ಮಂಗಳೂರು: ಬಜಪೆ ಸಮೀಪ ಎಡಪದವಿನಲ್ಲಿ ಮನೆಯೊಂದರ ಬಾವಿಗೆ ಈ ಭಾಗದಲ್ಲಿ ಅಪರೂಪವೆನಿಸಿದ ಕರಿ ಚಿರತೆ ಬಿದ್ದಿರುವ ಘಟನೆ ನಡೆದಿದೆ. ಆಹಾರ ಹುಡುಕುತ್ತ ಬಂದ ಕಪ್ಪು ಚಿರತೆ ಶನಿವಾರ ರಾತ್ರಿ ವೇಳೆ ಶಕುಂತಲಾ ಆಚಾರ್ಯ ಎಂಬವರ ಮನೆಯ ಬಾವಿಗೆ ಬಿದ್ದಿದೆ. ಭಾನುವಾರ ಬೆಳಗ್ಗೆ ಮನೆಯವರು ಬಾವಿಯಿಂದ ನೀರು ಸೇದಲೆಂದು ಹೋದಾಗ ಚಿರತೆ ಕಂಡುಬಂದಿದೆ.
ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಇಲಾಖೆ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ಮೇಲೆತ್ತಿ ಬೋನಿಗೆ ಹಾಕಿದ್ದಾರೆ.
ಎಡಪದವು ಪರಿಸರದ ಬೋರುಗುಡ್ಡೆ ಎಂಬಲ್ಲಿ ಕೆಲವು ದಿನಗಳಿಂದ ಚಿರತೆ ಹಾವಳಿಯಿಂದ ಜನ ಕಂಗೆಟ್ಟಿದ್ದರು. ಹಲವು ಮನೆಗಳ ನಾಯಿಗಳು ಚಿರತೆಗೆ ಆಹಾರವಾಗಿದ್ದವು. ಆದರೆ ಚಿರತೆ ಇದುವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ.
ಇಂದು ಬೆಳಗ್ಗೆ ಊರಲ್ಲಿ ಸುದ್ದಿ ಹಬ್ಬುತ್ತಿದ್ದಂತೆ ಜನರು ಚಿರತೆಯನ್ನು ನೋಡಲು ಜಮಾಯಿಸಿದ್ದರು.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ್ ಬಳಿಗಾರ್, ಸಹಾಯಕ ವಲಯ ಅಣ್ಯಾಧಿಕಾರಿ ಜಗರಾಜ್, ಅರಣ್ಯ ಪಾಲಕರಾದ ದಿನೇಶ್, ಕ್ಯಾತಲಿಂಗ, ಚಾಲಕ ಸೂರಜ್ ಹಾಗೂ ಸ್ಥಳೀಯರಾದ ಹರೀಶ್, ಗಣೇಶ್ ಮತ್ತು ಬಜಪೆ ಪೊಲೀಸರು ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ