ಎಸ್.ಡಿ.ಎಂ ವಾರ್ಷಿಕ ಸಂಚಿಕೆ ‘ಮನೀಷಾ’ಕ್ಕೆ ಅತ್ಯುತ್ತಮ ಮ್ಯಾಗಜಿನ್ ಗರಿ

Upayuktha
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು 2022-23ನೇ ಶೈಕ್ಷಣಿಕ ಸಾಲಿನಲ್ಲಿ ಹೊರತಂದ ‘ಮನೀಷಾ’ ವಾರ್ಷಿಕ ನಿಯತಕಾಲಿಕವು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಕಾಲೇಜು ಮ್ಯಾಗಝಿ಼ನ್’ ಎಂಬ ಮನ್ನಣೆಗೆ ಪತ್ರವಾಗಿದೆ.


ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ. ಕುಮಾರ ಹೆಗ್ಡೆ ಅವರಿಗೆ ‘ಮನೀಷಾ’ ಸಂಚಿಕೆಯ ವಿನೂತನ ಪ್ರಯೋಗಕ್ಕಾಗಿ ಪ್ರಥಮ ಬಹುಮಾನಿತ ಮನ್ನಣೆಯ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಆಡಳಿತಾಂಗ ಕುಲಸಚಿವರಾದ ಕೆ.ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವರಾದ ಡಾ.ಎಚ್.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಡಾ.ಸಂಗಪ್ಪ ವೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಮಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಡಾ.ಪರಿಣಿತಾ ಅವರ ಅಧ್ಯಕ್ಷತೆಯ ಕಾಲೇಜು ಮ್ಯಾಗಝೀನ್ ತಜ್ಞರ ಆಯ್ಕೆ ಸಮಿತಿಯು ವಿ.ವಿ. ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ ವಾರ್ಷಿಕ ಸಂಚಿಕೆಗಳನ್ನು ಪರಿಶೀಲಿಸಿ ‘ಮನೀಷಾ’ ಸಂಚಿಕೆಯನ್ನು ಮೊದಲ ಬಹುಮಾನಕ್ಕೆ ಆಯ್ಕೆ ಮಾಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಡಾ. ಪರಿಣಿತಾ ಅವರು ‘ಮನೀಷಾ’ ಸಂಚಿಕೆಯ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ದಕ್ಷಿಣ ಕನ್ನಡ, ಉತ್ತರ ಕನ್ನಡದ ಭಾಷಿಕ ಸೊಗಡಿನ ಬರಹಗಳು ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳು ಬರೆದ ಬರಹಗಳು ‘ಮನೀಷಾ’ ಸಂಚಿಕೆಯಲ್ಲಿವೆ.


ಸಾಹಿತ್ಯ, ಕಲೆ ಮತ್ತು ಸ್ಥಳೀಯ ಆರಾಧನಾ ವಿಧಾನಗಳ ಕುರಿತ ಲೇಖನಗಳು ಈ ಸಂಚಿಕೆಯನ್ನು ವಿಭಿನ್ನವಾಗಿಸಿವೆ. ಸಮಕಾಲೀನವೆನ್ನಿಸುವ ಆಲೋಚನಾ ಕ್ರಮಗಳೊಂದಿಗೆ ಭಾಷೆ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳನ್ನು ದಾಖಲಿಸುವ ಪ್ರಯೋಗಶೀಲತೆಯ ಕಾರಣಕ್ಕಾಗಿ ಎಸ್.ಡಿ.ಎಂ ಕಾಲೇಜಿನ ‘ಮನೀಷಾ’ ಸಂಚಿಕೆಯನ್ನು ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು ಎಂದು ಡಾ.ಪರಿಣಿತಾ ತಿಳಿಸಿದರು.


ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಮನೀಷಾ’ ಸಂಚಿಕೆಯ ಸಂಪಾದಕೀಯ ಮಂಡಳಿಯ ಡಾ.ರಾಜಶೇಖರ

ಹಳೆಮನೆ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಶೆಟ್ಟಿ ಅವರು ಭಾಗವಹಿಸಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top