ಸಬ್‌ಕಾ ಸಾಥ್ ಸಬ್‌ಕಾ ವಿಕಾಸಕ್ಕಾಗಿ ಪ್ರಧಾನಿ ಮೋದಿ: ಗೋವಾ ಬಿಜೆಪಿ ಕರ್ನಾಟಕ ಸೆಲ್ ಅಭಿಯಾನ

Upayuktha
0


ಪಣಜಿ: ಸಬ್‍ಕಾ ಸಾಥ್ ಸಬ್‍ಕಾ ವಿಕಾಸ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯ ವಾಕ್ಯದಂತೆಯೇ ಶ್ರೀಮಂತನಿರಲಿ ಬಡವನಿರಲಿ ಎಲ್ಲರೂ ಒಂದೇ ಎಂಬಂತೆ ಚುನಾವಣೆಯಲ್ಲಿ ಸ್ಲಂಗಳಲ್ಲಿರುವ ಜನರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲು ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ವರಿಷ್ಠರ ಸೂಚನೆಯಂತೆಯೇ ಗೋವಾದಲ್ಲಿ ಸ್ಲಂಗಳಲ್ಲಿರುವ ಕನ್ನಡಿಗರನ್ನೇಲ್ಲ ಒಗ್ಗೂಡಿಸುವ ಕೆಲಸವನ್ನು ನಾವು ಇಂದು ಮಾಡುತ್ತಿದ್ದೇವೆ ಎಂದು ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ ನುಡಿದರು.


ಗೋವಾದ ಮಡಗಾಂವ ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಜುಕ್ಕಿ ಜೋಪಡಿ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು. ಬೇರೆ ಪಕ್ಷದವರಿದ್ದರೂ ಅವರನ್ನು ಕೂಡ ಬಿಜೆಪಿಗೆ ಸೇರಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಕೇಂದ್ರ ಸರ್ಕಾರದ ಹತ್ತಾರು ಯೋಜನೆಗಳಿವೆ. ಈ ಎಲ್ಲ ಯೋಜನೆಗಳ ಕುರಿತು ಕನ್ನಡ ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ನಾವು ಮಾಡಬೇಕಿದೆ. ಕೇಂದ್ರ ಸರ್ಕಾರದ ಕೆಲ ಯೋಜನೆಗಳು ಜನತೆಗೆ ತಲುಪಿಲ್ಲದಿದ್ದರೆ ಅಂತಹ ಯೋಜನೆಗಳ ಬಗ್ಗೆ ಕೂಡ ಕನ್ನಡಿಗರಿಗೆ ಮಾಹಿತಿ ನೀಡುವ ಕೆಲಸ ನಾವು ಮಾಡಬೇಕು ಎಂದು ಮೋಹನ್ ಶೆಟ್ಟಿ ನುಡಿದರು.


ಗೋವಾದಲ್ಲಿ ಕನ್ನಡ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಸಭೆಗಳನ್ನು ಆಯೋಜಿಸಲಾಗುವುದು. ಗೋವಾದಲ್ಲಿ ನಾವು ಕನ್ನಡಿಗರೆಲ್ಲ ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೆ ಸರ್ಕಾರದ ಬಳಿ ನಮ್ಮ ಬೇಡಿಕೆಗಳನ್ನು ಮುಂದಿಡಲು ಸಾಧ್ಯವಾಗುವುದಿಲ್ಲ. ನಾವು ಬಿಜೆಪಿ ಪಕ್ಷಕ್ಕೆ ಕೊಡುಗೆ ನೀಡಿ ನಂತರ ಗೋವಾ ಕನ್ನಡಿಗರ ಸಮಸ್ಯೆ ಬಗೆಹರಿಸಿಕೊಳ್ಳೋಣ. ಗೋವಾದಲ್ಲಿ ಈ ಎಲ್ಲ ಭಾಗದಲ್ಲಿ ಇಂತಿಷ್ಟು ಕನ್ನಡಿಗರ ಮತದಾರರಿದ್ದಾರೆ. ಇದರಿಂದಾಗಿ ಈ ಎಲ್ಲ ಕನ್ನಡಿಗರಿಗೆ ಅಗತ್ಯ ಸೌಲಭ್ಯ ನೀಡಬೇಕು ಎಂದು ಬೇಡಿಕೆ ಮುಂದಿಡಲು ಸಾಧ್ಯವಾಗುತ್ತದೆ ಎಂದು ಮೋಹನ್ ಶೆಟ್ಟಿ ನುಡಿದರು.


ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಬಿಜೆಪಿ ಉತ್ತರ ಭಾರತದ ಕನ್ವೀನರ್ ರಾಕೇಶ್ ಅಗರವಾಲ್ ಮಾತನಾಡಿ- ಗೋವಾದಲ್ಲಿ ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಕನ್ನಡಿಗರು ವಾಸಿಸುತ್ತಿದ್ದರೂ ನಮಗೆ ಯಾವುದೇ ವೇದಿಕೆ ಲಭಿಸಿರಲಿಲ್ಲ. ಇಂದು ನಮಗೆ ಈ ಒಂದು ವೇದಿಕೆ ಲಭಿಸಿದೆ. ಬಿಜೆಪಿಯು ನಮಗೆ ಪ್ರತ್ಯೇಕ ಸಮಿತಿಯನ್ನು ಮಾಡಿಕೊಟ್ಟಿದೆ. ನಮ್ಮ ಶಕ್ತಿ ಏನು ಎಂಬುದನ್ನು ನಾವು ಚುನಾವಣೆಯಲ್ಲಿ ತೋರಿಸಿಕೊಡಬೇಕಿದೆ. ಗೋವಾದ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆ ಮಾಡಬೇಕು. ಗೋವಾದ ಹೆಚ್ಚಿನ ವಾರ್ಡಗಲ್ಲಿ ಕನ್ನಡಿಗರೇ ನಿರ್ಣಾಯಕ ಮತದಾರರಾಗಿದ್ದಾರೆ ಎಂದರು.


ಗೋವಾ ಬಿಜೆಪಿ ಕರ್ನಾಟಕ ಸೆಲ್ ಕಾರ್ಯದರ್ಶಿ ಶಿವಾನಂದ ಬಿಂಗಿ ಸ್ವಾಗತ ಕೋರಿದರು. ಕಾರ್ಯದರ್ಶಿಗಳಾದ ಗಿರಿರಾಜ ಭಂಡಾರಕಾರ್, ರಾಜೇಶ್ ಶೆಟ್ಟಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಸೆಲ್ ಪ್ರಮುಖರಾದ ರಾಘವ ಶೆಟ್ಟಿ, ಹಿರಿಯ ಕನ್ನಡಿಗರಾದ ಪಡದಯ್ಯ ಹಿರೇಮಠ, ಸಂಗಪ್ಪ ಪೂಜಾರಿ, ಬಸಪ್ಪ ರೂಗಿ, ಪರಶುರಾಮ ಕಲಿವಾಳ, ಮಡಿವಾಳಯ್ಯ ಗಣಾಚಾರಿ, ಸುರೇಶ್ ಕಣವಿ, ಶಿವಾನಂದ ಮಸಬಿನಾಳ, ಬರಮಣ್ಣ ಕಟ್ಟೀಮನಿ, ಮತ್ತಿತರರು ಉಪಸ್ಥಿತರಿದ್ದರು. ಗಿರಿರಾಜ ಭಂಡಾರಕಾರ್ ವಂದನಾರ್ಪಣೆಗೈದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top