ಇನ್ನರ್‌ವೀಲ್ ಕ್ಲಬ್ ಸುರತ್ಕಲ್ ಸಹಭಾಗಿತ್ವದಲ್ಲಿ ಉದಯರಾಗ–51 ಶಾಸ್ತ್ರೀಯ ಸಂಗೀತ

Upayuktha
0

 


ಸುರತ್ಕಲ್: ಶಾಸ್ತ್ರೀಯ ಸಂಗೀತ ಸಹೃದಯರ ಮನಸ್ಸನ್ನು ಅನುನಯಗೊಳಿಸುವ ಶ್ರೇಷ್ಠ ಕಲಾ ಪ್ರಕಾರವಾಗಿದ್ದು ಕಲಾ ವಾತಾವರಣವನ್ನು ಕಲ್ಪಿಸಿ ಕೊಡಬೇಕು ಎಂದು ಸುರತ್ಕಲ್ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ ನುಡಿದರು. ಅವರು ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಸುರತ್ಕಲ್ ಮತ್ತು ನಾಗರಿಕ ಸಲಹಾ ಸಮಿತಿಗಳ ಸಹಯೋಗದಲ್ಲಿ ಸುರತ್ಕಲ್ ಇನ್ನರ್‌ವೀಲ್ ಕ್ಲಬ್ ಸುರತ್ಕಲ್ ಸಹಭಾಗಿತ್ವದಲ್ಲಿ ಸುರತ್ಕಲ್ ಮೇಲು ಸೇತುವೆಯ ತಳ ಭಾಗದಲ್ಲಿ ನಡೆದ ಉದಯರಾಗ–51 ಶಾಸ್ತ್ರೀಯ ಸಂಗೀತದ ಸರಣಿ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.  


ರೋಶ್ನಿ ಉಪಾಧ್ಯಾಯ ಸಾರಡ್ಕ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕರ‍್ಯಕ್ರಮ ನಡೆಯಿತು. ತನ್ಮಯಿ ಉಪ್ಪಂಗಳ, ಪುತ್ತೂರು ಅವರು ವಯಲಿನ್‌ನಲ್ಲಿ ಹಾಗು ಮೃದಂಗದಲ್ಲಿ ಅವಿನಾಶ್ ಬಿ. ಮಂಗಳೂರು ಸಹಕರಿಸಿದರು.


ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಸ್ವಾಗತಿಸಿದರು. ಸುರತ್ಕಲ್ ನಾಗರಿಕ ಸಹಾ ಸಮಿತಿಯ ಅಧ್ಯಕ್ಷ ಡಾ.ಕೆ.ರಾಜಮೋಹನ್‌ರಾವ್, ಸಂಯೋಜಕ ಸತೀಶ್ ಸದಾನಂದ್, ಪ್ರೊ.ರಮೇಶ್ ಭಟ್ ಎಸ್ ಜಿ, ಸಾಹಿತಿ ರಘುರಾಮ ರಾವ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top