ಏ.26, 27, 28: ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಳದ ಬ್ರಹ್ಮಕಲಶೋತ್ಸವ

Upayuktha
0


ಬಾಯಾರು: ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಆಟಿಕುಕ್ಕೆ ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ಏ. 26, 27 ಮತ್ತು 28ರಂದು ಬ್ರಹ್ಮಕಲಶ, ಶಿಖರ ಪ್ರತಿಷ್ಠೆ, ಕುಂಭಾಭಿಷೇಕ ಮತ್ತು ಶತ ಚಂಡಿಕಾ ಯಾಗಗಳು ನಡೆಯಲಿದ್ದು ಕೊನೆಯ ದಿನದಂದು ಶೃಂಗೇರಿ ಕಿರಿಯ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಬಿಜಯಂಗೈಯಲಿದ್ದಾರೆ.


ನೂರು ವರುಷಗಳ ಹಿಂದೆ ಪಂಜೆ ಮಠದಿಂದ ತಂದ ಜ್ಯೋತಿಯನ್ನು ಅಟಿ ಕುಕ್ಕೆ ಮನೆತನದವರು ಪೂಜಿಸಲಾರಂಭಿದ ನಂತರ ಆ ಮನೆತನ ಅಭಿವೃದ್ಧಿಯಾಗಿ ಆಟಿಕುಕ್ಕೆಯಲ್ಲಿ ದೇವಾಲಯವನ್ನು ನಿರ್ಮಿಸಿ ಶ್ರೀ ದುರ್ಗಾಪರಮೇಶ್ವರಿಯನ್ನು ಪೂಜಿಸುತ್ತ ಬಂದಿದ್ದಾರೆ. ಹಂತ ಹಂತಗಳಲ್ಲಿ ದೇವಳ ಅಭಿವೃದ್ಧಿಗೊಂಡು, ಈಗ ಶಿಲಾಮಯ ಕೆಳಭಾಗ ಮತ್ತು ತಾಮ್ರದ ಹೊದಿಕೆಯ ಸುಂದರ ದೇವಾಲಯ ಶ್ರೀ ದುರ್ಗಾದೇವಿಗಾಗಿ ನಿರ್ಮಿಸಲ್ಪಟ್ಟಿದೆ.


26ರಂದು ಬೆಳಗ್ಗೆ ಋತ್ವಿಕ್ ವರಣದ ತರುವಾಯ 108 ಕಾಯಿಗಳ ಗಣಪತಿ ಹವನ, ಪೂರ್ಣ ಗ್ರಹಶಾಂತಿ ಸಹಿತ ಮೃತ್ಯುಂಜಯ ಹೋಮ, ಋಗ್ವೇದ ಪಾರಾಯಣ, ಸಪ್ತಶತಿ ಪಾರಾಯಣ, ಮಹಾಪೂಜೆ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳೂ ಸಂಜೆ ವಾಸ್ತು, ರಾಕ್ಷೋಘ್ನ, ಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆಯೂ ಜರುಗಲಿರುವುದು.


27 ರಂದು, ಬೆಳಗ್ಗೆ ಗಣಪತಿಹವನ, ಸೌರಸೂಕ್ತ ಹೋಮ, ಲಕ್ಷ್ಮೀನಾರಾಯಣಹೃದಯ ಹೋಮ ಸಪ್ತಶತಿ ಪಾರಾಯಣ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿದರೆ ಸಂಜೆ ಸುದರ್ಶನ ಹೋಮ, 108 ಕಲಶಗಳ ಜೊತೆ ಬ್ರಹ್ಮಕಲಶ ಪೂಜೆ, ಶಿಖರಾಧಿವಾಸ, ಕಲಶಾರಾಧನೆ ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು.


28 ರಂದು ಪೂಜ್ಯ ಶೃಂಗೇರಿ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಯವರು ಚಿತ್ತೈಸಿ ಬ್ರಹ್ಮಕಲಶ, ಪ್ರಸನ್ನಪೂಜೆ, ಶಿಖರಪ್ರತಿಷ್ಠೆ, ಶತಚಂಡಿಕಾ ಯಜ್ಞದ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳುವರು. ಆ ದಿನ ಭಕ್ತ ಜನರಿಗೆ ಶ್ರೀಶ್ರೀ ಜಗದ್ಗುರುಗಳ ಪಾದುಕಾ ಪೂಜೆಗೂ ಅವಕಾಶವಿದೆ.


ಕಾಸರಗೋಡು ಜಿಲ್ಲೆಯ ಕರ್‍ಹಾಡ ಬ್ರಾಹ್ಮಣರ ಪ್ರಧಾನ ಆರಾಧ್ಯ ಕ್ಷೇತ್ರವಾದ ಅಗಲ್ಪಾಡಿಯಲ್ಲಿ ಸಹಸ್ರ ಚಂಡಿಕಾ ಯಜ್ಞದ ಬೆನ್ನಲ್ಲೇ ಸಮುದಾಯದ ಆಡಳಿತದಲ್ಲಿರುವ ಆಟಿಕುಕ್ಕೆಯಲ್ಲೂ ಶತಚಂಡಿಕಾ ಯಜ್ಞ ನಡೆಯುತ್ತಿರುವುದು ವಿಶೇಷವಾಗಿದೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top