ಬಿಜೆಪಿ ಮತ್ತೆ 300 ಸೀಟು ಗೆಲ್ಲಬಹುದು: ಪ್ರಶಾಂತ್ ಕಿಶೋರ್

Upayuktha
0


ನವದೆಹಲಿ: ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಹೇಳಿಕೆಯನ್ನು ಒಪ್ಪಿಕೊಂಡ ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಕೇಸರಿ ಪಕ್ಷವು ಕರ್ನಾಟಕ ಹೊರತುಪಡಿಸಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ದುರ್ಬಲವಾಗಿರುವ ರಾಜ್ಯಗಳಲ್ಲಿ ಮತ್ತು ಅಸ್ತಿತ್ವವೇ ಇಲ್ಲದ ಎರಡು ಕಡೆ ತನ್ನ ಸ್ಥಾನಗಳನ್ನು ಮತ್ತು ಮತಗಳ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.


ಸಂವಾದದಲ್ಲಿ ಮಾತನಾಡಿದ ಕಿಶೋರ್, ಬಿಜೆಪಿ ಪ್ರಬಲವಾಗಿರುವ ಕಡೆ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಪಕ್ಷವಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿಗಾಗಲಿ ಗೆಲುವು ಸುಲಭವಾಗಿರಲಿಲ್ಲ. ಆದರೆ ಪ್ರತಿಪಕ್ಷಗಳು ಬಿಜೆಪಿಯನ್ನು ಕಟ್ಟಿಹಾಕುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಮೂರು ವಿಭಿನ್ನ ಮತ್ತು ವಾಸ್ತವಿಕ ಅವಕಾಶಗಳನ್ನು ಪ್ರತಿಪಕ್ಷಗಳು ಹೊಂದಿದ್ದವು. ಆದರೆ ಸೋಮಾರಿತನ ಮತ್ತು ತಪ್ಪಾದ ತಂತ್ರಗಳಿಂದ ಆ ಅವಕಾಶ ಕಳೆದುಕೊಂಡವು ಎಂದಿದ್ದಾರೆ.


"ಅವರು (ಬಿಜೆಪಿ) ತೆಲಂಗಾಣದಲ್ಲಿ ಮೊದಲ ಅಥವಾ ಎರಡನೆಯ ಪಕ್ಷವಾಗುತ್ತಾರೆ. ಅವರಿಗೆ ಅದು ದೊಡ್ಡ ವಿಷಯವಾಗಲಿದೆ. ಒಡಿಶಾದಲ್ಲಿ ಅವರು ಖಂಡಿತವಾಗಿಯೂ ನಂಬರ್ ಒನ್ ಆಗುತ್ತಾರೆ. ನೀವು ಆಶ್ಚರ್ಯಪಡುತ್ತೀರಿ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನಂಬರ್ ಒನ್ ಪಕ್ಷವಾಗಲಿದೆ" ಎಂದು ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.


ತಮಿಳುನಾಡಿನಲ್ಲಿ ಬಿಜೆಪಿಯ ಮತಗಳಿಕೆ ಶೇಕಡಾವಾರು ಪ್ರಮಾಣದಲ್ಲಿ ಎರಡಂಕಿ ಮುಟ್ಟಬಹುದು ಎಂದು ಅವರು ಹೇಳಿದ್ದಾರೆ.


543 ಸದಸ್ಯ ಬಲದ ಲೋಕಸಭೆಯಲ್ಲಿ ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕೇರಳ ಸೇರಿ 204 ಸ್ಥಾನಗಳನ್ನು ಹೊಂದಿವೆ. ಆದರೆ 2014 ಅಥವಾ 2019 ರಲ್ಲಿ ಬಿಜೆಪಿ ಈ ಎಲ್ಲಾ ರಾಜ್ಯಗಳಲ್ಲಿ 50 ಸ್ಥಾನಗಳನ್ನು ದಾಟಲು ಸಾಧ್ಯವಾಗಲಿಲ್ಲ. ಅದು ಕ್ರಮವಾಗಿ 29 ಮತ್ತು 47 ಕ್ಷೇತ್ರಗಳನ್ನು ಮಾತ್ರ ಗೆದ್ದಿತ್ತು ಎಂದರು.


ಆದಾಗ್ಯೂ, ಬಿಜೆಪಿ 370 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇಲ್ಲ ಎಂದು ಪ್ರತಿಪಾದಿಸಿದ ಕಿಶೋರ್, ಕೇಸರಿ ಪಕ್ಷ 300 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top