ಕೌಶಲ್ಯದ ಜೊತೆಗೆ ಜೀವನದ ಅನುಭವವನ್ನು ಪಡೆಯಿರಿ: ವೀರು ಶೆಟ್ಟಿ

Upayuktha
0




ಉಜಿರೆ: ಕೌಶಲ್ಯದ ಜೊತೆಗೆ ಜೀವನದ ಅನಭವವನ್ನು ಪಡೆದಾಗ ಉತ್ತಮವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ರುಡ್‌ಸೆಟ್‌ ಸಂಸ್ಥೆಯಲ್ಲಿ ಕೌಶಲ್ಯ ಮಾತ್ರವಲ್ಲದೇ ಜೀವನದ ಮೌಲ್ಯಗಳನ್ನು ಕೂಡ ಕಲಿಸಿಕೊಡುತ್ತಾರೆ. ಇಲ್ಲಂದ ಹೋಗುವಾಗ ಜೀವನದ ಅನುಭವವನ್ನು ಜೊತೆಗೆ ಕೊಂಡುಹೋಗಿ. ಪ್ರಕೃತಿಗೆ ನಮ್ಮ ಅಗತ್ಯ ಇಲ್ಲ ಆದರೆ ನಮಗೆ ಪ್ರಕೃತಿಯ ಅಗತ್ಯ ಇದೆ. ಆದ್ದರಿಂದ ಪ್ರಕೃತಿಯನ್ನು ಉಳಿಸುವ ಕೆಲಸ ಮಾಡಿ. ರುಡ್‌ಸೆಟ್‌ ಸಂಸ್ಥೆಯಲ್ಲಿ ಕಲಿತ ಎಲ್ಲಾ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿರ್ಧಾರ ಮಾಡಿ, ಗ್ರಾಹಕರೊಂದಿಗೆ ಒಳ್ಳೆಯ ರೀತಿಯಲ್ಲಿ ಮಾತನಾಡಿ ನಿಮ್ಮ ಉದ್ಯಮವನ್ನು ಬೆಳೆಸಿಕೊಳ್ಳಿ, ಆರ್ಥಿಕವಾಗಿ ಸಬಲರಾಗಿ, ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶಗಳಲ್ಲಿ ನಮ್ಮ ದೇಶವೂ ಒಂದು, ಈ ಯುವಕರಿಗೆ ಉದ್ಯೋಗವನ್ನು ಕೊಟ್ಟರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ರುಡ್‌ಸೆಟ್‌ ಸಂಸ್ಥೆಯಿಂದ ಅನೇಕ ನಿರುದ್ಯೋಗಿಗಳು ಸ್ವ ಉದ್ಯೋಗವನ್ನು ಕೈಕೊಂಡು ಸ್ವಾವಲಂಬಿಗಳಾಗುವುದು ಅಲ್ಲದೇ ಅನೇಕರಿಗೆ ಉದ್ಯೋಗ ಕೊಡುವವರಾಗಿದ್ದಾರೆ ಎಂದು ಧರ್ಮೋತ್ಥಾನ ಟ್ರಸ್ಟ್‌, ಧರ್ಮಸ್ಥಳ ಇದರ ಕಾರ್ಯದರ್ಶಿಗಳು ಮತ್ತು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಹೇಳಿದರು.


ಅವರು ರುಡ್‌ಸೆಟ್‌ ಸಂಸ್ಥೆಯಲ್ಲಿ ನಡೆದ ಎಲೆಕ್ಟ್ರಿಕಲ್‌ ಮೊಟಾರ್‌ ರಿವೈಂಡಿಂಗ್‌ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ರುಡ್‌ಸೆಟ್‌ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್‌ ಕಲ್ಲಾಪುರರವರು ಅಧ್ಯಕ್ಷತೆ ವಹಿಸಿದ್ದರು, ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕ ಎಂ. ಸುರೇಶ್‌ ರವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಕ ಕರುಣಾಕರ್‌ ಜೈನ್‌ ರವರು ವಂದಿಸಿದರು.


30 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ 35 ಅಭ್ಯರ್ಥಿಗಳು ಭಾಗವಹಿಸಿದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆ ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top