ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

Upayuktha
0


ಹಾಸನ: ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಗುರಿ ಹೊಂದಿದೆ. ಪ್ರಸಿದ್ಧ ಕಲಾವಿದ ಲಿಯೋನಾರ್ಡೊ ಡಾವಿನ್ಸಿ  ಜನ್ಮ ದಿನದಂದು ವಿಶ್ವ ಕಲಾ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ, ವಿಶ್ವ ಕಲಾ ದಿನಾಚರಣೆ ಅಂಗವಾಗಿ ಹಾಸನದ ಸಂಸ್ಕೃತ ಭವನದಲ್ಲಿ ಸಂಸ್ಕಾರ ಭಾರತಿ, ಹೊಯ್ಸಳ ಚಿತ್ರಕಲಾ ಪರಿಷತ್, ಸ್ವೀಪ್ ಕಮಿಟಿ, ಜಿಲ್ಲಾಡಳಿತ, ಚಿತ್ರಕಲಾ ಶಿಕ್ಷಕರ ಸಂಘ, ಸಂಸ್ಕೃತ ಸಂಘ, ಪತ್ರಕರ್ತರ ಸಂಘ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರಕಲಾ ಶಿಬಿರ, ಸ್ಫರ್ಧೆ ಕಲಾವಿದರ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.   


ಅಂತರಾಷ್ಟ್ರೀಯ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್ ಲಿಯನಾರ್ಡ್ ಡಾವಿನ್ಸಿಯ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಸಾಹಿತ್ಯ ಚಿತ್ರಕಲೆ ಒಂದಕ್ಕೊಂದು ಪೂರಕ. ಸಾಹಿತ್ಯದಲ್ಲಿ ಪುಟಗಟ್ಟಲೇ ಬರೆಯುವುದನ್ನು ಒಂದು ಚಿತ್ರದಲ್ಲಿ ಪ್ರತಿಬಿಂಬಿಸಲು ಸಾಧ್ಯ. 


ಕಲೆ ಮನುಷ್ಯನ ಭಾವನಾತ್ಮಕ ಲಹರಿಯ ಕೊಡುಗೆ. ವ್ಯಕ್ತಿ ಹಾಗೂ ಸಮಾಜದ ಚೈತನ್ಯದ ಮಹತ್ವಪೂರ್ಣ ಕ್ರಿಯೆ. ಸಮಾಜದ ಪ್ರತಿನಿಧಿಯಾಗಿ ಕಲೆಯನ್ನು ಕಲಾವಿದ ಸೃಷ್ಟಿಸುತ್ತಾನೆ. ಕಲಾವಿದನ ವ್ಯಕ್ತಿತ್ವ ಕೂಡ ಈ ಸಮಾಜದಿಂದ ರೂಪುಗೊಳ್ಳುತ್ತದೆ. ಅಂತೆಯೇ ಕಲೆಯನ್ನು ಆಸ್ವಾದಿಸುವುದು ಈ ಸಮಾಜವೇ ಎಂಬುದು ಮಹತ್ವಪೂರ್ಣವಾದುದು  ಎಂದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷರು ಜಿ.ಎಸ್.ಮಂಜುನಾಥ್ ಮಾತನಾಡಿ ಶಿಲ್ಪಕಲೆ ಪ್ರಾಚೀನವಾದುದು. ಹಳೆಬೀಡು ಬೇಲೂರು ಮೊದಲಾಗಿ ಭಾರತೀಯ ಶಿಲ್ಪಕಲೆ ಜಗದ್ವಿಖ್ಯಾತಿ ಪಡೆದಿದೆ.  ಹಳೆಯದನ್ನು ಉಳಿಸಿಕೊಂಡು ಹೊಸ ಸೃಜನಶೀಲ ಕಲೆಯನ್ನು ಬೆಳೆಸಿಕೊಂಡು ಹೋಗುವುದು ಅವಶ್ಯ ಎಂದರು. 


ಕಡೂರಿನ ಚಿತ್ರಕಲಾವಿದ ಲಿಂಗರಾಜು ಎಂ.ಎಸ್. ಅವರು ಅಬ್ ಸ್ಟಾçಕ್ಟ್ ಚಿತ್ರಕಲೆಯನ್ನು ಪ್ರಾತ್ಯಕ್ಷಿಕೆಯಲ್ಲಿ ಚಿತ್ರಿಸಿದರು. ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಚಿತ್ರಕಲಾ ಪ್ರಮುಖರು ಶಂಕರಪ್ಪ ಕೆ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರು ವೈ.ಬಿ.ರವಿ ಚಿತ್ರಕಲಾ ಸ್ಫರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ನಿರ್ಮಲ ಚಿತ್ರಕಲಾ ಮಹಾ ವಿದ್ಯಾಲಯ ಪ್ರಾಚಾರ್ಯರು ಆರ್.ಸಿ.ಕಾರದಕಟ್ಟಿಯವರನ್ನು ಸನ್ಮಾನಿಸಲಾಯಿತು. 


ಚಿತ್ರಕಲಾ ಪ್ರದರ್ಶನದಲ್ಲಿ ಪ್ರಭಾಕರ್ ಎಸ್.ವೈ. ನಾಗೇಶ್ ಎನ್. ಬಿ.ಎಸ್.ದೇಸಾಯಿ, ಮಂಜುನಾಥ್, ಎಚ್.ಎಸ್. ಜಯರಾಮ, ವೈ.ಹೆಚ್. ರವಿ ವೈ.ಬಿ. ಶಂಕರಪ್ಪ ಕೆ.ಎನ್. ಶಿವಶಂಕರಪ್ಪ ಜಿ.ಎಸ್. ಸೋಮಶೇಖರ್ ಚಂದ್ರಕಾಂತ್ ನಾಯರ್, ಚಂದ್ರಶೇಖರ್, ಶಿವಕುಮಾರ್ ಆರ್. ಸುರೇಶ್ ಅತ್ನಿ, ನರಸಿಂಹಲು, ಬಸವರಾಜು ಡಿ.ಎಸ್. ಶಿವಶಂಕರ್ ಕೆ.ಜಿ. ಜಗದೀಶ್ ಜಿ.ಎಸ್. ಕೃಷ್ಣಚಾರಿ, ಲಕ್ಷ್ಮೀ ಎನ್. ಚಂದ್ರಪ್ರಭಾ ಜಿ.ಎಸ್. ಶೋಭಾ ಆರ್, ಸೌಮ್ಯ ಎಸ್. ಮೊದಲಾದವರು ಭಾಗವಹಿಸಿದ್ದರು. ಮಂಜುನಾಥ್ ಹೆಚ್.ಎಸ್. ಸ್ವಾಗತಿಸಿ ಶಿವಕುಮಾರ್ ವಂದಿಸಿದರು. ಶಿವಶಂಕರಪ್ಪ ಜಿ.ಎಸ್.ನಿರೂಪಿಸಿದರು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top