ಕೊಣನೂರು: ಇಲ್ಲಿನ ಕೊಣನೂರು ಬಿ.ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುಸಾಪ ದೊಡ್ಡಮಗ್ಗೆ ಹೋಬಳಿ ಘಟಕದ ಉದ್ಘಾಟನೆ, ಪದಗ್ರಹಣ, ಮಹಿಳಾ ದಿನಾಚರಣೆ, ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಅರಕಲಗೊಡು ಚುಸಾಪ ಘಟಕದಿಂದ ಅಧ್ಯಕ್ಷ ಸುಂದರೇಶ್ ಡಿ. ಉಡುವೇರೆ ಇವರ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗೊರೂರು ಎ.ಎನ್.ವಿ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾ¯ರು ಜಿ.ಎನ್. ಅನುಸೂಯ ಪ್ರಧಾನ ಭಾಷಣ ಮಾಡಿ ಯುವತಿಯರು ಮೈಮುಚ್ಚುವ ಬಟ್ಟೆಗಳನ್ನು ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಯುವಕರು ನಿಮ್ಮನ್ನು ಕೆಕ್ಕರಿಸಿ ನೋಡುವುದು ಕಡಿಮೆಯಾಗುತ್ತದೆ. ಜೀವನದಲ್ಲಿ ನೀವು ಏನಾಗುವುದಕ್ಕೂ ಮೊದಲು ಸಂಸ್ಕಾರವಂತರಾಗಿ, ಹಿರಿಯರ ನಡವಳಿಕೆ ಚಿಂತನೆ ಜೀವನ ಶೈಲಿ ನಡೆ ನುಡಿ ಆಚಾರ ವಿಚಾರ ಸಂಸ್ಕೃತಿಗಳನ್ನು ಅರಿತು ನಡೆಯಿರಿ. ಅಂಕೆಯಲ್ಲಿ ಇಟ್ಟಂತಹ ಹೆಣ್ಣು ಮಜ್ಜಿಗೆಯಲ್ಲಿ ಇಟ್ಟಂತಹ ಬೆಣ್ಣೆ ಎರಡೂ ಕೆಡುವುದಿಲ್ಲ ಎಂಬ ಮಾತನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಎಸ್.ಸಿ.ಚೌಡೇಗೌಡರು ಮಾತನಾಡಿ ನಮ್ಮ ದೇಶದ ಸಂಸ್ಕೃತಿ ನಡೆದುಕೊಂಡು ಬರುತ್ತಿರುವುದೇ ಮಹಿಳೆಯರಿಂದ. ನಮ್ಮ ದೇಶ ರಾಜ್ಯ ಗ್ರಾಮಗಳು ಉಳಿಯುವಲ್ಲಿ ಮಹಿಳೆಯರ ಪಾತ್ರವೂ ಇದೆ ಎಂಬುದನ್ನು ಮರೆಯಬಾರದು ಎಂದರು.
ಹಿರಿಯ ಸಾಹಿತಿ ಗೊರೂರು ಅನಂತರಾಜು ಅವರ ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ ಎಂಬ ಕೃತಿಯನ್ನು ಬಿ.ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಎಂ.ಮಹೇಶ್ ಬಿಡುಗಡೆ ಮಾಡಿ ಮಾತನಾಡಿದರು.
ಸಾಹಿತಿ ಗೊರೂರು ಅನಂತರಾಜು ತಮ್ಮ ಸಂಗಮ ಕೃತಿಯು ತಲಕಾವೇರಿಯಿಂದ ತಮಿಳುನಾಡಿನ ವರೆಗೂ ಕಾವೇರಿ ನದಿ ಹರಿಯುವ ದಡದಲ್ಲಿ ಬರುವ ಕ್ಷೇತ್ರಗಳ ಪರಿಚಯ, ನೀರಾವರಿ ಜಲಾಶಯಗಳು ಮುಂತಾಗಿ ಮಾಹಿತಿಗಳನ್ನು ಒಳಗೊಂಡಿದೆ. ಇದರಲ್ಲಿ ಕೊಣನೂರು ಬಗ್ಗೆಯೂ ವಿವರಗಳಿವೆ. ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡ ಈ ಕಾಲೇಜಿಗೂ ಇತಿಹಾಸವಿದೆ. ಕಾಲೇಜಿನ ಬೆಳವಣಿಗೆ ಬಗ್ಗೆ ಬರೆಯಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಸಿರಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಕಲಾವತಿ ಮಧಸೂಧನ್ ವಹಿಸಿ ಮಾತನಾಡಿದರು. ಸುಂದರೇಶ್ ಡಿ. ಉಡುವೇರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ.ಎಸ್.ವಾಸುದೇವ್, ಕೊಣನೂರು ಹೊಯ್ಸಳ, ಕೆ.ವಿ.ಸತೀಶ್, ಶಿಕ್ಷಕ ಸಂತೋಷ್, ಕು.ಅರ್ಪಿತ ವಿಜಯ್ ಮಾದಿಹಳ್ಳಿ, ದಾಕ್ಷಾಯಿಣಿ ಮುರುಗನ್, ವೀಣಾ ಇದ್ದರು. ಅರಕಲಗೊಡಿನ ಭಾರತಿ ಬಿ.ಎಂ.ತಂಡದವರು ಯೋಗ ನೃತ್ಯ ಪ್ರದರ್ಶಿಸಿದರು. ಗಾಯಕ ಯೋಗೇಂದ್ರ ದುದ್ದ ಪ್ರಾರ್ಥಿಸಿದರು. ಶಿಕ್ಷಕ ಸಂತೋಷ್ ನಿರೂಪಿಸಿದರು. ಲೇಖಕಿ ಗಿರಿಜಾ ನಿರ್ವಾಣಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ