ಬೆಂಗಳೂರು: ಆಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಮಾಡಿ ಮಂಡಲೋತ್ಸವ ನೆರವೇರಿಸಿ ಬೆಂಗಳೂರಿಗೆ ಆಗಮಿಸಿದ ಸಮಸ್ತ ಹಿಂದೂ ಸಮಾಜದ ಹೆಮ್ಮೆ ಪರಮ ಪೂಜ್ಯ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ಅನುಗ್ರಹ ಪಡೆದ ದಿವ್ಯ ಕ್ಷಣವಿದು.
ಗುರುವಾರ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಯೋಜಿಸಲಾಗಿದ್ದ ಪೇಜಾವರ ಶ್ರೀಗಳ ಬೃಹತ್ ಅಭಿವಂದನಾ ಸಭೆಯ ಸಂದರ್ಭದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು.
ಕಳೆದ 91 ದಿನಗಳಿಂದ ಚಂದ್ರಶೇಖರ ಕುಳಮರ್ವ ಅವರ ಸಂಪಾದಕತ್ವದ ಉಪಯುಕ್ತ.ಕಾಮ್ ನಲ್ಲಿ ನಡೆಯುತ್ತಿರುವ ಶ್ರೀ ರಾಮ ಕಥಾ ಲೇಖನ ಅಭಿಯಾನದ ಸಮಾರೋಪ ಲೇಖನವನ್ನು ಇದೇ ಮುಂಬರುವ ಏಪ್ರಿಲ್ 17 ಶ್ರೀ ರಾಮ ನವಮಿಯಂದು ಪೂಜ್ಯರು ಬರೆದು ಅನುಗ್ರಹ ಮಾಡಬೇಕು ಎಂಬ ವಿನಂತಿಗೆ ಶ್ರೀಗಳು ಸಮ್ಮತಿಸಿದರು.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆಯ ಐತಿಹಾಸಿಕ ಕ್ಷಣಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್ 15ರಿಂದ ಉಪಯುಕ್ತ ನ್ಯೂಸ್ ಬಳಗದಲ್ಲಿ ಪ್ರಕಟಣೆ ಆರಂಭಿಸಿದ ಶ್ರೀರಾಮ ಕಥಾ ಲೇಖನ ಅಭಿಯಾನ ಸರಣಿಗೆ ವ್ಯಾಪಕ ಸ್ಪಂದನೆ, ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈ ಸರಣಿಯು 92 ಲೇಖನಗಳನ್ನು ಪೂರೈಸಿ, ಶತಕ ದಾಟಿ, ಶ್ರೀರಾಮ ನವಮಿಯ ವೇಳೆಗೆ 125 ಲೇಖನಗಳನ್ನು ಪೂರ್ಣಗೊಳಿಸಲಿದೆ.
-ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಸಂಚಾಲಕರು, ಶ್ರೀ ರಾಮ ಕಥಾ ಲೇಖನ ಅಭಿಯಾನ.
ಕಾರ್ಯ ನಿರ್ವಾಹಕರು
ಪ್ರಣವ ಮೀಡಿಯಾ ಹೌಸ್ ಪ್ರಕಾಶನ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ