ದೇವರಮನೆಯಲ್ಲಿ ಕಾಡಾನೆ ದಾಳಿ-ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು

Upayuktha
0


ಮೂಡಿಗೆರೆ
: ಕೊಟ್ಟಿಗೆಹಾರ ಸಮೀಪದ ದೇವರಮನೆಯಲ್ಲಿ ಕಾಡಾನೆಯೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರಾದ ಘಟನೆ  ನಡೆದಿದೆ.



ಮೂಡಿಗೆರೆ ಪಟ್ಟಣದ ನಿವಾಸಿ ಲೋಕೇಶ್ ಮತ್ತು ಅವರ ಸಹೋದರಿ ದೇವರಮನೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಿಂದಿರುವಾಗ ದೇವರಮನೆ ರಸ್ತೆಯಲ್ಲಿ ಕಾಡಾನೆ ಬೈಕಿಗೆ ಅಡ್ಡ ಬಂದು ಅಟ್ಟಿಸಿಕೊಂಡು ಬಂದಿದೆ. ತಕ್ಷಣ ಬೈಕ್ ಸವಾರರು ಓಡಿ ಹೋಗಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರೆ.



ಬೈಕ್ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು ಬೈಕ್ ಜಖಂಗೊಂಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾದ ಅಭಿಜಿತ್, ಬಣಕಲ್ ಠಾಣಾ ಪಿಎಸ್‌ಐ ಎನ್.ಕೆ.ಓಮನಾ, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top