ವಿಟ್ಲ: 'ಸಾಹಿತ್ಯ ಸಂಭ್ರಮ - 2024' ಚುಟುಕು ಗೋಷ್ಠಿ - ಹನಿ ಮಿನಿ ಕಥಾ ಗೋಷ್ಠಿ

Upayuktha
0

ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಆಯೋಜನೆ



ವಿಟ್ಲ: ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಸಾಹಿತ್ಯ ಸಂಭ್ರಮ 2024ರ ಚುಟುಕು ಗೋಷ್ಠಿ- ಹನಿ ಮಿನಿ ಕಥಾ ಗೋಷ್ಠಿ ಕಾರ್ಯಕ್ರಮವು ಅಡ್ಯನಡ್ಕ ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಮತ್ತು ಸಾಹಿತಿ ಶಿವಕುಮಾರ್ ಸಾಯ ಅವರ ಅಧ್ಯಕ್ಷತೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಾರ್ಚ್ 17ರಂದು ನಡೆಯಿತು.


ಕನ್ನಡ ಪಯಸ್ವಿನಿ ಪ್ರಶಸ್ತಿ ವಿಜೇತ ಶಿಕ್ಷಕಿ, ಕವಯಿತ್ರಿ ಸೀತಾಲಕ್ಷ್ಮಿ ವರ್ಮ, ವಿಟ್ಲ ಅರಮನೆ ಅವರು ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಆನಂದ ರೈ ಅಡ್ಕಸ್ಥಳ ಉಪಸ್ಥಿತರಿದ್ದರು. ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾದ ರಾಜಾರಾಮ ವರ್ಮ ವಿಟ್ಲ ಅರಮನೆ ಪ್ರಸ್ತಾವನೆಗೈದರು. ವಿಟ್ಲದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜನೆಗಾಗಿ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.


ಬಳಿಕ ನಡೆದ ಸಾಹಿತ್ಯ ಸಂಭ್ರಮ- 2024 ಚುಟುಕು ಗೋಷ್ಠಿ- ಹನಿ ಮಿನಿ ಕಥಾ ಗೋಷ್ಠಿಯಲ್ಲಿ ಸತೀಶ್ ಬಿಳಿಯೂರು, ಮಮತಾ ಡಿ. ಕೆ. ಅನಿಲಕಟ್ಟೆ, ಸೌಮ್ಯ ಆರ್. ಶೆಟ್ಟಿ ಮಂಜೇಶ್ವರ, ಮಲ್ಲಿಕಾ ಜೆ. ರೈ ಪುತ್ತೂರು, ಗೀತಾ ಎಸ್. ಕೊಂಕೋಡಿ, ಚಂದ್ರಹಾಸ ಕುಂಬಾರ, ಮಂಜುಶ್ರೀ ಎನ್. ನಲ್ಕ, ಸಂಜೀವ ಮಿತ್ತಳಿಕೆ, ನಾರಾಯಣ ಕುಂಬ್ರ, ನಂದಿತಾ ವಿಟ್ಲ, ನವ್ಯಶ್ರೀ ಸ್ವರ್ಗ, ಪ್ರಿಯಾ ಬಾಯಾರು, ರಾಜಾರಾಮ ವರ್ಮ ವಿಟ್ಲ, ಜಯರಾಮ ಪಡ್ರೆ ಅವರು ಚುಟುಕು, ಹನಿ ಮಿನಿ ಕವಿತೆ, ಕತೆಗಳನ್ನು ವಾಚಿಸಿದರು. ಶ್ರೀಧರ್ ಅಳಿಕೆ ಶುಭ ಹಾರೈಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top