ಬಾಯಿ ಆರೋಗ್ಯ ನಿರ್ಲಕ್ಷಿಸಬೇಡಿ : ಡಾ|| ಚೂಂತಾರು

Upayuktha
0


ಮಂಗಳೂರು: ಬಾಯಿಯೇ ದೇಹದ ಆರೋಗ್ಯದ ಹೆಬ್ಬಾಗಿಲು. ಬಾಯಿಯಲ್ಲಿ  ಆರೋಗ್ಯವಂತ ಹಲ್ಲುಗಳು ಇದ್ದಲ್ಲಿ ನಾವು ತಿನ್ನುವ ಆಹಾರ ಚೆನ್ನಾಗಿ ಜೀರ್ಣವಾಗಿ ನಮ್ಮ ದೈಹಿಕ ಆರೋಗ್ಯ ವೃಧ್ದಿಸುತ್ತದೆ. ಬಾಯಿಯ ಆರೋಗ್ಯ ಕೆಟ್ಟಲ್ಲಿ ದೇಹದ ಇತರ ಅಂಗಗಳ ಆರೋಗ್ಯವು ಕೆಡುತ್ತದೆ. ನಾವು ತಿನ್ನುವ ಆರೋಗ್ಯ ದೇಹಕ್ಕೆ ಸೇರಿಕೊಂಡು “ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ” ಹೆಚ್ಚಿಸಲು ಆರೋಗ್ಯವಂತ ಬಾಯಿ ಅತೀ ಅಗತ್ಯ ಈ ನಿಟ್ಟಿನಲ್ಲಿ ನಾವು ನಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ನೂರು ಕಾಲ ಸುಖವಾಗಿ ಬಾಳಬಹುದು ಎಂದು ಸುರಕ್ಷಾ ದಂತ ಚಿಕಿತ್ಸಾಲಯದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು. 


ಬುಧವಾರದಂದು ವಿಶ್ವ ಬಾಯಿ ಆರೋಗ್ಯ ದಿನದ ಅಂಗವಾಗಿ ಮಂಜೇಶ್ವರದ ಹೊಸಂಗಡಿಯಲ್ಲಿ ಕಳೆದ 26 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ) ಮಂಗಳೂರು ಇದರ ವತಿಯಿಂದ ಬಾಯಿಯ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ ದಂತ ಚಿಕಿತ್ಸಾಲಯಕ್ಕೆ ಬಂದ  ಎಲ್ಲಾ ರೋಗಿಗಳಿಗೆ ಉಚಿತ ಬಾಯಿ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದಂತ ವೈದ್ಯ ಡಾ|| ರಾಜಶ್ರೀ ಮೋಹನ್, ಬೇರು ನಾಳ ತಜ್ಞ ಡಾ|| ಶರತ್ ಪಾರೆ, ಚಿಕಿತ್ಸಾಲದ ಸಹಾಯಕಿಯರಾದ ಕುಮಾರಿ ರಮ್ಯ, ಚೈತ್ರ, ಸುಷ್ಮಾ ಮತ್ತು ಜಯಶ್ರೀ ಕೋಟ್ಯಾನ್ ಉಪಸ್ಥಿತರಿದ್ದರು. “ಸುಮುಖ” ದಂತ ಆರೋಗ್ಯ ಮಾರ್ಗದರ್ಶನ ಪುಸ್ತಕವನ್ನು ಸುರಕ್ಷ ದಂತ ಚಿಕಿತ್ಸಾಲಯಕ್ಕೆ ಬೇಟಿ ನೀಡಿದ ಎಲ್ಲಾ ರೋಗಿಗಳಿಗೆ ಉಚಿತವಾಗಿ ಹಂಚಲಾಯಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top