ಜಿಹಾದಿಗಳಿಗೆ ಕಾಂಗ್ರೆಸ್ ಸರಕಾರ ಪ್ರೋತ್ಸಾಹ: ಕ್ಯಾ ಬ್ರಿಜೇಶ್ ಚೌಟ ಖಂಡನೆ

Upayuktha
0


ಮಂಗಳೂರು: ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ನೇಹಾಳನ್ನು ಬರ್ಬರವಾಗಿ ಹತ್ಯೆ ನಡೆಸಿರುವುದನ್ನು ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ.


ಕಾಂಗ್ರೆಸ್ ಸರಕಾರದ ಅತಿಯಾದ ಓಲೈಕೆ ನೀತಿಗೆ ಮುಗ್ದ ಹಿಂದೂ ಯುವತಿ ಬಲಿಯಾಗಿದ್ದಾಳೆ. ಓಟಿಗಾಗಿ ಎಸ್ ಡಿಪಿಐ ಜತೆ ಕೈಜೋಡಿಸಿರುವ ಕಾಂಗ್ರೆಸ್  ಜಿಹಾದಿಗಳಿಗೆ ಪ್ರೋತ್ಸಾಹ ನೀಡುವ ಹೀನಕೃತ್ಯಕ್ಕೆ ಇಳಿದಿದೆ. ಇದರ ಪರಿಣಾಮ ಕರ್ನಾಟಕದಲ್ಲಿ ಹಿಂದೂಗಳು ಸದಾ ಆತಂಕದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದ ಜೈ ಶ್ರೀರಾಮ್ ಘೋಷಣೆ ಕೂಗಿದರೆ ಹಲ್ಲೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನ ಈ ನೀಚ ರಾಜಕೀಯಕ್ಕೆ ಚುನಾವಣೆಯಲ್ಲಿ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.


ಕಾಂಗ್ರೆಸ್ ಕಾರ್ಪೊರೇಟರ್ ನ ಪುತ್ರಿಯಾಗಿರುವ ನೇಹಾಳನ್ನು ಅಮಾನುಷವಾಗಿ ಮತಾಂಧ ಹತ್ಯೆ ಮಾಡಿದ್ದಾನೆ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಈ ಹತ್ಯೆಗೆ ಏನು ಹೇಳುತ್ತಾರೆ? ಘಟನೆಯನ್ನು ಖಂಡಿಸುವ ಮಾನವೀಯತೆಯೂ ಅವರಿಗಿಲ್ಲ. ಓಟಿಗಾಗಿ ಕಾಂಗ್ರೆಸ್ ಯಾವ ಹಂತಕ್ಕೂ ಇಳಿಯಲಿದೆ. ನಾರಿಶಕ್ತಿ ಒಂದಾಗಿ ಜಿಹಾದಿ ಮನಸ್ಥಿತಿಯ ಕಾಂಗ್ರೆಸ್ ಗೆ ಸೂಕ್ತ ಉತ್ತರ ನೀಡಬೇಕಾಗಿದೆ. ಹಿಂದೂ ಹೆಣ್ಣು ಮಕ್ಕಳ ರಕ್ಷಣೆಯನ್ನು ಗಮನದಲ್ಲಿರಿಸಿ ಮತ ಚಲಾಯಿಸಬೇಕು ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top