಕ ಬೋಧನಾ ಸಾಮರ್ಥ್ಯವನ್ನು ನಿರ್ಮಿಸುವುದು ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಚಾತುರ್ಯತೆಯನ್ನು ಹೆಚ್ಚಿಸುವಲ್ಲಿ ನೆರವಾಗಲಿದೆ.


ನಿಯೋಗದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಡೀನ್ (ಪ್ರವೇಶಾತಿ) ಡಾ.ರಾಜೇಶ್ ಶೆಟ್ಟಿ; ಡಾ. ಸೂರ್ಯನಾರಾಯಣ ಕೆ, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ; ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ರಾಧಾಕೃಷ್ಣ; ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ.ಅಶ್ವಿನಿ ಬಿ., ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ಸುಕೇಶ್ ರಾವ್ ಎಂ,; ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ರಘುನಂದನ್ ಕೆ.ಆರ್; ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಜೇಸನ್ ಎಲ್ರಾಯ್ ಮಾರ್ಟಿಸ್; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಗ್ರೇಡ್-೩ ಡಾ.ಶಿವಕುಮಾರ್ ಬಿ.ಆರ್ ಇರುವರು.


IFDP ಪ್ರೋಗ್ರಾಂ ಈ ಕೆಳಗಿನ ಗುರಿಗಳನ್ನು ಹೊಂದಿದೆ :

ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಉತ್ತಮ ಅಭ್ಯಾಸಗಳನ್ನು ಗುರುತಿಸಿ ಅಲ್ಲಿನ ಕೋರ್ಸ್ ವಿನ್ಯಾಸ, ಬೋಧನಾ ತಂತ್ರಗಳು ಮತ್ತು ಮೌಲ್ಯಮಾಪನ ವಿಧಾನಗಳ ಸಮಗ್ರ ಚಿತ್ರಣ ಪಡೆಯುವುದು, ಎಂಜಿನಿಯರಿಂಗ್ ಕೋರ್ಸ್ ನಲ್ಲಿ ಉದ್ಯಮ-ಸಂಬಂಧಿತ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ಪಿಎಸ್ ಯುನಲ್ಲಿ ಬಳಸುವ ತಂತ್ರಗಳನ್ನು ಗುರುತಿಸುವುದು, ಪಿಎಸ್ ಯುನೊಂದಿಗೆ 2 + 1 + 1 ಟ್ವಿನಿಂಗ್ ಮತ್ತು 2 + 2 ಡ್ಯುಯಲ್ ಡಿಗ್ರಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಕೊಡುಗೆ ನೀಡಿ


ಪರಸ್ಪರ ಪ್ರಯೋಜನಕಾರಿಯಾದ ಸುಸ್ಥಿರ, ನಿರಂತರ ಸಹಯೋಗವನ್ನು ಅಭಿವೃದ್ಧಿಪಡಿಸಲು ಈ ಯೋಜನೆ ಕೈಗೊಳ್ಳಲಾಗಿದೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top