ಮಂಗಳೂರು: ಕಳೆದ 33 ವರ್ಷಗಳಿಂದ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲೆ ಎತ್ತಲು ಇಲ್ಲಿನ ಮತದಾರರು ಬಿಟ್ಟಿಲ್ಲ. 33 ವರ್ಷಗಳಿಂದ ಬಿಜೆಪಿಯ ಅಭ್ಯರ್ಥಿಗಳು ಬಹುಮತದಿಂದ ಗೆಲುವು ಸಾಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಆ ಕೆಲಸವನ್ನು ತುಳುನಾಡಿನ ಈ ಮಣ್ಣು, ಹಿಂದೂ ಬಾಂಧವರು ಮಾಡಿದ್ದಾರೆ. ಈ ಬಾರಿ ಚುನಾವಣೆ ತುಳುನಾಡಿಗೆ ಸವಾಲಿನ ಪ್ರಶ್ನೆಯಾಗಿದೆ. ಈಗಾಗಲೇ ತುಳುನಾಡು ಹಿಂದುತ್ವದ ನೆಲ, ಭದ್ರನೆಲ ಎಂದು ಕಾಂಗ್ರೆಸ್‌ನವರೇ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಈಗ ಹಿಂದುತ್ವದ ಕೋಟೆಯನ್ನು ಯಾವ ರೀತಿ ಒಡೆಯಬಹುದು, ಬಿರುಕು ಹುಟ್ಟಿಸಬಹುದು ಎಂಬ ಬಗ್ಗೆ ತಂತ್ರಗಾರಿಕೆ ಮಾಡಿದೆ ಎಂದು ಬಿಜೆಪಿ ಪ್ರಮುಖ ನಾಯಕರಾದ ಹರಿಕೃಷ್ಣ ಬಂಟ್ವಾಳ ಹೇಳಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ನಡೆಸಿರುವ ತಂತ್ರಗಾರಿಕೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಪತ್ರಿಕಾಗೋಷ್ಠಿಯ ಉದ್ದಕ್ಕೂ ತೀಕ್ಷ್ಣ ವಾಗ್ದಾಳಿ ನಡೆಸಿದರು. ಅವರು ಮಾತುಗಳ ಹೈಲೈಟ್ಸ್ ಇಲ್ಲಿದೆ:
* ಈ ಬಾರಿ ಯಾವತ್ತೂ ಇರದಂತಹ ಒಪ್ಪಂದಗಳು ಕಾಂಗ್ರೆಸ್ ಜತೆ ನಡೆದಿದೆ. ಇದು ರಹಸ್ಯವಾಗಿ ನಡೆದಿದೆ. ರಾಹುಲ್ ಗಾಂಧಿ ಜತೆ ಮುಸ್ಲಿಂ ಲೀಗ್ ಮತ್ತು ಎಸ್‌ಡಿಪಿಐ ಒಪ್ಪಂದ. ಇಡೀ ಕರ್ನಾಟದ ಹೆಬ್ಬಾಗಿಲು ಆಗಿರುವ ಹಿಂದುತ್ವದ ಶಕ್ತಿಯನ್ನು ದೇಶಕ್ಕೆ ತೋರಿಸಿರುವ ತುಳುನಾಡು ಕೋಟಿ ಚೆನ್ನಯರಂತಹ ಅದ್ಭುತ ಶಕ್ತಿಯ ನಾಡು., ಜಾತಿ ಮತ ಭಾಷೆಯನ್ನು ಮೀರಿ ನಿಂತ ತುಳುನಾಡು.
* ಹಿಂದುತ್ವದ ಅಲೆ ಇರುವ ಈ ಜಿಲ್ಲೆಯನ್ನು ಒಡೆಯುವ ತಂತ್ರ ಹೆಣೆದಿದೆ ಕಾಂಗ್ರೆಸ್. ಅದು ಕಾಂಗ್ರೆಸ್, ನಿಷೇಧಿತ ಪಿಎಫ್‌ಐನ ರಾಜಕೀಯ ಅಂಗ ಎಸ್‌ಡಿಪಿಐ ಮತ್ತು ಮುಸ್ಲಿಂ ಲೀಗ್ ಸೇರಿ ಈ ತಂತ್ರ ಮಾಡಿವೆ. ಕೇರಳದಲ್ಲಿ ಮಲಪ್ಪುರಂ ಯಾವ ರೀತಿ ಮುಸ್ಲಿಂ ಲೀಗಿನ ಜಿಲ್ಲೆ ಕಟ್ಟಿದ್ದಾರೆ, ಅಂತಹ ಒಂದು ಜಿಲ್ಲೆಯನ್ನು ಕರ್ನಾಟಕದಲ್ಲಿ ಕಟ್ಟಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ದುಕೊಂಡಿದ್ದಾರೆ.
* ಕರ್ನಾಟಕದ ಮಲಪ್ಪುರಂ ದ.ಕ ಆಗಬೇಕು ಎನ್ನುವುದು ಕಾಂಗ್ರೆಸ್‌ನ ಷಡ್ಯಂತ್ರ. ಅದಕ್ಕಾಗಿ ಇಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವರನ್ನು ಮೊದಲು ಒಡೆಯಬೇಕು, ಹಿಂದೂ ಬಿಲ್ಲವರು ಹಿಂದೂ ಕುಲಾಲರು, ಹಿಂದೂ ಬಂಟರು, ಮೊಗವೃಇರರು ಈರೀತಿ ಎಲ್ಲರ ಮಧ್ಯೆ ಒಂದು ಬಿರುಕು ಹುಟ್ಟಿಸಬೇಕು ಎಂದು ಕಾಂಗ್ರೆಸ್ ತಂತ್ರ ಹೆಣೆದಿದೆ. ಆ ಮೂಲಕ ಮುಸ್ಲಿಂ ಪ್ರಾಬಲ್ಯ ಮೆರೆಯ ಬೇಕು ಎನ್ನುವ ತಂತ್ರ.
* ರಾಹುಲ್ ಗಾಂಧಿ ಸ್ಪರ್ಧಿಸುವುದು ಕೇರಳದ ವಯನಾಡಿನಲ್ಲಿ. ಪಯನೀರ್ ಪತ್ರಿಕೆ ಅಲ್ಲಿನ ರಹಸ್ಯ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿಗೆ ಮುಸ್ಲಿಂ ಲೀಗ್ ಬೆಂಬಲ ನೀಡಬೇಕಾದರೆ ನಮ್ಮ ಎರಡು ವಿಚಾರಗಳನ್ನು ಒಪ್ಪಬೇಕು ಎಂದು ಷರತ್ತು ಹಾಕಿತು. ಅದು ಏನೆಂದರೆ., ಮೊದಲನೆಯದು, ವಯನಾಡಿನಲ್ಲಿ ಯಾವ ಸಂದರ್ಭದಲ್ಲೂ ಕಾಂಗ್ರೆಸ್‌ನ ಧ್ವಜವನ್ನು ಹಾರಿಸಬಾರದು. ಚಿಹ್ನೆಯನ್ನು ಜೇಬಲ್ಲಿಟ್ಟುಕೊಳ್ಳಿ, ಆದರೆ ಕಣ್ಣಿಗೆ ಕಾನುವಂತೆ ಪ್ರದರ್ಶಿಸಬಾರದು.
* ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಂದು ಪ್ರಶ್ನೆ ಎತ್ತಿದ್ದರು. ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಸ್ಪರ್ಧಿಸುವ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವಾಗ ಒಂದೇ ಒಂದು ಕಾಂಗ್ರೆ ಧ್ವಜ ಹಾರಲಿಲ್ಲ ಏಕೆ? ಅದರ ರಹಸ್ಯವೇನು? ಉದ್ದೇಶವೇನು ಎಂಬ ಪ್ರಶ್ನೆ ವಿಜಯನ್ ಎತ್ತಿದ್ದಾರೆ. ಅದನ್ನು ಪತ್ರಿಕೆಗಳು ವರದಿ ಮಾಡಿವೆ.
ರಾಹುಲ್ ಗಾಂಧಿ ವಯನಾಡಿನಲ್ಲಿ ಕಾಂಗ್ರೆಸ್ ಧ್ವಜವನ್ನು ಬಳಸಿಲ್ಲ ಏಕೆ? ಉತ್ತರ ಇಲ್ಲಿದೆ ನೋಡಿ:
* ಈ ದೇಶವನ್ನು 60 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್‌ಗೆ ತನ್ನ ಪಕ್ಷದ ಧ್ವಜವನ್ನು ನಾಮಪತ್ರ ಸಲ್ಲಿಕೆ ಸಂದರ್ಭ ಹಾರಿಸಬಾರದು ಎಂಬ ಮುಸ್ಲಿಂ ಲೀಗ್‌ನ ಧಮಕಿಗೆ ರಾಹುಲ್ ಗಾಂಧಿ ಬಾಲಮುದುರಿ ಕುಳಿತಿದ್ದಾರೆ. ಉತ್ತರ ಭಾರತದ ಯಾವುದೇ ರಾಜ್ಯದಲ್ಲಿ ರಾಹುಲ್ ಗಾಂಧಿಗೆ ಗೆಲ್ಲುವ ಅವಕಾಶವೇ ಇಲ್ಲ. ಅಮೇಠಿಯಿಂದ ಓಡಿ ಬಂದ ರಾಹುಲ್ ಗೆ ಕರ್ನಾಟಕದಲ್ಲೂ ಚುನಾವಣೆಗೆ ನಿಲ್ಲುವ ಧೈರ್ಯವಿಲ್ಲ. ತಮ್ಮ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ಸುಮಾರು 70 % ಮುಸ್ಲಿಮರಿರುವ ವಯನಾಡಿನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅದಕ್ಕೆ ಒಳ ಒಪ್ಪಂದ ಬೇರೆ. ಕೇರಳದ ಕಾಂಗ್ರೆಸ್‌ನ ಅಧ್ಯಕ್ಷ ಹಸನ್ ಅವರಿಗೆ ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ- ಹೌದು, ನಾವು ಪಕ್ಷದ ಧ್ವಜ ಬಳಸಬಾರದು ಆದರೆ ಪಕ್ಷದ ಚಿಹ್ನೆಯನ್ನು ಕಿಸೆಯಲ್ಲಿ ಇಟ್ಟುಕೊಂಡು ಹೋಗಬಹುದು ಅಷ್ಟು ಮಾತ್ರ ನಾನು ಹೇಳಬಲ್ಲೆ ಎಂದು ಉತ್ತರಿಸುತ್ತಾರೆ. ಕರ್ನಾಟಕದಲ್ಲಿ ಈ ಅವಕಾಶ ಮಾಡಿಕೊಡಬೇಕು ಎಂಬುದು ರಾಹುಲ್ ಗಾಂಧಿ ಮತ್ತು ಮುಸ್ಲಿಂ ಲೀಗ್ ಮಾಡಿಕೊಂಡ ಒಪ್ಪಂದ. ಇವತ್ತು ನಾವೆಲ್ಲ ನೋಡುತ್ತಿದ್ದೇವೆ.
* ದಕ್ಷಿಣ ಕನ್ನಡ ಜಿಲ್ಲೆ ಎಂದರೆ ತುಳವರ ಒಗ್ಗಟ್ಟಿನ ಜಿಲ್ಲೆ. ಅದರಲ್ಲಿ ಬಂಟರು, ಬಿಲ್ಲವರು, ಮೊಗವೀರರು, ಕುಲಾಲರು, ಗಾಣಿಗರು, ದೇವಾಡಿಗರು, ಪರಿಶಿಷ್ಟ ಜಾತಿ ವರ್ಗದವರು, ವಿಶ್ವಕರ್ಮರು, ಬ್ರಾಹ್ಮಣರು, ಕೊಂಕಣಿಗರು ಎಲ್ಲರೂ ತುಳುನಾಡಿನಲ್ಲಿ ಇದ್ದಾರೆ. ಇದು ಹಿಂದುತ್ವದ ಬಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
* ಚುನಾವಣೆ ಕಾವು ಪ್ರಾರಂಭ ಆಗುವ ಮೊದಲು ಸಿದ್ದರಾಮಯ್ಯ ಕಟು ಟೀಕಾಕಾರ ಬಿ.ಕೆ ಹರಿಪ್ರಸಾದ್ ಒಂದು ಹೇಳಿಕೆ ನೀಡಿದರು- ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರ ಕೋಟೆಯನ್ನು ನಾನು ಪುಡಿ ಪುಡಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದರು. ಅದು ಎಲ್ಲ ಮಾಧ್ಯಮಗಳಲ್ಲೂ ವರದಿಯಾಗಿದೆ. ಅದೇ ವ್ಯಕ್ತಿ ಪಾಕಿಸ್ತಾನ ನಮ್ಮ ಶತ್ರುವಲ್ಲ, ಅದು ಬಿಜೆಪಿಗೆ ಮಾತ್ರ ಶತ್ರು, ಕಾಂಗ್ರೆಸ್‌ಗೆ ಅಲ್ಲ ಎಂದಿದ್ದರು.
* ಇದನ್ನು ತುಳುನಾಡಿನ ಎಲ್ಲ ಮತದಾರರು ಅತ್ಯಂತ ಗಂಭೀರವಾಗಿ ಗಮನಿಸಬೇಕು. ಅದೇ ಹೊತ್ತಿನಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಏನೆಂದರೆ- ಹಿಂದೂಗಳು ನಮ್ಮ ದೇಶಕ್ಕೆ ಬೆದರಿಕೆ ಎಂದು. ಅದಕ್ಕೆ ಪೂರಕವಾಗಿ ಡಿಎಂಕೆಯ ನಾಯಕಿ ಕನಿಮೊಳಿ ಹೇಳಿಕೆ- ಚೀನಾ ನಮ್ಮ ಶತ್ರುವಲ್ಲ. ಹೀಗೆ ಹೇಳಬೇಕಾದರೆ ಎಂತಹ ರಹಸ್ಯವಾದ ರಾಜಕೀಯ ವ್ಯೂಹವನ್ನು ಇವರು ರಚಿಸಿಕೊಂಡಿದ್ದಾರೆ ಎಂಬುದನ್ನು ಈ ನಾಡಿನ ಪ್ರಜ್ಞಾವಂತ ಮತದಾರರೆಲ್ಲ ಗಮನಿಸಬೇಕು.
ವಿಭಜನಕಾರಿ ಶಕ್ತಿಗಳ ಟೂಲ್ ಕಿಟ್ ಪದ್ಮರಾಜ್:
ಕರ್ನಾಟಕದಲ್ಲಿ ಈ ವ್ಯೂಹವನ್ನು ಪ್ರಯೋಗ ಮಾಡಲು ದಕ ಜಿಲ್ಲೆಯನ್ನು ಬಳಸಿಕೊಂಡಿದ್ದಾರೆ. ಬಿಲ್ಲವ ಪ್ರಾಬಲ್ಯ ಇರುವ ಈ ಜಿಲ್ಲೆಯಲ್ಲಿ ಒಂದು ಟೂಲ್ ಕಿಟ್ ಆಗಿ ಪದ್ಮರಾಜ್ ಅವರನ್ನು ಬಳಸಿಕೊಂಡಿದೆ.
ಇಲ್ಲಿನ ಹಿಂದೂ ಬಿಲ್ಲವರನ್ನು, ಹಿಂದೂ ಬಂಟರನ್ನು, ಹಿಂದೂ ಮೊಗವೀರರನ್ನು ಹಿಂದೂ ಮೊಗವೀರರನ್ನು, ಹಿಂದೂ ಗಾಣಿಗರನ್ನು, ಹಿಂದೂ ಪರಿಶಿಷ್ಟ ಜಾತಿ ವರ್ಗದವರನ್ನು, ಹಿಂದೂ ಬ್ರಾಹ್ಮಣರನ್ನು, ಹಿಂದೂ ಕೊಂಕಣಿಗರನ್ನು ಬೇರೆ ಬೇರೆ ಮಾಡಿ ವಿಭಜನೆ ಮಾಡಲು ಈ ಬಾರಿ ಪ್ರಯತ್ನಿಸಿದ್ದಾರೆ.
ಹಿಂದೆ ಹಿಂದೂ-ಮುಸ್ಲಿಂ ಅಂತ ವಿಭಜಿಸಲು ಪ್ರಯೋಗ ಮಾಡಿ ನೋಡಿದ್ದಾರೆ. ಅದರಲ್ಲಿ ಯಶಸ್ಸು ಸಿಗಲಿಲ್ಲ ಎಂದು ಗೊತ್ತಾದಾಗ, ಹಿಂದೂಗಳನ್ನು ಜಾತಿ ಹೆಸರಿನಲ್ಲಿ ಒಡೆಯಲು ಹೊರಟಿದೆ ಕಾಂಗ್ರೆಸ್.
ಈ ಸಂಚಿನ ಹಿಂದೆ ಇರುವುದು ಕಾಂಗ್ರೆಸ್, ಎಸ್‌ಡಿಪಿಐ, ಮುಸ್ಲಿಂ ಲೀಗ್ ಎಂಬುದು ನೂರಕ್ಕೆ ನೂರು ಸತ್ಯ. ಇದರ ವಿರುದ್ಧ ನಾವು ಹೋರಾಡುತ್ತೇವೆ. 2024ರ ಈ ಚುನಾವಣೆ ಒಂದು ಸವಾಲು ಎಂದಿರುವುದು ಇದೇ ಕಾರಣಕ್ಕೆ.
* ಮೊದಲು ನಾರಾಯಣಗುರು ವೃತ್ತವನ್ನು ಆರಿಸಿಕೊಂಡರು. ಮೊನ್ನೆ ಪ್ರಧಾನಿ ಮೋದಿ ಬಂದಿದ್ದಾಗ ನಾರಾಯಣಗುರುಗಳ ಪ್ರತಿಮೆಗೆ ಮಾಲೆ ಹಾಕಿದರು. ಆ ಸಂದರ್ಭದಲ್ಲಿ ಪ್ರತಿಮೆಯ ಪೀಠದ ಎಡಗಡೆ ಕಾಲಿಟ್ಟಿದ್ದರು, ಅದು ನಮ್ಮ ಎದೆಗೆ ತುಳಿದಂತಾಗಿದೆ ಎನ್ನುತ್ತ ಬಿಲ್ಲವರನ್ನು ಒಡೆಯಲು ಯತ್ನಿಸುತ್ತಿರುವ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರು.
* ಕಾಂಗ್ರೆಸ್ ಮತ್ತು ಟೂಲ್ ಕಿಟ್ ಆಗಿರುವ ಪದ್ಮರಾಜರಿಗೆ ಪ್ರಶ್ನೆ: ಈ ನಾರಾಯಣ ಗುರು ವೃತ್ತ ನಿರ್ಮಿಸುವಲ್ಲಿ ಕಾಂಗ್ರೆಸ್‌ನ ಕೊಡುಗೆ ಏನಾದರೂ ಇದೆಯೇ? ನೀವ್ಯಾರಾದರೂ ಅದಕ್ಕೆ ಹಣ ಹಾಕಿದ್ದೀರಾ? ನೀವೇನಾದರೂ ಸಹಾಯ ಮಾಡಿದ್ದೀರಾ? ಕಾಂಗ್ರೆಸ್‌ನವರು ಮಂಗಳೂರು ನಗರ ಪಾಲಿಕೆಯಲ್ಲಿ ಈ ಬಗ್ಗೆ ಆದೇಶ ಮಾಡುವಾಗ ಬ್ರಿಟಿಷರ ಕುರುಹಾಗಿದ್ದ ಹಳೆಯ ಲೇಡಿಹಿಲ್ ಎಂಬ ಹೆಸರನ್ನು ಬದಲಿಸಲು ಒಪ್ಪಲಿಲ್ಲ. ಅದು ಭಾರತೀಯ ಕ್ರೈಸ್ತರ ಕುರುಹಲ್ಲ. ಅದು ಬ್ರಿಟಿಷರ ನೆರಳು. ಅದನ್ನು ತೆಗೆದುಹಾಕಬೇಕು ಎಂಬುದು ತುಳುನಾಡಿನ ಮಣ್ಣಿನ ಆಗ್ರಹವಾಗಿತ್ತು. ಆದರೆ ಅದನ್ನು ತೆಗೆದುಹಾಕಲು ವಿರೋಧ ಮಾಡಿದವರು ಕಾಂಗ್ರೆಸ್‌ನವರು ಮತ್ತು ಇದೇ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್.
* ಸ್ಥಳೀಯ ಚಾನೆಲ್‌ನಲ್ಲಿ ಈ ಬಗ್ಗೆ ಅವರು ಸಂದರ್ಶನ ಕೊಟ್ಟಿದ್ದಾರೆ. ಅದರ ದಾಖಲೆಯನ್ನು ತೋರಿಸಬಲ್ಲೆ.
* ಈ ಸಲಹೆ ಕೊಟ್ಟವರು ಬಿರುವೆರ್ ಕುಡ್ಲದ ಉದಯ ಪೂಜಾರಿ. ನಾಲ್ಕು ವರ್ಷಗಳಿಮದ ಕಾಂಗ್ರೆಸ್‌ನ ಎಲ್ಲ ನಾಯಕರ ಮನೆಗೆಳಿಗೆ ಹೋಗಿದ್ದೆ. ನಾರಾಯಣ ಗುರು ವೃತ್ತ ಮಾಡಬೇಕು ಅಂತ. ಪದ್ಮರಾಜ್ ಸಹಿತ ಯಾವ ನಾಯಕರೂ ನನ್ನ ಮಾತಿಗೆ ಬೆಂಬಲ ನೀಡಲಿಲ್ಲ. ಕೊನೆಗೆ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತರ ಬಳಿಗೆ ಹೋದೆ. ಆಗ ಅವರು ಮೇಯರ್ ಆಗಿದ್ದ ದಿವಾಕರ ಪಾಂಡೇಶ್ವರ ಅವರ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಿದರು.
* ಅನಂತರ ಬಂದ ಪ್ರೇಮಾನಂದ ಶೆಟ್ಟ ಆ ಮನವಿ ಸ್ವೀಕರಿಸಿ ನಗರಪಾಲಿಕೆಯಲ್ಲಿ ಅನುಮೋದನೆ ಪಡೆದು ಮೂಡಾ ಅಧ್ಯಕ್ಷರಾಗಿದ್ದ ರವಿಶಂಕರ ಮಿಜಾರ್ ಅವರಿಗೆ ಹೇಳಿ ಮೂಡಾದ ಮೂಲಕ 62 ಲಕ್ಷ ವೆಚ್ಚದಲ್ಲಿ ಆ ವೃತ್ತ ಆಯಿತು. ಇದರಲ್ಲಿ ಕಾಂಗ್ರೆಸ್ ಕೊಡುಗೆ ಏನೂ ಇಲ್ಲ.
* ಮೋದಿ ಅವರು ಪ್ರತಿಮೆಗೆ ಮಾಲೆ ಹಾಕುವಾಗ ಏನೂ ಆಭಾಸ ಆಗಿಲ್ಲ. ಮೋದಿಯವರು ನಾರಾಯಣಗುರುಗಳ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೇರಳದಲ್ಲಿ ಶಿವಗಿರಿ ಮಠಕ್ಕೆ 72 ಕೋಟಿ ರೂ ನೆರವನ್ನು ಪ್ರಧಾನಿ ಮೋದಿಯವರು ಕೊಟ್ಟಿದ್ದಾರೆ.
* ಶಿವಗಿರಿಗೆ ಹೋದರೆ ಶಂಕರ ಮಠವಿದೆ. ಅಲ್ಲಿ ಕೇಂದ್ರದ ಅಧಿಕಾರಿಗಳು ಅಲ್ಲಿ ನಿಂತು ಸ್ವತಃ ಶಿವಗಿರಿಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ 2013ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಶಿವಿಗಿರಿಯ ಅಭಿವೃದ್ಧಿಗೆ ನೆರವು ಕೋರಿ ಅಲ್ಲಿಗೆ ಮಠದವರು ಹೋಗಿದ್ದರು.
* 2014ರಲ್ಲಿ ಪ್ರಧಾನಿಯಾದ ಬಳಿಕ ಮೋದಿಯವರು ನೆರವು ನೀಡಿದರು. ಆಗ ಅವರು ಹೇಳಿದ್ದರು ನಾರಾಯಣಗುರುಗಳ ಅನುಗ್ರಹದಿಂದ ಪ್ರಧಾನಿಯಾಗಿದ್ದೇನೆ ಎಂದು. ಆ ಭಕ್ತಿಯಿಂದ ಅವರು ನಾರಾಯಣಗುರು ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಬೇಕಾದರೆ ಕಾಂಗ್ರೆಸ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಂದು ಮಾಲೆ ಹಾಕಲಿ, ಯಾರು ಬೇಡ ಅನ್ನುತ್ತಾರೆ?
* ಮೋದಿಯರವಲ್ಲದೆ ಬೇರೆ ಯಾರು ಮಾಲಾರ್ಪಣೆ ಮಾಡಬೇಕಿತ್ತು. ಸಿದ್ದರಾಮಯ್ಯ ಡಿಕೆ ಅಂತಹ ಹಿಂದೂ ವಿರೋಧಿಗಳು ಮಾಲೆ ಹಾಕಬೇಕಿತ್ತೆ?
* ನಾರಾಯಣಗುರುಗಳನ್ನು ಅವಮಾನಿಸಿದವರು ಈ ಕಾಂಗ್ರೆಸ್‌ನವರು. ಕೇರಳದವರು ಗಣತಂತ್ರ ದಿವಸಕ್ಕೆ ನಾರಾಯಣಗುರುಗಳ ಟ್ಯಾಬ್ಲೋ ಕಳಿಸಿರಲಿಲ್ಲ. ಜಟಾಯುವಿನ ಟ್ಯಾಬ್ಲೋ ಕಳಿಸಿದ್ದರು. ಆದರೆ ನಾರಾಯಣಗುರುಗಳ ಟ್ಯಾಬ್ಲೋಗೆ ಅವಕಾಶ ನೀಡಲಿಲ್ಲ ಎನ್ನುವ ಅಪಪ್ರಚಾರದ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು.
ಅಲ್ಲಿನ ಸತ್ಯಾನಂದ ಸ್ವಾಮಿಗಳ ಜತೆ ಖಾಸಗಿ ಚಾನೆಲ್ ಸಂದರ್ಶನ ನಡೆಸಿತ್ತು. ಆಗ ಅವರು ಹೇಳಿದ್ದರು.
* ಕೇರಳದ ಮುಖ್ಯಮಂತ್ರಿ ಕಮ್ಯುನಿಸ್ಟ್ ಪಿಣರಾಯಿ ವಿಜಯನ್ ಒಬ್ಬ ತೀಯಾ. ಅಂದರೆ ಕೇರಳದ ಬಿಲ್ಲವ ಸಮುದಾಯಕ್ಕೆ ಸೇರಿದವರು. ಶಿವಗಿರಿ ಮಠದ ಸ್ವಾಮೀಜಿಗಳನ್ನು ಬಂದಿಸಿದ್ದಾರೆ. ಅಲ್ಲಿನ ಸನ್ಯಾಸಿಗಳಿಗೆ ತೊಂದರೆ ಮಾಡಿದ್ದಾರೆ. ನಾಲ್ಕು ವರ್ಷಗಳ ಕಾಳ ಶಿವಗಿರಿ ಮಠವನ್ನು ಸರಕಾರದ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ.
ಆಗ ಅಲ್ಲಿನ ತೀಯಾ ಸಮುದಾಯವರು ಕಮ್ಯೂನಿಸ್ಟ್ ಬಿಟ್ಟು ಬಿಜೆಪಿ ಸೇರಿದರು.
==========
ಈ ಪದ್ಮರಾಜ್ ಕಾಂಗ್ರೆಸ್ ಸದಸ್ಯನೇ ಅಲ್ಲ, ಆದರೆ ಕಾಂಗ್ರೆಸ್ ಟಿಕೆಟ್‌ಗೆ ಆಗಲೇ ಪ್ರಯತ್ನ ನಡೆಸಿದ್ದರು. ಸ್ಚತಃ ಪದ್ಮರಾಜ್ ತಾನು ಕಾಂಗ್ರೆಸ್ ಸದಸ್ಯನೇ ಅಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಸದಸ್ಯ ಆಗಿದ್ದು 6 ತಿಂಗಳ ಹಿಂದೆ. ಅಂತಹ ವ್ಯಕ್ತಿ ಈಗ ಲೋಕಸಭೆ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಟಿಕೆಟ್ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಇಲ್ಲಿ ದಿವಾಳಿಯಾಗಿದೆ. ಅದಕ್ಕೆ ಸರಿಯಾದ ಅಭ್ಯರ್ಥಿಗಳೇ ಇಲ್ಲ. ಹಾಗಾಗಿ ಪದ್ಮರಾಜರನ್ನು 6 ತಿಂಗಳ ಹಿಂದೆ ಸದಸ್ಯನಾಗಿ ಮಾಡಿಕೊಂಡು ಈಗ ಟಿಕೆಟ್ ನೀಡಿದ್ದಾರೆ.
ಪದ್ಮರಾಜ್ ಗೆಲ್ಲುವ ಯಾವ ಭರವಸೆ, ಉದ್ದೇಶ ಕಾಂಗ್ರೆಸ್‌ಗೆ ಇಲ್ಲ. ಪದ್ಮರಾಜ್ಗೆಎ ಟಿಕೆಟ್ ಕೊಟ್ಟಿದ್ದು ಗೆಲ್ಲಿಸುವ ಉದ್ದೇಶಕ್ಕಲ್ಲ, ಇಲ್ಲಿ ಬಿಲ್ಲವರು, ಬಂಟರು ಮತ್ತು ಇತರ ಜಾತಿಗಳನ್ನು ಒಡೆದು ಮುಸ್ಲಿಂ ಲೀಗ್‌ಗೆ ಅನುಕೂಲ ಮಾಡಿಕೊಡಬೇಕು ಎಂಬ ಒಂದೇ ಉದ್ದೇಶದಿಂದ ಕಾಂಗ್ರೆಸ್ ಪದ್ಮರಾಜ್ ಅವರ್‍ನು ಟೂಲ್ ಕಿಟ್ ಮಾಡಿಕೊಂಡಿದೆ.
ಚುನಾವಣೆ ಮುಗಿದ ಬಳಿಕ ಸತ್ಯ ಎಲ್ಲರಿಗೂ ಅರ್ಥವಾಗುತ್ತದೆ. ಸತ್ಯ ಸಾಯುವುದಿಲ್ಲ, ಸುಳ್ಳು ಯಾವತ್ತೂ ಬದುಕುವುದಿಲ್ಲ.
==========
ಕಾಂಗ್ರೆಸ್ ಅಂದರೆ ಹಿಂದೂ ವಿರೋಧಿಗಳ ವಾಸಸ್ಥಾನ, ಸುಳ್ಳುಗಾರರ ವಾಸಸ್ಥಾನ, ಸನಾತನ ವಿರೋಧಿಗಳ ವಾಸ ಸ್ಥಾನ., ಮುಸ್ಲಿಂ ಲೀಗ್, ಎಸ್‌ಡಿಪಿಐ ಪಿಎಫ್‌ಐನವರ ವಾಸಸ್ಥಾನ ಕಾಂಗ್ರೆಸ್.
ಬಿಲ್ಲವರು ಬಿಲ್ಲವರು ಎಂದು ಈಗ ಜಾತಿಯ ವಿಚಾರ ಎತ್ತುವವರು, ಹಿಂದೆ ಬಿಲ್ಲವರ ಪ್ರಶ್ನಾತೀತ ನಾಯಕರಾದ ಜನಾರ್ದನ ಪೂಜಾರಿಯವರನ್ನು ಕಾಂಗ್ರೆಸ್‌ನ ಒಬ್ಬ ಮಂತ್ರಿ ಹೀನಾಯವಾಗಿ ಬೈದು ಅವಮಾನಿಸಿದಾಗ ಬಿಲ್ಲವ ಮಹಾಮಂಡಲದ ಯಾರೂ ಉಸಿರೆತ್ತಲಿಲ್ಲ, ಈಗ ಬಿಲ್ಲವರ ಹೆಸರಿನಲ್ಲಿ ಓಟು ಕೇಳುತ್ತಿರುವ ಈ ಪದ್ಮರಾಜ್ ಕೂಡ ಬಾಯಿ ಬಿಡಲಿಲ್ಲ. ಪೂಜಾರಿಯವರನ್ನು ಅವಮಾನಿಸಿದ ಆ ಸಚಿವನನ್ನು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಸನ್ಮಾನ ಮಾಡಿದರು. ಇದು ಬಿಲ್ಲವರಿಗೆ ಮಾಡಿದ ಅವಮಾನ ಅಲ್ಲವೆ? ನಾರಾಯಣ ಗುರುಗಳಿಗೆ ಅವಮಾನ ಅಲ್ಲವೆ?
ಪೂಜಾರಿಯವರು ಈ ದೇಶದಲ್ಲಿ ರಾಮ ಮಂದಿರ ಆಗಬೇಕು. ಅದು ದೇಶದ ಅಸ್ಮಿತೆಯ ಪ್ರಶ್ನೆಯ ಎಂದು ಹೇಳಿಕೆ ನೀಡಿದರು. ಭ್ರಷ್ಟಾಚಾರ ನಿರ್ಮೂಲನ ಆಗಬೇಕಾದರೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು ಎಂದರು. ಇದು ಕಾಂಗ್ರೆಸ್‌ನ ಅಭಿಪ್ರಾಯ ಅಲ್ಲ, ನನ್ನ ಸ್ವಂತ ಅಭಿಪ್ರಾಯ ಎಂದರು.
ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ನ ಒಬ್ಬ ಅಲ್ಪಸಂಖ್ಯಾತ ಪೂಜಾರಿಯವರನ್ನು ಎನ್‌ಕೌಂಟರ್ ಮಾಡಿ ಕೊಲ್ಲಬೇಕು., ಪಕ್ಷದಿಂದ ವಜಾ ಮಾಡಬೇಕು ಎಂದು ಹೇಳಿಕೆ ಕೊಟ್ಟ. ಇಂದಿನ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೂಡ ಜನಾರ್ದನ ಪೂಜಾರಿಯವರನ್ನು ಉಚ್ಚಾಟಿಸಬೇಕು ಎಂದು ಮನವಿ ಕೊಟ್ಟರು. ಆಗ ಒಬ್ಬ ಹರಿಕೃಷ್ಣ ಬಂಟ್ವಾಳರನ್ನು ಹೊರತುಪಡಿಸಿ ಈ ಜಿಲ್ಲೆಯ ಬಿಲ್ಲವ ನಾಯಕರು, ಬಿಲ್ಲವ ಮಹಾಮಂಡಲ ಯಾರೂ ಖಂಡಿಸಲಿಲ್ಲ,
ಬಿಲ್ಲವ ಸಂಘಗಳು, ಬಿಲ್ಲವ ಮಹಾಮಂಡಲ ಆ ಕೆಲಸ ಮಾಡಬೇಕಿತ್ತು. ಬಿಲ್ಲವ ಸಮಾಜವನ್ನು ಜ್ಞಾನವಂತ ಸಮಾಜವನ್ನಾಗಿ ಕಟ್ಟಬೇಕು, ತನ್ನ ಕಾಲಲ್ಲಿ ನಿಂತು ತಾನು ದುಡಿದು ಬದುಕಬೇಕು ಎನ್ನುವ ನಾರಾಯಣಗುರುಗಳ ಉಪದೇಶದಂತೆ ಬದುಕಲು ಇರುವ ಸಂಘಟನೆ. ಆದರೆ ಇವತ್ತು ಬಿಲ್ಲವ ಮಹಾಮಂಡಲದ ಅಧ್ಯಕ್ಷರು ನೇರವಾಗಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಬಿಲ್ಲವರಿಗೆ ಕರೆ ನೀಡುತ್ತಾರೆ.
ಯಾವುದೇ ಜಾತಿ ಸಂಘಗಳು ಈ ರೀತಿಯ ರಾಜಕೀಯ ಮಾಡುವುದಿಲ್ಲ್ಲ, ಮಾಡುವುದೂ ಸಲ್ಲ. ಅದರ ಬೈಲಾದಲ್ಲಿ ಅಂತಹ ಅವಕಾಶವೂ ಇಲ್ಲ.
ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ರಾಜೇಶ್ ಕೋಟ್ಯಾನರೇ, ನೀವು ಪದ್ಮರಾಜರ ಪರ ಓಟು ಕೇಳುವುದು ತಪ್ಪಲ್ಲ. ಆದರೆ ನೀವು ಅದಕ್ಕೆ ಮೊದಲು ಬಿಲ್ಲವ ಮಹಾಮಂಡಲದ ಅಧ್ಯಕ್ಷತೆಗೆ ರಾಜೀನಾಮೆ ಕೊಡಬೇಕು. ನಂತರ ಏನು ಬೇಕಾದರೂ ಮಾಡಿ. ಅಧ್ಯಕ್ಷತೆಯಲ್ಲಿ ಮುಂದುವರಿಯುವುದೇ ಆದರೆ ಬಿಲ್ಲವ ಮಹಾಮಂಡಲದ ಹೆಸರು ಬದಲಾಯಿಸಿ ಕಾಂಗ್ರೆಸ್ ಮಹಾಮಂಡಲ ಅಂತ ಮಾಡಿಕೊಳ್ಳಿ.
ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಅಭ್ಯರ್ಥಿ. ಅಲ್ಲಿ ಅವರ ಪರವಾಗಿಯೂ ಬಿಲ್ಲವ ಮಹಾಮಂಡಲದ ಅಧ್ಯಕ್ಷರು ಓಟು ಕೇಳಬೇಕಲ್ಲವೆ? ಆದರೆ ಅಲ್ಲಿ ಅವರು ಜಯಪ್ರಕಾಶ್ ಹೆಗ್ಡೆ ಪರ ಮತ ಕೇಳುತ್ತಾರೆ. ಅಂದರೆ ನಾವು ಇಲ್ಲಿರುವ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕು.
ವಿನಯಕುಮಾರ್ ಸೊರಕೆ ಯಾರ ಪರ ಓಟು ಕೇಳುತ್ತಿದ್ದಾರೆ. ಒಂದು ಸಮುದಾಯದ ಸಂಘವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ನೋಡಿ. ಇದು ಬಿಲ್ಲವ ಸಮುದಾಯಕ್ಕೆ ಅವಮಾನ. ನಿಮ್ಮದು ಇಲ್ಲೊಂದು ಗೆಜ್ಜೆ, ಅಲ್ಲೊಂದು ಗೆಜ್ಜೆ,.
ಇದೇನು ದೊಂಬರಾಟವೇ? ನೆನಪಿಟ್ಟುಕೊಳ್ಳಿ. ಬಿಲ್ಲವ ಅಥವಾ ಒಂದು ಜಾತಿಯ ಓಟಿನಿಂದ ತುಳುನಾಡಿನಲ್ಲಿ ಯಾರಿಗೂ ಗೆಲ್ಲಲಾಗದು. ಎಲ್ಲ ಸಮುದಾಯಗಳಲ್ಲೂ ಜಾತಿವಾದಿಗಳಿದ್ದಾರೆ. ಆದರೆ ಜಾತಿವಾದಿಗಳಿಂದ ಈ ತುಳುನಾಡಿನಲ್ಲಿ ಗೆಲಲ್ಲು ಸಾಧ್ಯವಿಲ್ಲ. ಜಾತಿ ಭೇದವಿಲ್ಲದ ಹಿಂದುತ್ವದಿಂದ ಮಾತ್ರ ಗೆಲ್ಲಲು ಸಾಧ್ಯ. ಜಾತಿವಾದಿಗಳಿಗೆ ಭವಿಷ್ಯ ಇಲ್ಲ. ಜಾತಿ ಹೆಸರಿನಲ್ಲಿ ಯಾರೂ ಸಾಧನೆ ಮಾಡಿದ್ದೇ ಇಲ್ಲ, ಪ್ರಸಿದ್ಧಿ ಪಡೆದಿದ್ದೇ ಇಲ್ಲ.
ಜಗತ್ತು ಮನ್ನಣೆ ಕೊಡುವುದು ಜ್ಞಾನಕ್ಕೆ ಹೊರತು ಜಾತಿಗೆ ಅಲ್ಲ. ಅದನ್ನೇ ಬ್ರಹ್ಮಶ್ರೀ ನಾರಾಯಣಗುರುಗಳು ಬೋಧಿಸಿದ್ದು, ವಿದ್ಯಾವಂತನಾಗು, ಜ್ಞಾನವಂತನಾಗು ಎಂದಿದ್ದು. ಸ್ವಂತ ಕಾಲಲ್ಲಿ ನಿಂತು ಸ್ವಂತ ದುಡಿಮೆಯಿಂದ ಮನುಷ್ಯನಾಗಿ ಬಾಳು ಎಂದು ಅವರು ಬೋಧಿಸಿದರು.
ಬಿಲ್ಲವರು ದಾರಿ ತಪ್ಪಬೇಡಿ. ವಿಲನ್ ಆಗಬೇಡಿ. ನಿಜವಾದ ಬಿಲ್ಲವರೇ ಆಗಿದ್ದರೆ ಹಿಂದೂ ಹೀರೋಗಳಾಗಿ. ಭಾರತದ ಸಂಸ್ಕೃತಿ ಪರಂಪರೆಯ, ಸನಾತನ ಧರ್ಮದ ಹೀರೋಗಳಾಗಿ. ಕಾಂಗ್ರೆಸ್‌ನ ಟೂಲ್‌ಕಿಟ್‌ನ ಭಾಗವಾಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಹರಿಕೃಷ್ಣ ಬಂಟ್ವಾಳ್ ಕರೆ ನೀಡಿದರು.
ತುಳುನಾಡು ನಿಮ್ಮನ್ನು ಯಾವತ್ತೂ ಗೌರವಿಸದು. ಮಣ್ಣು ಮುಕ್ಕಿಸುತ್ತದೆ.
ತುಳುನಾಡಿನಲ್ಲಿ ನಾರಾಯಣಗುರುಗಳಿಗೆ ಅವಮಾನ ಎನ್ನುತ್ತಾರೆ. ನಿಗಮ ಮಾಡಿದ್ದು ಬಿಜೆಪಿ, ಎರಡು ಜನ ಸಚಿವರನ್ನು ಕೊಟ್ಟಿದ್ದು ಬಿಜೆಪಿ.
ಇದೇ ಕಾಂಗ್ರೆಸ್ ಸರಕಾರ ಬಜೆಟ್ನಲ್ಲಿ ನಾರಾಯಣ ಗುರು ನಿಗಮಕ್ಕೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಆದರೆ ಇದೇ ಸಿದ್ದರಾಮಯ್ಯ ಮಂಗಳೂರಿನಲ್ಲಿ ಹಜ್ ಭವನ ನಿಮಾಆFಣಕ್ಕೆ 10 ಕೋಟಿ, ರಾಜ್ಯದ ವಕ್ಫ್ ಆಸ್ತಿಗಳ ರಕ್ಷಣೆಗೆ 100 ಕೋಟಿ, ಮುಸ್ಲಿಂ ಮಹಿಳಾ ಸ್ವಸಹಾಯ ಗುಂಪುಗಳ ರಚನೆಗೆ 10 ಕೋಟಿ, ಮೌಲಾನಾ ಆಜಾದ್ ಶಾಲೆ ನಿರ್ಮಾಣಕ್ಕೆ 100 ಕೋಟಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 399 ಕೋಟಿ ಕೊಟ್ಟಿದ್ದಾರೆ. ಅಲ್ಪಸಂಖ್ಯಾತ ಉದ್ಯಮಿಗಳ ಕೈಗಾರಿಕೆಗಳ ಅಭಿವೃದ್ಧಿಗೆ ಕೆಎಸ್‌ಎಫ್‌ಸಿಇ ಇಂದು 10 ಕೋಟಿ ಕೊಟ್ಟಿದ್ದಾರೆ. ಕ್ರೈಸ್ದತ ಸಮುದಾಯಕ್ಕೆ 200 ಕೋಟಿ ಕೊಟ್ಟಿದ್ದಾರೆ.
ಹಾಗಾದರೆ ಯಾರು ಬಿಲ್ಲವರನ್ನು ಅವಹೇಳನ ಮಾಡಿದ್ದು, ಯಾರು ನಿರ್ಲಕ್ಷ್ಯ ಮಾಡಿದ್ದು?
ನಾರಾಯಣಗುರು ವಸತಿಶಾಲೆಯನ್ನು ಬಿಜೆಪಿ ಸರಕಾರವಿದ್ದಾಗ ಬಂಟ್ವಾಳದ ಪುಂಜಾಲಕಟ್ಟೆಯಲ್ಲಿ ಪ್ರಾರಂಭಿಸಲಾಗಿತ್ತು. ಬಿಜೆಪಿ ಸರಕಾರ ಹೋದ ನಂತರ ಅದಕ್ಕೆ ಒಂದು ರೂಪಾಯಿಯೂ ಸಿಕ್ಕಿಲ್ಲ. ಕೋಟಿ ಚೆನ್ನಯ ಸೈನಿಕ ತರಬೇತಿ ಕೇಂದ್ರವನ್ನು ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿಯಲ್ಲಿ ಆರಂಭಿಸಿದರು. ಆದರೆ ಅದಕ್ಕೂ ಈಗಿನ ಕಾಂಗ್ರೆಸ್ ಸರಕಾರದಿಂದ ಅನುದಾನವಿಲ್ಲ. ಹಾಗಾದರೆ ಯಾರು ಬಿಲ್ಲವರಿಗೆ ಅನ್ಯಾಯ ಮಾಡಿದ್ದು?
ಆದರೆ ಓಟು ನಿಮಗೆ ಬಿಲ್ಲವರದ್ದು ಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಒಬ್ಬನೇ ಒಬ್ಬ ಸನಾತನ ಧರ್ಮದ ಬಿಲ್ಲವ, ರಾಮ-ಕೃಷ್ಣರನ್ನು ನಂಬುವ ಬಿಲ್ಲವರು ಬಂಟ, ಕುಲಾರ ಯಾವುದೇ ಸಮುದಾಯ ಇರಬಹುದು ಕಾಂಗ್ರೆಸ್‌ಗೆ ವೋಟು ಹಾಕುವುದಿಲ್ಲ.
ಕಡಲಾಯೆ, ಮಡಲಾಯೆ, ಒಕ್ಕೆಲಾಯೆ ಒಂಜೇ ಅಪ್ಪೆನ ಜೋಕುಲು ಎಂಬ ಮಾತು ತುಳುನಾಡಿನಲ್ಲಿದೆ. ನಮ್ಮನ್ನು ವಿಭಜಿಸುವ ಪ್ರಯತ್ನ ಮಾಡಬೇಡಿ. ಅದರಿಂದ ಹಾಳಾಗುವುದು ನೀವೇ ಹೊರತು ನಾವಲ್ಲ ಎಂದು ಕಾಂಗ್ರೆಸ್‌ಗೆ ಅವರು ಸವಾಲು ಹಾಕಿದರು.
ಕಮಲ ಕೆಸರಿನಲ್ಲಿದ್ದರೆ ಚೆನ್ನ, ತೆನೆ ಹೊತ್ತ ಮಹಿಳೆ ಹೊಲದಲ್ಲಿದ್ದರೆ ಚೆನ್ನ, ದಾನ ಧರ್ಮ ಮಾಡುವ ಐ ಅಧಿಕಾರದಲ್ಲಿದ್ದರೆ ಚೆನ್ನ ಎಂದು ಡಿಸಿಎಂ ಡಿಕೆಶಿ ಹೇಳಿದರು. ಆದರೆ ನಿಮ್ಮದು ದಾನ ಧರ್ಮ ಮಾಡುವ ಕೈಯೇ? ಎಂದು ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು.
ಕುಕ್ಕರ್ ಬಾಂಬಿಟ್ಟ ಶಾರೀಕ್ ನಿಮ್ಮ ಬ್ರದರ್, ನಿಮ್ಮ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೆ ಬೆಂಕಿಯಿಟ್ಟವರು ನಿಮ್ಮ ಬ್ರದರ್ಸ್.
ಪ್ರವೀಣ್ ನೆಟ್ಟಾರ್, ಶಿವಮೊಗ್ಗದಲ್ಲಿ ಹರ್ಷನನ್ನು ಮೂಡುಬಿದಿರೆಯಲ್ಲಿ ಸುಶಾಂತ್‌ನನ್ನು ಕೊಂದ ಕೈ , ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠರನ್ನು ಕೊಂದ ಕೈ ಗೆ ಬೆಂಬಲ ನೀಡುವ ಕೈ ಅಲ್ಲವೇ ನಿಮ್ಮದು?
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನ ಆಪ್ತ ಅಂಬಿಕಾಪತಿಯ ಮನೆಯಲ್ಲಿ 42 ಕೋಟಿ ರೂ ಹಣ ಸಿಕ್ಕಿದ್ದು ದಾನ ಧರ್ಮದ ಹಣವೆ? ಎಂದು ಕಟುವಾಗಿ ಪ್ರಶ್ನಿಸಿದರು.
ಕಮಲ ರಾಮನ ಪಾದದಲ್ಲಿದ್ದರೆ ಚೆನ್ನ, ತೆನೆಹೊತ್ತ ಮಹಿಳೆ ಮನಸಲ್ಲಿದ್ದರೆ ಚೆನ್ನ, ಗೂಂಡಾಗಿರಿ ಮಾಡುವ ಕೈ ಜೈಲಲ್ಲಿದ್ದರೆ ಚೆನ್ನ ಎಂದು ಪ್ರಾಸಬದ್ಧ ಕವನದ ಮೂಲಕ ತಿರುಗೇಟು ನೀಡಿದರು.
ಇವತ್ತಲ್ಲ, ನಾಳೆ ನಿಮಗೆ ಚೊಂಬು ಕೊಡ್ತೇವೆ. ದಾನ ಧರ್ಮ ಮಾಡುವ ಚೊಂಬು ಕೊಡ್ತೇವೆ. ನೀವು ನಮಗೆ ಕೊಡಬೇಕಾಗಿಲ್ಲ. ನಿಮಗೆ ಧಮ್ ಇದ್ದರೆ ಸಿದ್ದರಾಮಯ್ಯ, ಡಿಕೆಶಿಯವರೇ, ನಮ್ಮ ಸರಕಾರವಿದ್ದಾಗ ರೈತರಿಗೆ ಕೊಡುತ್ತಿದ್ದ 4,000 ರೂ,ಗಳನ್ನು ತೆಗೆದು ನಿಮ್ಮ ಕಿಸೆಗೆ ಹಾಕಿಕೊಂಡ ನೀವು ಕೊಟ್ಟಿದ್ದೇನು?
ಗಂಡಸರ ಕಿಸೆಯಿಂದ ತೆಗೆದು ಹೆಂಗಸರಿಗೆ ಕೊಟ್ಟಿದ್ದೀರಿ ಅಷ್ಟೆ. ಚುನಾವಣೆ ಬಳಿಕ ಕರ್ನಾಟಕ ಸರಕಾರ ದಿವಾಳಿಯಾಗುತ್ತದೆ. ಯಾವನೇ ಒಬ್ಬ ಶಾಸಕ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿದೆಯೇ? ಸುಳ್ಳು ಗ್ಯಾರಂಟಿಗಳ ನೆಪದಲ್ಲಿ ರಾಜ್ಯದ ಅರ್ಥವ್ಯವಸ್ಥೆಯನ್ನು ಹದಗೆಡಿಸಿದ ಕಾಂಗ್ರೆಸ್‌ಗೆ ಅಧಿಕಾರದಲ್ಲಿರುವ ಯಾವುದೇ ನೈತಿಕತೆ ಇಲ್ಲ ಎಂದು ಹರಿಕೃಷ್ಣ ಬಂಟ್ವಾಳ್ ಪ್ರತಪಾದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ