ಮಂಗಳೂರು: ಕೆನರಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 'ಸೃಜನಾ 2024' ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸ್ವಯಂಸೇವಕರಿಗಾಗಿ ನಡೆಸುವ ಸ್ಪರ್ಧಾವಳಿಗೆ ಸತೀಶ ನಾಯ್ಗ ಕೊಡ್ಮಣ್ ಕೋಡಿ,ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರು ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.
ಶ್ರೀ ರಾಮಕೃಷ್ಣ ಮಿಷನ್- ಸ್ವಚ್ಛ ಮಂಗಳೂರು ಅಭಿಯಾನದ ಸಂಯೋಜಕರಾದ ರಂಜನ್ ಬೆಳ್ಳಿರ್ಪಾಡಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸೇವೆ ಎಂಬುದು ಸುಂದರವಾದ ಪರಿಕಲ್ಪನೆ. ಉಚಿತ ಸೇವೆ ಮಾಡಿದಷ್ಟು ಸಂತೋಷ ಉಂಟಾಗುವುದು. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಯೋಜನೆ, ಯೋಚನೆಗಳನ್ನು ಬದಲಾಯಿಸಿ. ಆಗ ಯಶಸ್ಸಿನ ಗಂಥವ್ಯವನ್ನು ತಲುಪಬಹುದು. ಸಾರ್ವಜನಿಕ ಜೀವನಕ್ಕೆ ಬೇಕಾದ ಪ್ರಮುಖ ಅಂಶ ಸಂವಹನ ಮತ್ತು ಸೃಷ್ಟಿ ಶೀಲತೆ. ಇದು ಮುಂದೆ ಉದ್ಯೋಗಕ್ಕೆ ಹೋದಾಗಲೂ ಅಗತ್ಯವಾಗಿದೆ ಎಂದು ಹೇಳಿದರು.
ಅಲ್ಲದೆ ತನ್ನ ಮಾತನಾಡುವ ಆಯಾಮ ತೆರೆದುಕೊಂಡದ್ದು ಅದಕ್ಕೆ ಬೀಜಾಂಕುರವಾದದ್ದು ಕಾಲೇಜು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಎಂಬುದನ್ನು ಸ್ಮರಿಸಿದರು. ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಶ್ರೀ ಎಂ ರಂಗನಾಥ ಭಟ್ ಅಧ್ಯಕ್ಷತೆ ವಹಿಸಿದ್ದು ಎನ್ ಎಸ್ ಎಸ್ ಶಿಬಿರವು ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಬಹಳ ಪ್ರಯೋಜನಕಾರಿ ಎಂದರು. ಕಾಲೇಜು ಪ್ರಾಂಶುಪಾಲೆ ಶುಭ ಹಾರೈಸಿದರು. ರಾಸೇಯೋ ಅಧಿಕಾರಿ ಶ್ರೀಮತಿ ಸೀಮಾ ಪ್ರಭು ವರದಿ ವಾಚಿಸಿದರು.
ಸಿಬ್ಬಂದಿ ಕ್ಷೇಮ ಪಾಲನಾ ಕಾರ್ಯದರ್ಶಿ ಡಾ. ಕಲ್ಪನಾ ಪ್ರಭು ಸ್ವಾಗತಿಸಿ, ರಾ ಸೇ ಯೋ ಅಧಿಕಾರಿ ಎಂ ಕೀರ್ತನ ಭಟ್ ವಂದಿಸಿದರು. ಸಾರಿಕಾ ನಿರೂಪಿಸಿದರು. ಸಂಚಾಲಕ ಶ್ರೀ ಸಿ ಎ ಎಂ ಜಗನ್ನಾಥ ಕಾಮತ್, ವ್ಯವಸ್ಥಾಪಕ ಶ್ರೀ ಕೆ ಶಿವಾನಂದ ಶೆಣೈ, ಆಡಳಿತ ಮಂಡಳಿ ಪದಾಧಿಕಾರಿ ಅಶ್ವಿನಿ ಕಾಮತ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಗುರುರಾಜ್ ಶೇಟ್ ಉಪಸ್ಥಿತರಿದ್ದರು.
ಸಮಾರೋಪ:
ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಇದರ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ರಾ. ಸೇ. ಯೋ ದಂತಹ ವೇದಿಕೆಯಲ್ಲಿ ಭಾಗವಹಿಸಿ ಆತ್ಮ ವಿಶ್ವಾಸ ಗಳಿಸಿಕೊಂಡಲ್ಲಿ ಮುಂದೆ ಶಕ್ತಿಯುತ ಸಮಾಜ ಕಟ್ಟಲು ಸಾಧ್ಯ. ನಿಜವಾದ ಶಿಕ್ಷಣ ಕೇವಲ ಪಾಠವಲ್ಲ. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಲೆಯೆತ್ತಿ ನಿಲ್ಲಬಲ್ಲೆ ಎಂಬುದನ್ನು ಕಲಿಸುವುದೇ ನಿಜವಾದ ಶಿಕ್ಷಣ ಎಂದು ನುಡಿದರು.
ಕಾಲೇಜು ಸಂಚಾಲಕರಾದ ಸಿಎ ಎಂ ಜಗನ್ನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದು, ಯುವಕರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು, ಸಮಾಜ ಸೇವಾಕಾರ್ಯಗಳನ್ನು ಮಾಡಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ ಎಂದರು.
ಸ್ವಯಂಸೇವಕಿ ಶ್ರೀಮಾ ಸ್ವಾಗತಿಸಿ, ರಾ ಸೇ ಯೋ ಅಧಿಕಾರಿ ಸೀಮಾ ಪ್ರಭು ವಂದಿಸಿದರು. ವೀಕ್ಷಾ ನಿರೂಪಿಸಿದರು. ವ್ಯವಸ್ಥಾಪಕರಾದ ಶ್ರೀ ಕೆ ಶಿವಾನಂದ ಶೆಣೈ, ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ, ಸಿಬ್ಬಂದಿ ಕ್ಷೇಮಪಾಲನಾಧಿಕಾರಿ ಡಾ. ಕಲ್ಪನಾ ಪ್ರಭು, ರಾ. ಸೇ ಯೋ ಅಧಿಕಾರಿಗಳಾದ ಕೀರ್ತನಾ ಭಟ್, ಶ್ರೀ ಶುಭಂ ಕುಲಾಲ್, ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಅನಿಲ, ಉಪಸ್ಥಿತರಿದ್ದರು.
ಫಲಿತಾಂಶ:
25 ಕಾಲೇಜುಗಳಿಂದ ಸುಮಾರು 450 ಸ್ಪರ್ಧಾಳುಗಳು ಭಾಗವಹಿಸಿದ್ದು, ಬೀದಿನಾಟಕ, ಚರ್ಚೆ, ಚಿತ್ರಕಲೆ, ಮನೋರಂಜನೆ, ಛಾಯಾಚಿತ್ರ ಮುಂತಾದ 9 ವಿಭಿನ್ನ ಸ್ಪರ್ಧೆಗಳನ್ನು ನಡೆಸಲಾಯಿತು. ಅಂತಿಮವಾಗಿ ಎಸ್.ಡಿ.ಎಂ ಕಾಲೇಜು ಮಂಗಳೂರು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಗೋವಿಂದ ದಾಸ ಕಾಲೇಜು, ಸುರತ್ಕಲ್ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ