ತೆಂಕನಿಡಿಯೂರು ಕಾಲೇಜು : ಕ್ಯಾಂಪಸ್‌ನಿಂದ ಕಂಪನಿಗೆ–ಉಪನ್ಯಾಸ ಕಾರ್ಯಕ್ರಮ

Chandrashekhara Kulamarva
0


ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ಐಕ್ಯೂಎಸಿ ಮತ್ತು ಉದ್ಯೋಗ ಮಾಹಿತಿ ಘಟಕ ಇದರ ಸಹಯೋಗದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ “ಎ ಜರ್ನಿ ಫ್ರಮ್ ಕಂಪನಿ ಟು ಕಾರ್ಪೋರೇಟ್” ಎಂಬ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.  


ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ಚಂದನ್ ರಾವ್, ಸಾಫ್ಟ್ಸ್ಕಿಲ್ ಟ್ರೈನರ್ ಹಾಗೂ ಫ್ರೀಲ್ಯಾನ್ಸ್ ಕನ್ಸಲ್ಟೆಂಟ್ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವುದರೊಂದಿಗೆ ಕಾರ್ಪೋರೇಟ್ ವಲಯದಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯ ಮತ್ತು ಜ್ಞಾನ ಹೇಗೆ ಪಡೆಯಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದರು.  ಸಂದರ್ಶನ ಎದುರಿಸುವ ಬಗೆ, ರೆಸ್ಯೂಮ್ ಬರೆಯುವ ವಿಧಾನ, ಗುಂಪು ಸಂದರ್ಶನದ ನಿಯಮಗಳು ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಸಮೂಹ ಚರ್ಚೆ ಮತ್ತು ಅಣಕು ಸಂದರ್ಶನವನ್ನು ನಡೆಸಲಾಯಿತು.  


ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ಶ್ರೀ ದಿನೇಶ್ ಎಂ. ಕಾರ್ಯಾಗಾರವನ್ನು ಸಂಯೋಜಿಸಿ ಪ್ರಸ್ತಾವನೆಗೈದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಬಿಂದು ಟಿ., ವ್ಯವಹಾರ ಅಧ್ಯಯನಶಾಸ್ತ್ರ ಮುಖ್ಯಸ್ಥರಾದ ಡಾ. ರಘು ನಾಯ್ಕ, ಸಹಾಯಕ ಪ್ರಾಧ್ಯಾಪಕರಾದ ಡಾ. ಗೀತಾ ಎನ್. ಉಪಸ್ಥಿತರಿದ್ದರು.  ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಶ್ರದ್ಧಾ ಸ್ವಾಗತಿಸಿ, ಶ್ರೇಯಾ ಪರಿಚಯಿಸಿ, ಅನನ್ಯ ವಂದಿಸಿದರು. ಬಿ.ಬಿ.ಎ. ವಿದ್ಯಾರ್ಥಿ ನಿತೀಶ್ ಜಿ. ಅಂಚನ್ ಕಾರ್ಯಕ್ರಮ ನಿರೂಪಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top