ಮಂಗಳೂರು: ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷ ವೃಂದವು ಶ್ರೀರಾಮ ಯಕ್ಷ ವೃಂದ ಹಾಗೂ ಸರಯೂ ಯಕ್ಷ ಬಳಗದ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಭಜನಾ ಮಂದಿರ (ರಿ) ಮುಲ್ಲಕಾಡು ವಠಾರದಲ್ಲಿ ಮೂರು ದಿನಗಳ ಯಕ್ಷ ತ್ರಿವೇಣಿ ಮಾರ್ಚ್ ತಿಂಗಳ 29, 30 ಮತ್ತು 31ರ ಶುಕ್ರವಾರಗಳಂದು ಸಂಜೆ 5:30 ರಿಂದ ನಡೆಯಲಿದೆ.
ಸ್ವಾಮಿ ಶರಣಂ ಅಯ್ಯಪ್ಪ, ಶನೀಶ್ವರ ಮಹಾತ್ಮೈ, ಹಾಗೂ ಮೂರನೇ ದಿನ ವಿಶೇಷವಾಗಿ ಪಾರಂಪರಿಕ ದೊಂದಿ ಬೆಳಕಿನ ಯಕ್ಷಗಾನವನ್ನೂ ಪ್ರದರ್ಶಿಸಲಾಗುವುದು.
ಹೆಸರಾಂತ ಹಿಮ್ಮೇಳ - ಮುಮ್ಮೇಳ ಕಲಾವಿದರು ಭಾಗವಹಿಸಲಿದ್ದು, ತ್ರಿವಳಿ ಯಕ್ಷ ವೃಂದದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಎಂದು ಮಕ್ಕಳ ಮೇಳಗಳ ಸಂಚಾಲಕ ಮುಲ್ಲಕಾಡು ಜನಾರ್ದನ ಕುಲಾಲ್ ಪ್ರಕಟಿಸಿದ್ದಾರೆ.
ಕಳೆದ 2 ವರ್ಷಗಳ ತ್ರಿವೇಣಿಯನ್ನು ಪೂರೈಸಿ ಈ ವರ್ಷ ಸತತವಾಗಿ 3 ನೇ ವರ್ಷದ ಈ ಕೂಟ ಸಂಪನ್ನಗೊಳ್ಳಲಿದೆ ಎಂದು ನಿರ್ದೇಶಕಿ ಶ್ರೀಮತಿ ವಿಜಯಲಕ್ಮೀ ಎಲ್.ಎನ್. ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ