ದೃಢ ನಿಧಾ೯ರ ಕಠಿಣ ಪರಿಶ್ರಮ ಯಶಸ್ವಿನ ಹಾದಿ: ಪ್ರೊ.ಸುರೇಂದ್ರನಾಥ ಶೆಟ್ಟಿ

Upayuktha
0



ಉಡುಪಿ: ಇಂದಿನ ಸ್ಥಧಾ೯ತ್ಮಕ ಪರೀಕ್ಷೆಗಳನ್ನು ಸಮಥ೯ವಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖವಾಗಿ ಮೈಗೂಡಿಸಿ ಕೊಳ್ಳಬೇಕಾದ ಎರಡು ಗುಣಗಳೆಂದರೆ ತಮ್ಮ ಗುರಿಯ ಬಗ್ಗೆ ದೃಢ ನಿಧಾ೯ರ ಕಠಿಣ ಪರಿಶ್ರಮ .ತಮ್ಮ ಕಲಿಕೆಯ ದಾರಿಯಲ್ಲಿ ಅಭಿರುಚಿ ಮತ್ತು ಅಧ್ಯಯನದಲ್ಲಿ ನಿರಂತರತೆ ಪಾಲಿಸಲೇ ಬೇಕು. ಇಂದಿನ ಸಿ.ಇ.ಟಿ.ಎನ್.ಇ.ಇ.ಟಿ.ಅಂತಹ ಸ್ಪಧಾ೯ತ್ಮಕ ಪರೀಕ್ಷೆಗಳನ್ನು ಸುಗಮವಾಗಿ ಎದುರಿಸಿ ಗೆಲ್ಲ ಬೇಕಾದರೆ ತಾವು ಕಲಿತು ಪರಿಣಿತಿಗೊಂಡ ವಿಷಯಗಳ ಮೇಲು ಹೆಚ್ಚಿನ ತರಬೇತಿ ಅನಿವಾರ್ಯತೆ ಇದೆ. ಬಹುಮುಖ್ಯವಾಗಿ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಇದರಲ್ಲಿ ಹೆಚ್ಚಿನ ಸಹಾಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಉಡುಪಿ ಬ್ರಹ್ಮಾವರ ಕಾಪು ಬಂಟರ ಸಂಘ ಹೆಚ್ಚಿನ ಆಸಕ್ತಿ ವಹಿಸಿ ಉಚಿತ ತರಬೇತಿಯನ್ನು ಉಡುಪಿಯ ವಿನಾಯ ಅಕಾಡೆಮಿಯ ಮೂಲಕ ಹಮ್ಮಿಕೊಂಡಿರುವುದು ಶ್ಲಾಘನೀಯ  ಎಂದು ಉಡುಪಿ ಎಂಜಿಎಂ.ಕಾಲೇಜಿನ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.



ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇವರ ಆಶ್ರಯದಲ್ಲಿ ಉಡುಪಿ ಕಾಪು ಬ್ರಹ್ಮಾವರ ತಾಲೂಕಿನ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.



ಸಭೆಯ ಅಧ್ಯಕ್ಷತೆಯನ್ನು ಶಿವ ಪ್ರಸಾದ್ ಹೆಗ್ಡೆ ಉಡುಪಿ ಬಂಟರ ಸಂಘದ ಸಂಚಾಲಕ ಇವರು ವಹಿಸಿದ್ದರು. ನಿಕಟ ಪೂವಾ೯ಧ್ಯಕ್ಷ ಜಯರಾಜ್ ಹೆಗ್ಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬಂಟರ ಸಂಘದ  ಹಿರಿಯ ಸದಸ್ಯರಾದ ಪ್ರಸಾದ್ ಹೆಗ್ಡೆ ಮಾರಾಳಿ; ಚೇಕಾ೯ಡಿ ಹರೀಶ್ ಶೆಟ್ಟಿ, ಕಿಶೋರ್ ಶೆಟ್ಟಿ, ಮಿಥುನ್ ಹೆಗ್ಡೆ, ಇಂದಿರಾ ಎಸ್.ಹೆಗ್ಡೆ, ಅನುಪಮ ಪ್ರಸಾದ್ ಶೆಟ್ಟಿ, ತಾರಾನಾಥ್ ಹೆಗ್ಡೆ ಮಣಿಪಾಲ್, ವಿನಯ ಅಕಾಡೆಮಿಯ ಪ್ರಶಾಂತ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟರ ಸಂಘದ ಉಪ ಸಂಚಾಲಕ ದಿನೇಶ್ ಹೆಗ್ಡೆ ವಂದಿಸಿ ಹಿರಿಯ ಸದಸ್ಯ ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top