ಬೆಂಗಳೂರು: ನಾಟ್ಯ ಕಲೆಯು ಭಾರತೀಯ ಕಲಾ ಪ್ರಕಾರದ ಶ್ರೀಮಂತ ಕಲೆ ಇದರ ಅಭ್ಯಾಸದಿಂದ ಮಕ್ಕಳ ಮನಸ್ಸು ಪ್ರಫುಲ್ಲಗೊಂಡು ಏಕಾಗ್ರತೆ, ಬುದ್ಧಿಮತ್ತೆ, ದೇಹ ಸೌಂದರ್ಯ ಪ್ರಕಟಗೊಳ್ಳಲು ಸಹಕಾರಿಯಾಗಬಲ್ಲದು ಎಂದು ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಇವರು ಅಭಿಪ್ರಾಯ ಪಟ್ಟರು.
ಅವರು ಭರತಾಂಜಲಿ ರಿ ಕೊಟ್ಟಾರ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ನೃತ್ಯ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಅತಿ ಮುಖ್ಯ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳ ಬಗ್ಗೆ , ನಮ್ಮ ಪುರಾಣ ಪುರುಷರ ಬಗ್ಗೆ ಅರಿವು ಮೂಡಿಸಿದಾಗ ಅವರು ಈ ದೇಶದ ಅಸ್ತಿಯಾಗಬಲ್ಲರು ಎಂದರು. ಕಳೆದ 29 ವರ್ಷಗಳಿಂದ ಈ ಪ್ರದೇಶದ ಮಕ್ಕಳಿಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರಾಮಾಣಿಕವಾಗಿ ನೀಡುತ್ತಿರುವ ಭರತಾಂಜಲಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ವ್ಯವಸ್ಥಾಪನಾ ಸಮಿತಿಯ ವಾದಿರಾಜ ರಾವ್ ಸಾಂಸ್ಕೃತಿಕ ಸಮಿತಿಯ ಚಂದ್ರಹಾಸ ಶೆಟ್ಟಿಗಾರ್, ವಿದುಷಿ ಪ್ರಕ್ಷಿಕಾ ಜೈನ್, ಮೊದಲಾದವರು ಉಪಸ್ಥಿತರಿದ್ದರು. ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ಅಂತರಾಷ್ಟ್ರೀಯ ನೃತ್ಯ ಪಟುಗಳಾದ ಬೆಂಗಳೂರಿನ ಸ್ನೇಹ ನಾರಾಯಣ್, ಯೋಗೀಶ್ ಕುಮಾರ್ ದಂಪತಿಗಳಿಂದ ಯುಗಳ ನೃತ್ಯ ಕಾರ್ಯಕ್ರಮ ಹಾಗು ಶ್ರೀ ಸಿದ್ಧಿ ವಿನಾಯಕ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಕಾರ್ಯಕ್ರಮ ಸಂಪನ್ನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ