ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಾರ್ಷಿಕೋತ್ಸವ

Upayuktha
0


ಬದಿಯಡ್ಕ: ಮುಜುಂಗಾವು ಶ್ರೀಭಾರತೀವಿದ್ಯಾಪೀಠದ 2023-24ನೇ ಸಾಲಿನ ವಾರ್ಷಿಕೋತ್ಸವವು ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಶಾಲಾ ಗ್ರಂಥಪಾಲಕಿ ವಿಜಯಾ ಸುಬ್ರಹ್ಮಣ್ಯ ಶಂಖನಾದದೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು. ನಂತರ ಶಾಲೆಯ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯ ತನಕದ ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.


ಅಪರಾಹ್ನ ಮಕ್ಕಳಿಂದ ವೈದಿಕ ಪ್ರಾರ್ಥನೆಯೊಂದಿಗೆ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಉಪಶಿಕ್ಷಕಿ ಚಿತ್ರಾ ಸರಸ್ವತಿ ವಾರ್ಷಿಕ ವರದಿ ಓದಿದರು. ಮುಖ್ಯ ಶಿಕ್ಷಕ ಶ್ಯಾಂಭಟ್ ದರ್ಭೆಮಾರ್ಗ ಶಾಲಾ ರಕ್ಷಕ ಶಿಕ್ಷಕರ, ಹಾಗೂ ಪೂರ್ವ ವಿದ್ಯಾರ್ಥಿಗಳ ಸಹಕಾರಗಳನ್ನು ಸ್ಮರಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ. ಅವರು ಮಾತನಾಡುತ್ತಾ ಶಾಲೆಯ ಶಿಕ್ಷಕರು ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಹಾಸ್ಯಮಯವಾಗಿ ಸರಿಯಾದ ಚಿಂತನಶೀಲವಾದ ರೀತಿಯಲ್ಲಿ ಮನದಟ್ಟು ಮಾಡಿದರು.


ಆಡಳಿತ ಸಮಿತಿ ಅಧ್ಯಕ್ಷ  ಎಸ್.ಎನ್ ರಾವ್ ಮುನ್ನಿಪ್ಪಾಡಿ, ಹಾಗೂ ರಕ್ಷಕ-ಶಿಕ್ಷಕ ಸಂಘದ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ, ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಮಕ್ಕಳಿಗೆ ಹಿತವಚನ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
To Top