ಕಣ್ಣು ಶ್ರೇಷ್ಠ ಅಂಗ, ಜಾಗರೂಕತೆ ಅವಶ್ಯ : ಡಾ.ಎಂ.ಮೋಹನ ಆಳ್ವ

Upayuktha
0

ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ  ಮತ್ತು ಕನ್ನಡಕ ವಿತರಣಾ ಶಿಬಿರ 


ವಿದ್ಯಾಗಿರಿ:  ಒಬ್ಬ ವ್ಯಕ್ತಿಯ ಎಲ್ಲಾ ಅಂಗಗಳಲ್ಲಿ  ಶ್ರೇಷ್ಠ ಅಂಗ ಕಣ್ಣು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ  ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ  ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಸೌಹಾರ್ದ ಮೂಡುಬಿದಿರೆ ಚಾರಿಟೇಬಲ್ ಟ್ರಸ್ಟ್ (ರಿ.) ನಮ್ಮ ನಾಡ ಒಕ್ಕೂಟ ಚಾರಿಟೇಬಲ್ ಟ್ರಸ್ಟ್ (ರಿ.) ಎಸ್‌ಕೆಎಸ್ ಎಸ್‌ಎಫ್ ಮೂಡುಬಿದಿರೆ ವಲಯ,  ಕೆ.ಎಂ.ಜೆ- ಎಸ್‌ವೈಎಸ್- ಎಸ್‌ಎಸ್‌ಎಫ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.


ನಮ್ಮ  ಅಜಾಗರೂಕತೆಯಿಂದ ನಮ್ಮ ಕಣ್ಣನ್ನು ಕಳೆದುಕೊಳ್ಳುವ ಪ್ರಸಂಗ ಬರಬಹುದು. ಎಚ್ಚರಿಕೆ ಅಗತ್ಯ. ಆರೋಗ್ಯ ದೃಷ್ಟಿಯಿಂದ ಮೂಢನಂಬಿಕೆಯನ್ನು ಬಿಟ್ಟು ತಪಾಸಣೆ ಮಾಡುವುದು ನಮ್ಮ ಕರ್ತವ್ಯ  ಎಂದರು. ಈ ಶಿಬಿರ ಯಾವುದೇ ಜಾತಿ ಮತಗಳಿಗೆ ಸೀಮಿತವಾಗಿರದೆ  ಎಲ್ಲಾ ಜಾತಿ ಮತಗಳ  ಕಟ್ಟಕಡೆಯ ವ್ಯಕ್ತಿಗಳು ಕೂಡ ಇದರ ಪ್ರಯೋಜನ ಪಡೆಯಬೇಕು ಎಂದರು.


ಈ ಹಿಂದಿನ ಶಿಬಿರದಲ್ಲಿ ಪಾಲ್ಗೊಂಡ 151 ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಯಿತು.


ಕಾರ‍್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಅಬುಲಾಲ್ ಪುತ್ತಿಗೆ – ಅಧ್ಯಕ್ಷರು, ನುರಾನಿ ಮಸ್ಜಿದ್ ಪುತ್ತಿಗೆ, ಅಬ್ದುಲ್ ಹಮೀದ್ - ಟ್ರಸ್ಟಿ, ನಮ್ಮ ನಾಡ ಒಕ್ಕೂಟ ಚಾರಿಟೇಬಲ್ ಟ್ರಸ್ಟ್(ರಿ), ಮಹಮ್ಮದ್ ಶರೀಫ್ – ಅಧ್ಯಕ್ಷರು, ಸೌಹಾರ್ದ ಮೂಡುಬಿದಿರೆ ಚಾರಿಟೇಬಲ್ ಟ್ರಸ್ಟ್(ರಿ), ಮಹಮ್ಮದ್ ಶಪಿ - ಮದರಾಸ ಮ್ಯಾನೇಜ್‌ಮೆಂಟ್ ಮೂಡುಬಿದಿರೆ ವಲಯ, ಸಿ.ಹೆಚ್. ಗಫೂರ್, ಸಿ.ಹೆಚ್. ಮೆಡಿಕಲ್ಸ್, ಮೂಡುಬಿದಿರೆ, ಅಬ್ದುಲ್ ಅಝೀಝ್ ಮಲಿಕ್ - ಉಪಾಧ್ಯಕ್ಷರು, SಏSSಈ ದಕ್ಷಿಣ ಕನ್ನಡ(ಪಶ್ಚಿಮ) ಜಿಲ್ಲೆ, ಅಶ್ರಫ್ ಮರೋಡಿ - ಕೋಶಾಧಿಕಾರಿ, SಏSSಈ ದಕ್ಷಿಣ ಕನ್ನಡ(ಪಶ್ಚಿಮ) ಜಿಲ್ಲೆ, ಅಬ್ದುಲ್ ಸಲಾಂ ಮದನಿ - ಅಧ್ಯಕ್ಷರು, ಏಒಎ ಮೂಡುಬಿದಿರೆ ಸರ್ಕಲ್, ಎಂ. ಎಸ್. ಝೈನುದ್ದೀನ್, ಆಳ್ವಾಸ್ ಪಿಝೇರಿಯಾ, ವಿದ್ಯಾಗಿರಿ ಹಾಗೂ ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ.ಶೀತಲ್ ರವರು ಇವರು ಉಪಸ್ಥಿತರಿದ್ದರು.


ಡಾ.ಮಂಜುನಾಥ್ ಭಟ್ ಸ್ವಾಗತಿಸಿ, ಡಾ.ವಿಕ್ರಮ್ ಕುಮಾರ್ ವಂದಿಸಿ, ಡಾ. ಗೀತಾ ಮಾರ್ಕಂಡೆ ನಿರೂಪಿಸಿದರು. 


ಇಲ್ಲಿಯವರೆಗೆ ನಡೆದ ಒಟ್ಟು 6 ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 972 ಜನ ಪಾಲ್ಗೊಂಡು, 502 ಜನರಿಗೆ ಕನ್ನಡಕ ವಿತರಿಸಿ, 144 ಜನರು ಕಣ್ಣಿನ ಪೊರೆ ಶಸ್ತç ಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.


    ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top