|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ: ನಾಳೆ ಪ್ರತಿಷ್ಠೆ, ಬ್ರಹ್ಮಲಕಲಶಾಭಿಷೇಕ

ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ: ನಾಳೆ ಪ್ರತಿಷ್ಠೆ, ಬ್ರಹ್ಮಲಕಲಶಾಭಿಷೇಕ

 ಇಂದು ಜೀವೋದ್ವಾಸನೆ



ಬದಿಯಡ್ಕ: ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ೪ನೇ ದಿನ ಬುಧವಾರ ಪ್ರಾತಃಕಾಲ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಗಣಪತಿಹೋಮ, ತತ್ವಹೋಮ, ತತ್ವಕಲಶ ಪೂಜೆ, ತತ್ವಕಲಶಾಭಿಷೇಕ, ಅನುಜ್ಞಾಕಲಶಾಭಿಷೇಕ, ತ್ರಿಕಾಲಪೂಜೆ, ಅಂಕುರಪೂಜೆ, ಮಹಾಪೂಜೆ ಜರಗಿತು. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಪಾಂಡೇಲು ಶಿವಶಂಕರ ಭಟ್ ಕಿಳಿಂಗಾರು ಇವರ ನೇತೃತ್ವದಲ್ಲಿ ಲಕ್ಷ್ಮೀನಾರಾಯಣ ಹೃದಯ ಹವನ ಜರಗಿತು. ಬೆಳಗ್ಗಿನಿಂದ ಸಂಜೆ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. 


ಏಪ್ರಿಲ್ 25 ಗುರುವಾರ (ಇಂದು): 

ಪ್ರಾತಃಕಾಲ ಗಣಪತಿ ಹೋಮ, ತ್ರಿಕಾಲಪೂಜೆ, ಸಂಹಾರತತ್ವ ಹೋಮ, ತತ್ವಕಲಶಪೂಜೆ, ಕುಂಭೇಶಕರ್ಕರಿಪೂಜೆ, ಶಯ್ಯಾಪೂಜೆ, ಅಧಿವಾಸ ಹೋಮ, ತತ್ವಕಲಶಾಭಿಷೇಕ, ಜೀವಕಲಶಪೂಜೆ, ಜೀವೋದ್ವಾಸನೆ, ಜೀವಕಲಶ ಶಯ್ಯೋನ್ನಯನ, ಮಹಾಪೂಜೆ, ಸಂಜೆ ಧ್ಯಾನಾಧಿವಾಸ, ಶಿರಸ್ತತ್ವಹೋಮ, ಪ್ರತಿಷ್ಠಾಹೋಮ, ಪುಣ್ಯಾಹವಾಚನ, ಪ್ರಾಸಾದಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬ್ರಹ್ಮಕಲಶಪೂಜೆ, ಕಲಶಾಧಿವಾಸ ಪೂಜೆ, ಮಹಾಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ಸುರೇಶ ಕಂಬಾರು ಮತ್ತು ಬಳಗದವರಿಂದ ಸಂಗೀತ ಕಛೇರಿ, ಜಯರಾಮ ದೇವಸ್ಯ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಶ್ರೀರಾಮಚರಿತಾಮೃತ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಸ ಜೆ ೫ ಗಂಟೆಗೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಆಗಮಿಸಲಿದ್ದಾರೆ. ರಾತ್ರಿ ಡಾ| ವಿದ್ಯಾಲಕ್ಷ್ಮೀ ನಾಟ್ಯವಿದ್ಯಾನಿಲಯ ಕುಂಬಳೆ ಇವರಿಂದ ನೃತ್ಯಸಂಭ್ರಮ ಜರಗಲಿದೆ. 


ಏಪ್ರಿಲ್ 26 (ನಾಳೆ)ರಂದು ಶ್ರೀದೇವರ ಪ್ರತಿಷ್ಠೆ:

ಪ್ರಾತಃಕಾಲ ೪.೩೦ರಿಂದ ೧೦೮ ತೆಂಗಿನಕಾಯಿ ಮಹಾಗಣಪತಿ ಹೋಮ, ಪ್ರತಿಷ್ಠಾಪಾಣಿ, ೮.೪೮ರಿಂದ ೯.೨೦ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಶಂಕರನಾರಾಯಣ ಸಹಿತ ಸಪರಿವಾರ ಶ್ರೀದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾಬಲಿ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಶ್ರೀಗಳ ಆಶೀರ್ವಚನ, ಸಭಾಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿದುಷಿ ವಿಜಯಲಕ್ಷ್ಮಿ ಹರಿಪ್ರಕಾಶ್ ಬೆದ್ರಡಿ ಕಲ್ಲಕಟ್ಟ ಇವರ ಶಿಷ್ಯೆ ಕು| ಧರಣಿ ಸರಳಿ ಮತ್ತು ಬಳಗದವರಿಂದ ಸಂಗೀತ ಕಛೇರಿ, ಸಂಜೆ ೬.೩೦ರಿಂದ ಸರಳಿ ಈಶ್ವರ ಪ್ರಕಾಶ ಬೆಂಗಳೂರು ಮತ್ತು ಬಳಗದವರಿಂದ ಸ್ವರಸಿಂಚನ, ೬.೩೦ರಿಂದ ತಾಯಂಬಕ, ದೀಪಾರಾಧನೆ, ಶ್ರೀದೇವರ ಬಲಿ, ಉತ್ಸವ ಜರಗಲಿದೆ.

.......

ಯಕ್ಷಗಾನ ತಾಳಮದ್ದಳೆ

ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ ಶ್ರೀಮಹಮ್ಮಾಯಿ ಯಕ್ಷಗಾನ ಕಲಾಸಂಘ ಬಾಯಾರುಪದವು ಇವರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಜರಗಿತು.

...............


ದೈವಿಕ ಶಕ್ತಿಯ ಆರಾಧನೆಯಿಂದ ಎತ್ತರಕ್ಕೇರಲು ಸಾಧ್ಯ: ಸದಾಶಿವ ಶೆಟ್ಟಿ ಕನ್ಯಾನ

ಬದಿಯಡ್ಕ: ನಾವು ನಿರೀಕ್ಷೆ ಮಾಡದೇ ಇರುವ ಸ್ಥಳಕ್ಕೂ ನಮ್ಮನ್ನು ಕರೆದೊಯ್ಯುವ ದೇವರ ಲೀಲೆ ಅಪಾರವಾಗಿದೆ. ದೈವಿಕ ಶಕ್ತಿಯ ಆರಾಧನೆಯಿಂದ ನಾವು ಎತ್ತರಕ್ಕೇರಬಹುದು. ಸದಾ ದೇವರನ್ನು ನೆನೆಯುತ್ತಾ ಮುಂದುವರಿದಾಗ ನಮ್ಮ ಕಾರ್ಯಕೈಗೂಡುತ್ತದೆ ಎಂದು ಮುಂಬಯಿ ಹೇರಂಭ ಇಂಡಸ್ಟ್ರೀಸ್ ಮಾಲಕ, ಕೊಡುಗೈದಾನಿ ಕುಳೂರು ಸದಾಶಿವ ಶೆಟ್ಟಿ ಕನ್ಯಾನ ಅಭಿಪ್ರಾಯಪಟ್ಟರು. 


ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಎರಡನೇ ದಿನ ಸೋಮವಾರ ಅವರು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಭಗವದ್ಭಕ್ತರನ್ನುದ್ದೇಶಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಚಿದಾನಂದ ಆಳ್ವ ಮಂಜಕೊಟ್ಟಗೆ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿ ದಾಮೋದರ ದೇಲಂಪಾಡಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ಯಾಮಭಟ್ ಕೆ.ಎಂ. ವಂದಿಸಿದರು. ಶ್ಯಾಮಪ್ರಸಾದ ಕುಳಮರ್ವ ನಿರೂಪಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post