ಸ್ಯಾಂಡಲ್ ವುಡ್ ನಲ್ಲಿ ಹೊಸ 'ಅಧ್ಯಾಯ' ಶುರುವಾಗಿದೆ

Upayuktha
0


ಬೆಂಗಳೂರು: ಏನಿದು ಹೊಸ ಅಧ್ಯಾಯ ಅಂತೀರ! ಹೌದು 'ಜೈ ಭವಾನಿ ಕ್ರಿಯೇಷನ್ಸ್' ಎಂಬ ಬ್ಯಾನರ್ ನ ಅಡಿಯಲ್ಲಿ 'ಜೈ ಭವಾನಿ ಕ್ರಿಯೇಶನ್ಸ್' ಸಂಸ್ಥೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ "ಅಧ್ಯಾಯ" ಎಂಬ ಶೀರ್ಷಿಕೆಯ ಚಿತ್ರವು ಈಗಾಗಲೆ ಸೆಟ್ಟೇರಿದ್ದು ಈ ಚಿತ್ರದ ಫಸ್ಟ್ ಲುಕ್ಕನ್ನು ರೇಣುಕಾoಬ ಸ್ಟುಡಿಯೋದಲ್ಲಿ  "ಕನಸಿನ ರಾಣಿ" ನಾಯಕ ನಟಿ ಮಾಲಾಶ್ರೀಯವರು ಬಿಡುಗಡೆ ಮಾಡಿದರು.


ಈ ಚಿತ್ರಕ್ಕೆ ನಾಯಕ ನಟರಾಗಿ ಚೈತನ್ಯ ವಂಜಾರ ರವರು ಅಭಿನಯಿಸಲಿದ್ದಾರೆ, ಈಗಾಗಲೇ ಎರಡು ಚಿತ್ರಕ್ಕೆ ನಾಯಕ ನಟರಾಗಿ ಅಭಿನಯಿಸಿದ ಅನುಭವ ಇವರಿಗಿದ್ದು ಈ ಹಿಂದೆ ರುಧೀರ ಕಣಿವೆ, ನವ ಇತಿಹಾಸ ಹಾಗೂ ಅಥಣಿ ಚಿತ್ರಗಳನ್ನು ನಿರ್ದೇಶಸಿದ್ದ ಸಮರ್ಥ್ ಎಂ. ರವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. 


ಇದೇ ಸಂದರ್ಭದಲ್ಲಿ ನಟ, ನಿರ್ದೇಶಕ ಯತಿರಾಜು, ಪಿ,ಆರ್,ಒ, ಸುಧೀಂದ್ರ ವೆಂಕಟೇಶ್, ನಿರ್ದೇಶಕ ಶ್ರೀ ರಜಿನಿ, ನಟ ದತ್ತಾಶ್ರೀ ಹೆಗಡೆ ಮುಂತಾದವರು ಚಿತ್ರಕ್ಕೆ ಶುಭ ಹಾರೈಸಿದರು.


ಮೇ 01ರಂದು ನಂದಿನಿ ಲೇಔಟ್ ನ 'ಶ್ರೀ ಪಂಚಮುಖಿ ಗಣಪತಿ' ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದ್ದು ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಧ್ಯಾಯ ಬರೆಯುವುದಕ್ಕೆ ಚಿತ್ರತಂಡ ಸಜ್ಜಾಗಿದೆ ಎಂದು ಚಿತ್ರದ ನಾಯಕ ನಟ ಚೈತನ್ಯ ವಂಜಾರ ಹಾಗೂ ನಿರ್ದೇಶಕ ಸಮರ್ಥ್ ರವರು ತಿಳಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top