ಉಡುಪಿ: ಮಾರ್ನಮಿ ನಾಟಕ ಪ್ರದರ್ಶನ

Upayuktha
0


ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಯಕ್ಷರಂಗಾಯಣ ಕಾರ್ಕಳ  ವತಿಯಿಂದ ರಂಗಾಯಣ ಶಿವಮೊಗ್ಗ ಇವರು ಪ್ರಸ್ತುತ ಪಡಿಸಿರುವ ಡಾ. ಗೀತಾ ಪಿ. ಸಿದ್ದಿ ಅವರ ಕಥೆ ಆಧಾರಿತ ಮಾರ್ನಮಿ ನಾಟಕ ಪ್ರದರ್ಶನಕ್ಕೆ ಮಂಗಳವಾರ ನಗರದ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಜಿಲ್ಲಾಧಿಕಾರಿ, ಡಾ.ಕೆ ವಿದ್ಯಾಕುಮಾರಿ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು. 

    

ಕಾರ್ಯಕ್ರಮದಲ್ಲಿ ಎಂ.ಜಿ.ಎಂ, ಕಾಲೇಜಿನ ಪ್ರಾಂಶುಪಾಲೆ  ಪ್ರೋ.ಲಕ್ಷ್ಮೀ ನಾರಾಯಣ ಕಾರಂತ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ   ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ವಿಶ್ವನಾಥ ಶೆಣೈ ಹಾಗೂ ನಾಟಕ ನಿರ್ದೇಶಕ, ಶ್ರೀಕಾಂತ್ ಕುಮಟಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

   

ಕಾರ್ಯಕ್ರಮದಲ್ಲಿ ಯಕ್ಷ  ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ,  ರಾಮಾಂಜಿ  ನಿರೂಪಿಸಿ,  ವಂದಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top