ಮುಂಬಯಿಯ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ

Upayuktha
0


ಮುಂಬಯಿ: ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರವೇಶಕ್ಕೆ ದ್ವಾರವಾದ, ಪಾಶ್ಚಿಮಾತ್ಯ ಸಂಸ್ಕೃತಿಯ ಪರಾಕಾಷ್ಠೆ ತಲುಪಿದ ಈ ಮುಂಬಯಿಯಲ್ಲಿ ಮೋಕ್ಷ ವಿದ್ಯೆಯನ್ನು ಬೋಧಿಸುವ, ಸನಾತನ ಧರ್ಮವನ್ನು ಪಸರಿಸುವ, ಭಕ್ತಿ ಮಾರ್ಗವನ್ನು ಬೆಳೆಸುವ, ವಿರಕ್ತಿಯ ರಾಜಮಾರ್ಗದಂತಿರುವ, ಗುರುಭಕ್ತಿಯನ್ನು ರಕ್ತಗತವನ್ನಾಗಿಸುವ ದಿವ್ಯ ಭವ್ಯವಾದ ವಿಶ್ವವಿದ್ಯಾಲಯ ನಮ್ಮ ಸತ್ಯಧ್ಯಾನವಿದ್ಯಾಪೀಠ. 


ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ

ಪಂ ವಿಶ್ವಪ್ರಜ್ಙಾಚಾರ್ಯರು ಪಾಠಮಾಡಿದ, ಪೂಜ್ಯ ಮಾಹುಲೀ ಆಚಾರ್ಯರು ಚಿಂತನೆ ಮಾಡಿಸಿದ ಸತ್ಯಧ್ಯಾನ ವಿದ್ಯಾಪೀಠದ ಘಟಿಕೋತ್ಸವ (ಸುಧಾಮಂಗಳ ಮಹೋತ್ಸವ) ಈ ಬಾರಿ ವಿದ್ಯಾಪೀಠದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ 10 ದಿನಗಳ ಕಾಲ ಜರುಗಿತು. 


ಸುವರ್ಣಪುರುಷನ ಅಡಿದಾವರೆಗಳಿಗೆ ಸು-ವರ್ಣ ಪುಷ್ಪಗಳ ಸಮರ್ಪಣೆ

ಶ್ರೀಸತ್ಯಾತ್ಮತೀರ್ಥರ 50ನೆಯ ಜನ್ಮದಿನದ ಶುಭ ಅವಸರದ ಸುಪ್ರಸಂಗ, ಅಂತೆಯೇ ಮಹಾಸ್ವಾಮಿಗಳು ಸುವರ್ಣಪುರುಷರು. ಈ ಪ್ರಸಂಗದಲ್ಲಿ ಪೂಜ್ಯ ಮಾಹುಲೀ ಆಚಾರ್ಯರು ತಮ್ಮ 46 ಶಿಷ್ಯರು ಹಾಗೂ ನಾಲಕ್ಕು ಪ್ರಶಿಷ್ಯರು ಎಂಬ ಐವತ್ತು ಸು-ವರ್ಣ ಪುಷ್ಪಗಳಿಗೆ ಸುಧಾಪಾಠವನ್ನು ಹೇಳಿ, ಚೆನ್ನಾಗಿ ತಯಾರು ಮಾಡಿಸಿ, ನೂರಾರು ವಿದ್ವಾಂಸರ ಹಾಗೂ ಅನೇಕ ಯತಿವರೇಣ್ಯರುಗಳ ದಿವ್ಯ ಸಾನ್ನಿಧ್ಯದಲ್ಲಿ ಸಮಗ್ರ, ಅಧ್ಯಾಯ, ಅಧಿಕರಣ, ಅನುವಾದ ಪರೀಕ್ಷೆ ಯನ್ನುಕೊಡಿಸುವ ಮುಖಾಂತರ ಐವತ್ತು ಪುಷ್ಪಗಳನ್ನು ಅರ್ಪಿಸಿದರು. ಸಮಾಜಕ್ಕೂ ಐವತ್ತು ವಿದುಷರನ್ನು ಅರ್ಪಿಸಿದರು.


ನವ ಯುಗ ಸ್ಥಾಪಿಸಿದ ನವನವೀನರು: ವಿದ್ಯಾಪೀಠದ ಘಟಿಕೋತ್ಸವದಲ್ಲಿ ಒಂಭತ್ತು ಜನ ವಿದ್ಯಾರ್ಥಿಗಳು ಸಮಗ್ರವಾಗಿ ಶ್ರೀಮನ್ಯಾಯಸುಧಾ ಪರೀಕ್ಷೆಯನ್ನು ಕೊಡುವ ಮುಖಾಂತರ ನವಯುಗವನ್ನೇ ಸ್ಥಾಪಿಸಿದರು. 


ನವ ವಿದ್ಯಾರ್ಥಿಗಳು, ನವ ದಿನಗಳಲ್ಲಿ, ನಿತ್ಯವೂ ನವ (9) ಗಂಟೆಗಳಂತೆ ನವೀನ ಅರ್ವಾಚೀನ ವಿದುಷರು ಕೇಳುವ ನವ ನವ ಪ್ರಶ್ನೆಗಳಿಗೆ ನವನವೀನವಾಗಿ ಉತ್ತರ ಕೊಡುವ ಮುಖಾಂತರ, ನೆರೆದ ಯತಿಗಳಲ್ಲಿ, ವಿದುಷರಲ್ಲಿ, ಪ್ರೇಕ್ಷಕವರ್ಗದಲ್ಲಿ ನವನವೀನ ಉತ್ಸಾಹ ಉಕ್ಕಿ ಬರುವಂತೆ ಉತ್ತರಿಸಿದರು. ನವ ನವ ಚಪ್ಪಾಳೆಗಳ ಅಲೆಗಳನ್ನೇ ಉಕ್ಕಿ ಹರಿಸಿದರು. ವಿದ್ಯಾಪೀಠದ ನವಯುಗಕ್ಕೆ ನಾಂದಿಯಾದರು.


ಮೂರು ಮುಕುಟಗಳು: ಶ್ರೀಮನ್ಯಾಯಸುಧಾ ಗ್ರಂಥದ ಅಭೂತಪೂರ್ವ ಮೆರವಣಿಗೆ, ಶ್ರೀಶ್ರೀಸತ್ಯಾತ್ಮತೀರ್ಥ ಶ್ರೀಗಳವರ ಸುವರ್ಣ ಸಂಭ್ರಮ ಹಾಗೂ ಶ್ರೀಶ್ರೀ ಪೇಜಾವರ ಶ್ರೀಗಳಿಗೆ ಸತ್ಕಾರ ಶ್ರೀಮನ್ಯಾಯಸುಧಾಮಂಗಳವೆಂಬ ದೇವತೆಗೆ ಮುಕುಟಪ್ರಾಯವಾಗಿದ್ದವು


ಬೆಳಿಗ್ಗೆ ಸರಿಯಾಗಿ 6 ಗಂಟೆಗೆ ಶ್ರೀರಾಮದೇವರ ಪೂಜೆ ಆರಂಭ. 9 ರಿಂದ ಮಧ್ಯಾಹ್ನ 1:30 ವರೆಗೂ ಪರೀಕ್ಷೆ. ನಂತರ ಸಾವಿರಾರು ಭಗವದ್ಭಕ್ತರಿಗೆ ತೀರ್ಥಪ್ರಸಾದ. ಪುನಃ 3 ಘಂಟೆಗೆ ಆರಂಭವಾದ ಪರೀಕ್ಷೆ ರಾತ್ರಿ 11 ಗಂಟೆಯವರೆಗೂ ನಿರಂತರ ಸಾಗುತ್ತಿತ್ತು. ಈ ನಿಟ್ಟಿನಲ್ಲಿ ಒಂಭತ್ತು ದಿನಗಳವರೆಗೂ ಸಾಗುತ್ತಿತ್ತು. 


ಈ 9-10  ದಿನಗಳ ಸತ್ರದಲ್ಲಿ 30 ಸಾವಿರ ಜನಕ್ಕೂ ಹೆಚ್ಚು ಬ್ರಾಹ್ಮ ಅನ್ನ ಸಂತರ್ಪಣವಾಗಿದೆ. ಸಾವಿರಾರು ವಿದ್ವಾಂಸರುಗಳಿಗೆ ಕೈ ತುಂಬ ದಕ್ಷಿಣಾ ದಾನವಾಗಿದೆ. ಸಮಗ್ರ ಸುಧಾ ಅಧ್ಯಯನ ಮಾಡಿದವರಿಗೆ ಲಕ್ಷ ಲಕ್ಷ ಸಂಭಾವನೆ. ಸಮಗ್ರ ಪರೀಕ್ಷೆ ನೀಡಿದ ವಿದ್ಯಾರ್ಥಿಗೆ ಭಂಗಾರದ ಕಡಗ ಹಾಕಿ ದಿವ್ಯವಾಗಿ ಪ್ರೋತ್ಸಾಹವನ್ನೂ ನೀಡಿದರು ಪಂ ವಿಶ್ವಪ್ರಜ್ಙಾಚಾರ್ಯರು. 


ಮಂಗಳಾನುವಾದ: ವೇದಾಪೌರೇಷೇಯತ್ವ ವಿಷಯನ್ನು ಶ್ರೀಮನ್ಯಾಯಸುಧಾ ಹಾಗೂ ಅನೇಕ ಟಿಪ್ಪಿಗಳಿಂದ ಸಹಿತವಾಗಿ ಅತ್ಯಂತ ಸಮರ್ಥವಾಗಿ ಅನುವಾದ ಮಾಡುವ ಮುಖಾಂತರ ಸನ್ನಿಹಿತರಾದ ಶ್ರೀಚರಣರು ತಲೆತೂಗುವಂತೆ ಮಾಡಿದರು. ವಿದ್ವಾಂಸರೆಲ್ಲರೂ ಸಂತೋಷಪಟ್ಟರು. ನರೆದ ಜಮಸ್ತೋಮ ಹಿರಿಹಿಗ್ಗಿತು. 


ಗುರುದಕ್ಷಿಣೆ: ಬ್ರಹ್ಮಜ್ಙಾನವನ್ನು ಉಪದೇಶಿಸಿದ ಗುರುಗಳಿಗೆ ಶಿಷ್ಯರೆಲ್ಲರೂ ಸೇರಿ ಭಂಗಾರದ ಕಡಗವನ್ನು ಗುರುದಕ್ಷಿಣೆಯಾಗಿ ಅರ್ಪಿಸಿದರು. 


ಈ ರೀತಿಯಾಗಿ 10 ದಿನಗಳಲ್ಲಿ ನಿರಂತರ ಜ್ಙಾನದಾನ, ಅನ್ನದಾನ, ದ್ರವಿಣ ದಾನ, ಶ್ರೀಗಳವರ ಆರಾಧನೆ, ಇತ್ಯಾದಿ ಕಾರ್ಯಕ್ರಮಗಳನ್ನು ಒಳಗೊಂಡ ಮಂಗಳ ಕಾರ್ಯಕ್ರಮ ಪೂಜ್ಯ ಮಾಹುಲೀ ಆಚಾರ್ಯರ ಸಂಪೂರ್ಣ ಅನುಗ್ರಹದ ಬಲದಿಂದ ತಮ್ಮ 40ನೆಯ ವಯಸ್ಸಿಗೇ ಅತ್ಯಂತ ವೈಭವೋಪೇತವಾಗಿ ಐತಿಹಾಸಿಕವಾಗಿ ದಾಖಲು ಮಾಡಿದರು ಪಂ ವಿಶ್ವಪ್ರಜ್ಙಾಚಾರ್ಯರು.  


- ನ್ಯಾಸ

(ಗೋಪಾಲ ದಾಸ)

ವಿಜಯಾಶ್ರಮ. ಸಿರಿವಾರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top