ಹಾಸನ: ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ (ಮಾ15) "ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ"ದಿಂದ ಶಾಲಾ ಶಿಕ್ಷಕಿಯರೆಲ್ಲರೂ ಸೇರಿ ಮಹಿಳಾ ದಿನಾಚರಣೆಯು ಅದ್ದೂರಿಯಾಗಿ ಹೆಚ್.ಎಸ್. ಪ್ರತಿಮಾ ಹಾಸನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಿಳೆಯು ಅಬಲೆಯಲ್ಲ ಸಬಲೆ. ಇಂದು ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳ ಪರಿಚಯವಿದೆ. ಮತ್ತು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ತಮ್ಮ ಜೀವನದ ನಿರ್ವಹಣೆಗೆ ತಾವೇ ದುಡಿಯುವಂತಹ ಸಮರ್ಥರಾಗಿ ನಿಲ್ಲುತ್ತಿದ್ದಾರೆ. ಮನೆಗೆ ಗಂಡಿನ ರೀತಿಯಲ್ಲಿ ಮಹಿಳೆಯು ಎಲ್ಲವನ್ನು ನಿರ್ವಹಿಸುವ ಶಕ್ತಿಯನ್ನು ಹೊಂದಿದ್ದಾಳೆ. ಯಾವುದೇ ಕ್ಷೇತ್ರದಲ್ಲಾಗಲಿ ಬಹಳ ಕಷ್ಟಪಟ್ಟು ಮುಂದೆ ಬರುತ್ತಿರುವಂತಹ ಮಹಿಳೆಯರಿಗೆ ತುಳಿಯುವಂತ ಕೆಲಸವನ್ನು ಯಾರು ಮಾಡಬಾರದು ಆದರೆ ಅವರಿಗೆ ಪ್ರೋತ್ಸಾಹ ನೀಡಬೇಕು. ಇಲ್ಲದಿದ್ದರೆ ತಮ್ಮ ಪಾಡಿಗೆ ತಾವು ಇದ್ದು ಬಿಡಬೇಕು. ಪ್ರತಿಯೊಬ್ಬ ಮಹಿಳೆ ಅವರದೇ ಆದ ಪ್ರತಿಭೆ ಹೊಂದಿರುತ್ತಾರೆ. ಅದಕ್ಕೆ ಪ್ರೋತ್ಸಾಹವನ್ನು ಪ್ರತಿಯೊಬ್ಬರೂ ಮಾಡಬೇಕು. "ಹೆಣ್ಣಿಗೆ ಹೆಣ್ಣೇ ಶತ್ರು" ಎಂಬುದು ಸುಳ್ಳಾಗುವಂತಾಗಬೇಕು. ಮಹಿಳೆಯು ಇನ್ನೂ ವಿದ್ಯಾವಂತಳಾಗಿ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯವನ್ನು ನಿರ್ವಹಿಸುವಂತಾಗಬೇಕು ಎಂದು ಸಾಮಾಜಿಕ ಚಿಂತಕಿ. ಶಿಕ್ಷಕಿ ಹೆಚ್.ಎಸ್. ಪ್ರತಿಮಾ ಹಾಸನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಉದಯಕುಮಾರ್, ಮುಖ್ಯೋಪಾಧ್ಯಾಯರಾದ ಪಾರ್ಥಸಾರಥಿ ಮತ್ತು ಶಿಕ್ಷಕಿಯರಾದಂತಹ ಶ್ವೇತಾ, ರೇಖಾ, ಸ್ನೇಹ, ರೋಜಿ, ಆಶಾ, ಸಲ್ಮಾ, ರಿದಾ, ಪ್ರತಿಮ, ಶಿಲ್ಪ, ಸುಕನ್ಯಾ, ಶಕುಂತಲಾ, ಪೂರ್ಣಿಮಾ, ಅರ್ಪಿತ, ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ