ಒಟ್ಟುಗೂಡಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ: ಪುರುಷೋತ್ತಮ ತಲವಾಟ

Upayuktha
0


ಶಿವಮೊಗ್ಗ: ವಿಶ್ವರಂಗಭೂಮಿ ದಿನಾಚರಣೆಯ ಪ್ರಯುಕ್ತ ರಂಗಾಯಣ ಶಿವಮೊಗ್ಗದಲ್ಲಿ ರಂಗಚಿಂತನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿಗಳಾದ ಪುರುಷೋತ್ತಮ ತಲವಾಟರವರು ಮೇಕಪ್ ಮಾಡುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು. ಈ ವರ್ಷದ ವಿಶ್ವರಂಗಭೂಮಿ ಸಂದೇಶವನ್ನು ರಂಗಸಮಾಜದ ಮಾಜಿ ಸದಸ್ಯ, ರಂಗಕರ್ಮಿ ಆರ್.ಎಸ್. ಹಾಲಸ್ವಾಮಿ ವಾಚನ ಮಾಡಿದರು. ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಆಂಗಿಕ ಅಭಿನಯದ ಕುರಿತು ನೃತ್ಯಗುರು ಸಹನ ಚೇತನ್, ವಾಚಿಕ ಕುರಿತು ರಂಗಕರ್ಮಿ ಚೇತನ್ ಕುಮಾರ್ ಸಿ.ರಾಯನಹಳ್ಳಿ, ಆಹಾರ್ಯ ಕುರಿತು ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ, ಸಾತ್ವಿಕ ಕುರಿತು ಶ್ರೀಹರ್ಷ ಗೋ.ಭಟ್ ಪ್ರಾತ್ಯಕ್ಷಿಕೆ ನೀಡಿದರು.


ಕಾರ್ಯಕ್ರಮದ ಅಂತ್ಯದಲ್ಲಿ ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ಸದಭಿರುಚಿ ತಂಡದವರು ‘ಆನು ಒಲಿದಂತೆ ಹಾಡುವೆ’ ನಾಟಕ ಪ್ರದರ್ಶನ ನೀಡಿದರು. ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾ, ರಂಗಸಮಾಜದ ಮಾಜಿ ಸದಸ್ಯ ಹಾಲಸ್ವಾಮಿ ಆರ್.ಎಸ್. ನೃತ್ಯ ಗುರು ಸಹನಾ ಚೇತನ್, ನಮ್ಮ ಹಳ್ಳಿ ಥಿಯೇಟರ್ ನ ಅದ್ಯಕ್ಷ ಚೇತನ್ ಸಿ.ರಾಯನಹಳ್ಳಿ, ಕಥಾ ತಂಡದ ಶ್ರೀಹರ್ಷ, ರಂಗಕರ್ಮಿ ಮಂಜುನಾಥ ಸ್ವಾಮಿ.ಎಸ್, ಪ್ರತೀಕ್.ಸಿ.ಎಂ ಹಾಗೂ ರಂಗಾಯಣ ಶಿವಮೊಗ್ಗದ ಸಿಬ್ಬಂದಿ ವರ್ಗದವರು ಮತ್ತು ಹಲವು ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top