ಮಂಗಳೂರು: ಭಾರತದ ಪ್ರಮುಖ ಡಿಜಿಟಲ್ ಹೂಡಿಕೆ ವೇದಿಕೆಗಳಲ್ಲಿ ಒಂದಾಗಿರುವ ಅಪ್‍ಸ್ಟಾಕ್ಸ್ 'ಕಟ್ ದಿ ಕಿಟ್ ಕಿಟ್ ಗೆಟ್ ಇನ್ ದಿ ಮಾರ್ಕೆಟ್' ಎಂಬ ಹೊಸ ಅಭಿಯಾನ ಪ್ರಾರಂಭಿಸಿದೆ.
ಹೂಡಿಕೆದಾರರ ಗಮನ ಬೇರೆಡೆ ಸೆಳೆಯುವ ಮಾರುಕಟ್ಟೆ ಸಂಬಂಧಿತ ಹಲವಾರು ವಿದ್ಯಮಾನಗಳು ಬೀರುವ ಪ್ರಭಾವ ಕಡಿಮೆ ಮಾಡಲು ಬಳಕೆದಾರರಿಗೆ ಸಹಾಯ ಮಾಡಲು ಈ ಪ್ರಚಾರ ಅಭಿಯಾನವು ಗಮನ ಕೇಂದ್ರೀಕರಿಸಲಿದೆ. ಉತ್ತಮ ತಿಳಿವಳಿಕೆಯುಳ್ಳ ಜಾಣ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಂಡು 'ಲಾಭದಾಯಕ ಹೂಡಿಕೆ ಮಾಡಲು' ನೆರವಾಗಲಿದೆ ಎಂದು ಅಪ್‍ಸ್ಟಾಕ್ಸ್ ಸಹ-ಸಂಸ್ಥಾಪಕಿ ಕವಿತಾ ಸುಬ್ರಮಣಿಯನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಹೂಡಿಕೆ ಮತ್ತು ಷೇರು ವಹಿವಾಟಿನ ವೇದಿಕೆಯನ್ನು ಬಳಕೆದಾರರ ಪಾಲಿಗೆ ಸಮಗ್ರ ಸ್ವರೂಪದ ಸಂಪತ್ತು ಸೃಷ್ಟಿಯ ತಾಣವಾಗಿ ಬದಲಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ. ತಪ್ಪಾಗಿ ಮಾರಾಟ ಮಾಡುವ ನಿರ್ಧಾರಗಳು, ಭರಪೂರ ಮಾಹಿತಿ ಹಾಗೂ ಸಂಪನ್ಮೂಲಗಳು ಉಂಟು ಮಾಡುವ ಗೊಂದಲ ಮತ್ತು ತಾಂತ್ರಿಕ ಪರಿಭಾಷೆ ಅನುಸರಿಸುವಲ್ಲಿ ಎದುರಾಗುವ ಸವಾಲುಗಳನ್ನು ಬಳಕೆದಾರರು ಎದುರಿಸುತ್ತಿದ್ದು, ಇದಕ್ಕೆ ಹೊಸ ಅಭಿಯಾನ ಪರಿಹಾರ ಒದಗಿಸಲಿದೆ ಎಂದು ವಿವರಿಸಿದ್ದಾರೆ.
ಮ್ಯೂಚುವಲ್ ಫಂಡ್, ವಿಮೆ, ಷೇರು, ನಿರ್ದಿಷ್ಟ ಗುರಿ ಆಧಾರಿತ ಹೂಡಿಕೆ ಸೇರಿದಂತೆ ವಿವಿಧ ಬಗೆಯ ಹಣಕಾಸು ಉತ್ಪನ್ನಗಳನ್ನು ಅಪ್‍ಸ್ಟಾಕ್ಸ್ ಒದಗಿಸುತ್ತದೆ. ಈ ಮೂಲಕ ಬಳಕೆದಾರರಿಗೆ ಲಾಭದಾಯಕವಾದ ಸಮರ್ಪಕ ಹೂಡಿಕೆ ನಿರ್ಧಾರ ಕೈಗೊಳ್ಳಲು ಮತ್ತು ವಿವಿಧ ಆಸ್ತಿ ವಿಭಾಗಗಳ ಮೂಲಕ ಸಂಪತ್ತು ಸೃಷ್ಟಿಸಲು ನೆರವಾಗಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ