ಬಿಓಬಿ ಅಂತರ್ ಕಾಲೇಜು ಹಿಂದಿ ಸಂಗೋಷ್ಠಿ

Upayuktha
0


ಮಂಗಳೂರು: ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ, ಮಂಗಳೂರು ಮತ್ತು ಬೆಸಂಟ್ ಮಹಿಳಾ ಕಾಲೇಜ್, ಕೊಡಿಯಾಲ್ ಬೈಲ್, ಮಂಗಳೂರು ವತಿಯಿಂದ ಜಂಟಿಯಾಗಿ ಅಂತರ ಕಾಲೇಜ್ ಹಿಂದಿ ಸಂಗೋಷ್ಠಿಯನ್ನು ಆಚರಿಸಲಾಗಿದ್ದು, ಮಂಗಳೂರಿನ ಸ್ಥಳೀಯ ಕಾಲೇಜ್, ಉಡುಪಿ ಮತ್ತು ಸೂಳ್ಯ ಕಾಲೇಜ್ ನಿಂದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು, ವಿದ್ಯಾರ್ಥಿ ಸಂಗೋಷ್ಠಿ ಮತ್ತು ಪೇಪರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ವಿಮರ್ಶಿಸಿ ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಿದರು.


ಈ ಕಾರ್ಯಕ್ರಮವು ಡಾ. ಪ್ರವೀಣ ಕುಮಾರ್ ಕೆ ಸಿ, ಪ್ರಾಂಶುಪಾಲರು, ಬೆಸೆಂಟ್ ಮಹಿಳಾ ಕಾಲೇಜ್ ರವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಹಾಗೂ  ಸಂಗೋಷ್ಠಿಯ ಮುಖ್ಯ ಅತಿಥಿಯಾಗಿ ಅಶ್ವಿನಿ ಕುಮಾರ್, ಉಪ ಮಹಾಪ್ರಬಂಧಕ- ನೆಟ್ ವರ್ಕ್, ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ, ಮಂಗಳೂರು ಉಪಸ್ಥಿತರಿದ್ದರು ಮತ್ತು ಬೆಸೆಂಟ್ ಮಹಿಳಾ ಕಾಲೇಜ್ ನ ಆಡಳಿತ ಅಧಿಕಾರಿ ಪ್ರೊ. ರಾಜಶೇಖರ ಹೆಬ್ಬಾರ್, ಕಾರ್ಯಕ್ರಮದ ಉಪಾಧ್ಯಕ್ಷರಾದ ಡಾ. ಮಂಜುಳ ಕೆ ಟಿ ಉಪಸ್ಥಿತರಿದ್ದರು. ಕಾಲೇಜ್ ನ ಹಿಂದೀ ವಿಭಾಗಧ್ಯಕ್ಷರಾದ ಡಾ. ಪರಶುರಾಮ್ ಮಾಲಗೆ ಮತ್ತು ಬ್ಯಾಂಕ್ ಆಫ್ ಬರೋಡಾದ ರಾಜಭಾಷಾ ಅಧಿಕಾರಿಯಾದ ಶ್ರೀಮತಿ ಪುಷ್ಪಲತಾ ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top