ದೇಶದ ಪ್ರಗತಿಯಲ್ಲಿ ವಿಜ್ಞಾನದ ಕೊಡುಗೆ ಅಪಾರ: ಪ್ರೊ. ವೀರಪ್ಪ ಗೌಡ

Upayuktha
0


ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಕೆ.ಆರ್‌ಪುರದ ಗಣಿತಶಾಸ್ತ್ರ ವಿಭಾಗ ವತಿಯಿಂದ "Numerical Methods for Differential Equations" ಎಂಬ ವಿಚಾರ ಕುರಿತ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಟಿಐಎಫ್‌ಆರ್ ಸೆಂಟರ್ ಫಾರ್ ಅಪ್ಲಿಕೇಬಲ್ ಮ್ಯಾಥಮೇಟಿಕ್ಸ್‌ನ ನಿವೃತ್ತ ಡೀನ್ ಪ್ರೊ. ಜಿ. ಡಿ. ವೀರಪ್ಪ ಗೌಡ, ಡಾ. ಎಚ್. ಜಿ. ದೀಪಕ್, ಡಾ. ಎಂ. ಸಿ. ಮಹೇಶ್ ಕುಮಾರ್, ಡಾ. ಆಶಾ ಟಿ. ವಿ, ನಳಿನಾ ದೇವಿ ಕೆ, ಅಸ್ಫೀಯ ಸುಲ್ತಾನ ಮತ್ತು ಶಿಲ್ಪಾ ಡಿ ಉಪಸ್ಥಿತರಿದ್ದರು.



ಬೆಂಗಳೂರು: ಒಂದು ದೇಶ ಪ್ರಗತಿ ಸಾಧಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ ಎಂದು ಬೆಂಗಳೂರಿನ ಟಿಐಎಫ್‌ಆರ್ ಸೆಂಟರ್ ಫಾರ್ ಅಪ್ಲಿಕೇಬಲ್ ಮ್ಯಾಥಮೇಟಿಕ್ಸ್‌ನ ನಿವೃತ್ತ ಡೀನ್ ಪ್ರೊ. ಜಿ.ಡಿ. ವೀರಪ್ಪ ಗೌಡ ಅಭಿಪ್ರಾಯಪಟ್ಟಿದ್ದಾರೆ.


ವಿಜ್ಞಾನವಿಲ್ಲದೆ ಬದುಕಿಲ್ಲ. ಪ್ರತಿಯೊಂದು ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ವಿಜ್ಞಾನದ ಅವಶ್ಯಕತೆ ಇದ್ದೆ ಇದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಅಕಾಡೆಮಿ, ನವದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಪ್ರಯಾಗ್‌ರಾಜ್‌ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರದ ಗಣಿತಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ``ನ್ಯೂಮರಿಕಲ್ ಮೆಥಡ್ಸ್ ಫಾರ್ ಡಿಫರೆನ್ಸಿಯಲ್ ಇಕ್ವೇಷನ್ಸ್'' (Numerical Methods for Differential Equations) ಎಂಬ ವಿಚಾರ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ತಿಳಿಸಿದರು.


ಸ್ಪರ್ಧಾತ್ಮಕವಾದ ಇಂದಿನ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದ ಮಾತ್ರ ದೇಶ-ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಬಹುದು. ಒಂದು ದೇಶದ ಅಭಿವೃದ್ಧಿ ರೇಖೆಯಲ್ಲಿ ವಿಜ್ಞಾನದ ಪಾತ್ರ ಅಪಾರವಾಗಿದೆ ಎಂದು ಅವರು ನುಡಿದರು.


ಗಣಿತಶಾಸ್ತ್ರ ಕಬ್ಬಿಣದ ಕಡಲೆ ಎಂಬುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭಾವನೆಯಾಗಿದೆ. ಆದರೆ ಇಂತಹ ಕಾರ್ಯಾಗಾರಗಳನ್ನು ನಿರಂತರವಾಗಿ ಏರ್ಪಡಿಸುವ ಮೂಲಕ ಗಣಿತದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಸಾಧ್ಯ ಎಂದು ಪ್ರೊಫೆಸರ್ ವೀರಪ್ಪ ಗೌಡ ತಿಳಿಸಿದರು.


ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಗಣಿತಶಾಸ್ತ್ರದಲ್ಲಿ ನಡೆಯುವ ಹೊಸ ಹೊಸ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ಮತ್ತು ಅವರನ್ನು ಸಂಶೋಧನಾ ಕ್ಷೇತ್ರಕ್ಕೆ ತೆರೆದುಕೊಳ್ಳುವಂತೆ ಮಾಡಬಹುದು ಎಂದ ಅವರು ತಮ್ಮ ಉಜ್ವಲ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ನುಡಿದರು.


ಗಣಿತಶಾಸ್ತ್ರ ಇಲ್ಲದ ಬದುಕಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಲ್ಲಿ ಗಣಿತಶಾಸ್ತ್ರಜ್ಞರ ಕೊಡುಗೆ ಅಪಾರ ಎಂದು ಕಾರ್ಯಗಾರದ ಸಂಯೋಜಕರಾದ ಗಣಿತಶಾಸ್ತ್ರ ವಿಭಾಗದ ಡಾ. ಎಂ. ಸಿ. ಮಹೇಶ್ ಕುಮಾರ್ ಅವರು ತಿಳಿಸಿದರು.


ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಯಸುವ ವಿದ್ಯಾರ್ಥಿಗಳು ಈ ರೀತಿಯ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಹೇಶ್ ಕುಮಾರ್ ಕಿವಿ ಮಾತು ಹೇಳಿದರು.


ಮೂರು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ಗಣಿತಶಾಸ್ತಜ್ಞರಾದ ಪ್ರೊ. ಪಿ. ಜಿ. ಸಿದ್ದೇಶ್ವರ್, ಪ್ರೊ. ಎಂ. ಎಸ್. ಮಹಾದೇವ ನಾಯ್ಕ, ಪ್ರೊ. ಬಿ. ಚೆಲುವರಾಜು, ಪ್ರೊ. ಎಚ್. ಜಿ. ನಾಗರಾಜ, ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಬಿ. ಜೆ. ಗಿರೀಶ್ ಭಾಗವಹಿಸಿ, ವಿಶೇಷ ಉಪನ್ಯಾಸವನ್ನು ನೀಡಿದರು. 


ಕಾರ್ಯಾಗಾರದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತದಿಂದ ನೂರೈವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಅತ್ಯಂತ ಉತ್ಸುಕತೆ ಮತ್ತು ಸಕ್ರಿಯವಾಗಿ ಭಾಗವಹಿಸಿದ್ದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ರತಿಭಾ ಪಾರ್ಶ್ವನಾಥ್ ವಹಿಸಿದ್ದರು. ಕಾರ್ಯಾಗಾರದಲ್ಲಿ ಗಣಿತಶಾಸ್ತ್ರ ವಿಭಾಗದ ಡಾ. ಎಚ್. ಜಿ. ದೀಪಕ್, ಡಾ. ಆಶಾ ಟಿ. ವಿ, ನಳಿನಾ ದೇವಿ ಕೆ, ಅಸ್ಫೀಯ ಸುಲ್ತಾನ, ಶಿಲ್ಪ ಡಿ, ಡಾ. ತಾರಾಮಣಿ ಆರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೋಲಾರದ ಡಾ. ಬಿ. ಎನ್. ಧಮೇಂದ್ರ ಮತ್ತು ಪ್ರೊಫೆಸರ್ ಎಂ. ಕೆ. ಲೋಕೇಶ ಸೇರಿದಂತೆ ಕಾಲೇಜಿನ ವಿವಿಧ ವಿಭಾಗದ ಪ್ರೊಫೆಸರ್‌ಗಳು ಉಪಸ್ಥಿತರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top