ಹಾಸನ: ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರಸ್ವತಿ ಪೂಜೆ; 10ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ

Upayuktha
0


ಹಾಸನ: ಇತ್ತೀಚಿಗೆ ಹಾಸನ ನಗರದ ಉತ್ತರ ಬಡಾವಣೆಯಲ್ಲಿರುವ ಶ್ರೀ ವಿವೇಕಾನಂದ ವಿದ್ಯಾಲಯ ಹಾಸನದಲ್ಲಿ ಸರಸ್ವತಿ ಪೂಜೆ ಮತ್ತು ಹತ್ತನೇ ತರಗತಿ ಮಕ್ಕಳಿಗೆ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಅಧ್ಯಕ್ಷ ಉದಯಕುಮಾರ್ ಅವರು, ಮಕ್ಕಳು ಉತ್ತಮ ಅಂಕವನ್ನು ತರಲೆಂದು ಆಶೀರ್ವದಿಸಿದರು.


ಮುಖ್ಯ ಅತಿಥಿಗಳಾಗಿ ಹಾಸನದ ಕ್ಷೇತ್ರ ಶಿಕ್ಷಣಾಧಿಕಾರಿ ಅನಂತ್ ಕುಮಾರ್ ಸಿ ಆರ್ ಎಫ್ ಮಾತನಾಡಿ,  ಮಕ್ಕಳಿಗೆ ಶಿಕ್ಷಣದ ಹಂತವಾಗಿರುವ ಪ್ರಮುಖ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬಹಳ ಶ್ರಮವಹಿಸಿ  ಕಷ್ಟಪಟ್ಟು ಓದಬೇಕು. ಯಾವುದೇ ರೀತಿ ಗಾಬರಿಯಾಗದಂತೆ ಈ ವರ್ಷ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ತರುವಂತೆ ಶುಭ ಕೋರಿದರು. ಈ ಘಟ್ಟವನ್ನು ಬಹಳಷ್ಟು ಗಮನ ಹರಿಸಿ ಓದಿದರೆ ಮಾತ್ರ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದರು. ಮುಖ್ಯೋಪಾಧ್ಯಾಯ ಶ್ರೀಕಾಂತರವರು ಮಕ್ಕಳಲ್ಲಿ ಶಿಸ್ತುಬದ್ದ ಜೀವನ ಅಗತ್ಯ. ಎಲ್ಲರೂ ಉತ್ತಮವಾದ ಅಂಕಗಳನ್ನು ಗಳಿಸಬೇಕೆಂದು ತಿಳಿಸಿದರು.


ಲೋಕೇಶ್ (ಸುಜಲ ಕಾಲೇಜು ಸಂಸ್ಥಾಪಕರು) ರವರು ಮಾತನಾಡಿ, ಪರೀಕ್ಷೆಯನ್ನು ಬರೆಯಬೇಕಾದರೆ ಮುನ್ನೆಚ್ಚರಿಕೆಗಳನ್ನು ಹೇಗೆ ತೆಗೆದುಕೊಳ್ಳಬೇಕು. ಪೂರ್ವ ಸಿದ್ಧತೆಗಳನ್ನು ಹೇಗೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಯಾವುದೇ ಗಾಬರಿಯಾಗದಂತೆ  ಉತ್ತಮವಾದ ಫಲಿತಾಂಶ ಬರುವಂತೆ ಬರೆಯಬಹುದು ಎಂದು ಹಲವಾರು ರೀತಿಯ ಸಲಹೆಗಳು ಮತ್ತು ಪರೀಕ್ಷೆಯ ಪೂರ್ವಸಿದ್ಧತೆಯನ್ನು ಹೇಗೆ ಮಾಡಬೇಕೆಂದು ತಿಳಿಸಿದರು.


ಮುಖ್ಯೋಪಾಧ್ಯಾಯ ಪಾರ್ಥಸಾರಥಿ ರವರು ಮಾತನಾಡಿ, ಮಕ್ಕಳು ಚೆನ್ನಾಗಿ ಓದಿ ಪಾಸ್ ಆಗಬೇಕು. ಯಾರು ಸಹ ಅಲಸ್ಯ ಮಾಡದಂತೆ ಪ್ರಮುಖ ಘಟ್ಟವಾದ ಈ ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕು ಎಂದು ತಿಳಿಸಿದರು.


ಶಿಕ್ಷಕಿ ಹೆಚ್. ಎಸ್. ಪ್ರತಿಮಾ ಹಾಸನ್ ಮಾತನಾಡಿ, ಪರೀಕ್ಷೆಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಪರೀಕ್ಷೆಗೆ  ಸಿದ್ದರಾಗಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ವಿವೇಕಾನಂದ ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಇನ್ನೂ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳನ್ನು ಹಾಡಿದರು.


ಮಕ್ಕಳಿಗೆ ಸರಸ್ವತಿ ಪೂಜೆ ಮಾಡಿ ಪರೀಕ್ಷೆಯ ಅಲ್ ಟಿಕೆಟ್ ಗಳನ್ನು ವಿತರಿಸಲಾಯಿತು. ಉತ್ತಮ ಅಂಕವನ್ನು ತಂದು ಶಾಲೆಗೆ ಒಳ್ಳೆಯ ಹೆಸರನ್ನು ತರಬೇಕಾಗಿ ಎಲ್ಲ ಮಕ್ಕಳಿಗೂ ಶಿಕ್ಷಕರು ಆಶೀರ್ವಾದ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top