ಶತದಿನೋತ್ಸವದ ಸಂಭ್ರಮದಲ್ಲಿ ಶ್ರೀರಾಮ ಕಥಾ ಲೇಖನ ಅಭಿಯಾನ

Upayuktha
0

ಡಿಸೆಂಬರ್ 15ರಿಂದ ಆರಂಭವಾದ ಅಭಿಯಾನಕ್ಕೆ ಇದೀಗ 100ನೇ ದಿನದ ಸಂಭ್ರಮ



ಹರೇ ರಾಮ

ನವ ಭಾರತದ ಭವಿಷ್ಯದ ಮುನ್ನುಡಿಯಾಗಿ ಮೋಕ್ಷದಾಯಿ ದೇವಭೂಮಿ ಅಯೋಧ್ಯೆಯಲ್ಲಿ ಸಮಸ್ತ ಭಾರತೀಯರ ಕನಸು ಸಾಕಾರಗೊಂಡು, ಶ್ರೀ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ 2023ರ ಡಿಸೆಂಬರ್ 15 ರಿಂದ ಪ್ರಾರಂಭಗೊಂಡ ಶ್ರೀ ರಾಮಾಯಣಧಾರಿತ ಈ ಲೇಖನ ಅಭಿಯಾನವು ಇದೀಗ ಒಂದು ನೂರು ದಿನದ ಸಂಭ್ರಮದ ಮಧುರ ಘಳಿಗೆಯಲ್ಲಿ ಪರಿಶೋಭಿಸುತ್ತಿದೆ.


ಅಭಿಯಾನಕ್ಕೆ ನಾಂದಿಯಾದದ್ದು ಅಧಿಕ ಶ್ರಾವಣ ಮಾಸದಲ್ಲಿ,ಒಂದು ನಿರ್ದಿಷ್ಟ ರೂಪ ದೊರೆತಿದ್ದು ದೀಪಾವಳಿಯ ಸಮಯದಲ್ಲಿ, ಲೇಖನಗಳಿಗೆ ಮನವಿ ಕೋರಿದ್ದು ಕನಕದಾಸ ಜಯಂತಿಯಂದು, ಆರಂಭವಾದದ್ದು ವ್ಯಾಸರಾಜ ಮಠದ ಪರಂಪರೆಯ ಸಂಪ್ರದಾಯ ಪ್ರವರ್ತಕ ಕಂಬಾಲೂರು ಶ್ರೀ ರಾಮಚಂದ್ರ ತೀರ್ಥ ಆರಾಧನೆಯಂದು.


ಪರಮ ಪೂಜ್ಯ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಆಶೀರ್ವಾದಪೂರ್ವಕವಾಗಿ ಆರಂಭಗೊಂಡ ಲೇಖನಮಾಲೆ ನಾಡಿನ ಶ್ರೀರಾಮನ ಅಂತರಂಗ ಭಕ್ತರನ್ನು ತಲುಪಿ ಅವರೆಲ್ಲರೂ ಈ ಅಭಿಯಾನದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು ತಮ್ಮ ಸ್ನೇಹಿತ- ಬಂಧುಗಳಿಂದಲೂ ಬರೆಯಲು ಪ್ರೇರೇಪಿಸಿರುವುದು ಅಭಿಯಾನಕ್ಕೆ ಸಂದ ಜಯವಂದೇ ಭಾವಿಸಿದ್ದೇನೆ.



 ಕಳೆದ ಮೂರು ತಿಂಗಳಿಂದ ಪ್ರತಿ ದಿನ ಉಪಯುಕ್ತ.ಕಾಂ ವೆಬ್ ಸೈಟ್ ನಲ್ಲಿ  ಶ್ರೀರಾಮಾವತಾರದ ಸಂದೇಶವನ್ನು ವಿವಿಧ ಲೇಖಕರು ಅಭಿವ್ಯಕ್ತಿಗೊಳಿಸುತ್ತಾ, ಭಾರತೀಯರ ಅಸ್ಮಿತೆಯಾದ ರಾಮಾಯಣದ ಬಹುಮುಖಿ ಆಯಾಮವನ್ನು ವಿಭಿನ್ನ -ವಿಶಿಷ್ಟ- ವಿಚಾರಧಾರೆಯ ಸರಣಿಯ ಮೂಲಕ ತೆರೆದಿಡುವಲ್ಲಿ, ಮುಂದಿನ ಪೀಳಿಗೆಯವರಲ್ಲಿ ಆಸಕ್ತಿ ಹುಟ್ಟುವಂತೆ ಅಧ್ಯಯನಶೀಲ- ಸಂಶೋಧನಾತ್ಮಕವಾಗಿ ಬರೆಯುತ್ತಿರುವುದು ಕನ್ನಡ ಡಿಜಿಟಲ್ ಪತ್ರಿಕಾ ಮಾಧ್ಯಮದಲ್ಲಿ ಇದೊಂದು ದಾಖಲೆಯೇ ಸರಿ.



ಸನಾತನ ಧರ್ಮದ ಕಲಶಪ್ರಾಯವಾದ ಈ ಐತಿಹಾಸಿಕ ಘಟನೆಗೆ ನಾವೆಲ್ಲ ಸಾಕ್ಷಿಯಾಗುತ್ತಿರುವುದು ನಮ್ಮ ಪಾಲಿನ ಸುದೈವವೆಂದೆ ನಾನು ಭಾವಿಸುತ್ತಾ, ಆರಂಭದಲ್ಲಿ 30 ದಿನಗಳಲ್ಲಿ 30 ಮಂದಿ ಲೇಖಕರಿಂದ ಈ ಅಭಿಯಾನವನ್ನು ಸಂಪನ್ನಗೊಳಿಸಬೇಕೆಂಬುದಷ್ಟೇ ನನ್ನ ಯೋಚನೆಯಾಗಿತ್ತು.


ದೈವ ಕೃಪೆ ಬೇರೆಯದ್ದೆ ಇದ್ದು 30  ನಾಲ್ಕು /ಐದು ಪಟ್ಟು ಹಿರಿದಾಗಿ ಈ ಚಿಂತನ ಮಂಥನದ ಅಭಿಯಾನದಲ್ಲಿ ಹಿರಿಯ ನಾಗರಿಕರು,ಮಧ್ಯ ವಯಸ್ಕರು, ವೃತ್ತಿ ನಿರತರು, ಗೃಹಣೀಯರು,ಯುವ ವಿದ್ಯಾರ್ಥಿಗಳು, ಶೈಕ್ಷಣಿಕ ವಲಯದ ಉಪಕುಲಪತಿಗಳು,ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು ಹೀಗೆ ರಾಜ್ಯ_ ಹೊರರಾಜ್ಯದ ಪರದೇಶದಲ್ಲಿದ್ದು  ಕನ್ನಡದ ಬಗ್ಗೆ ಪ್ರೀತಿ ಇರುವ ಪ್ರಾಜ್ಞ ಲೇಖಕರು ಕೈಜೋಡಿಸಿ   ಸಾರಸ್ವತ ಸೇವೆಯ ಮೂಲಕ  ಸಹಕರಿಸಿದ್ದಾರೆ.


 ಬೆಂಗಳೂರಿನ ಲೇಖಕಿ ಮಾಧುರಿ ದೇಶಪಾಂಡೆ ಈ ನಿಟ್ಟಿನಲ್ಲಿ ವಿಶೇಷ ರೀತಿಯಲ್ಲಿ ಸಹಕರಿಸಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿ  ಸಕಾಲದಲ್ಲಿ ಉತ್ತಮವಾದ ಲೇಖನಗಳನ್ನು ಬರೆದುಕೊಟ್ಟು ಈ ಅಭಿಯಾನ ಯಶಸ್ವಿಯಾಗುವಂತೆ ಮಾಡಿರುವ ಎಲ್ಲ ಹಿರಿಯ - ಕಿರಿಯ ಲೇಖಕರಿಗೆ   ಅಯೋಧ್ಯಾಪತಿ ಪ್ರಭು ಶ್ರೀರಾಮಚಂದ್ರ ಅನುಗ್ರಹ ಪೂರ್ವಕ  ಅಭಿನಂದನೆ ತಿಳಿಸ ಬಯಸುತ್ತೇನೆ.


ಮುಂಬರುವ ಕ್ರೋಧಿ ಸಂವತ್ಸರ ಚೈತ್ರ ಶುದ್ಧ ರಾಮನವಮಿಯಂದು ಅಭಿಯಾನದ 125ನೇ ದಿನವಾಗುತ್ತದೆ.



ಅಂದು ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರು ಶ್ರೀ ಬಾಲರಾಮನ ಭವ್ಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮತ್ತು 48 ದಿನಗಳ ಕಾಲ ಮಂಡಲ ಪೂಜಾದಿ ಗಳನ್ನು ಆಗಮೋಕ್ತವಾಗಿ ನಿರ್ವಹಿಸಿದ  ಹೆಮ್ಮೆಯ ಕನ್ನಡಿಗರು ಆದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಅಮೃತೋಪದೇಶ ಲೇಖನ ಈ ಅಭಿಯಾನಕ್ಕೆ ಶೋಭೆ ತರುವುದು ಎಂದು ನಂಬಿದ್ದೇವೆ. 


 ಧರ್ಮವೇ ಮೈವತ್ತ ರೂಪ,ಭಾರತದ ಆತ್ಮ _ ಶ್ರೀರಾಮ.ಅವನು ಕೇವಲ ಶಿಲಾಮಂದಿರದಲ್ಲಷ್ಟೇ ನೆಲೆಗೊಳ್ಳದೆ, ಸಮಸ್ತ ಭಾರತೀಯರ ಹೃದಯ ಮಂದಿರದಲ್ಲಿ ಪ್ರತಿಷ್ಠೆಗೊಳ್ಳಬೇಕು ಸುಖ ಸಮೃದ್ಧಿಯ ರಾಮ ರಾಜ್ಯ ಪುನಃ ಸ್ಥಾಪನೆಗೊಳ್ಳಬೇಕು ಎಂಬುದೇ ಈ ಹೊತ್ತಿನ ನಮ್ಮೆಲ್ಲರ ಆಶಯವಾಗಿದೆ.


 ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಮೌಲ್ಯಯುತ ಪುಸ್ತಕ ಪ್ರಕಟಣೆಯ ಮೂಲಕ ಉತ್ತಮ ಸುಧಾರಿತ ಸಮಾಜವನ್ನು ನಿರ್ಮಿಸುವತ್ತ ಒಂದು ಕಿರು ಪ್ರಯತ್ನವಾಗಿ ಈ ಅಭಿಯಾನವನ್ನು ಕೈಗೊಂಡಿದ್ದು ಏಪ್ರಿಲ್ ಅಂತ್ಯದವರೆಗೂ ಅಭಿಯಾನವನ್ನು ಮುಂದುವರಿಸಿ ಈ ಅಭಿಯಾನದಲ್ಲಿ ಪ್ರಕಟಗೊಂಡ ಲೇಖನಗಳನ್ನು ಶ್ರೀರಾಮ ಕಥಾ ಲೇಖನ ಅಭಿಯಾನ ಲೇಖಕರ ಸಮ್ಮಿಲನ ನಡೆಸಿ ಸಂಗ್ರಹಯೋಗ್ಯ ಆಕರ ಗ್ರಂಥವಾಗಿ ಹೊರತರಲು  ಯೋಚಿಸುತ್ತಿದ್ದೇನೆ.


 "ಶ್ರೀ ರಾಮಾಯಣ ಜ್ಞಾನ ದರ್ಪಣ" ಎಂಬ ಶೀರ್ಷಿಕೆಯಲ್ಲಿ 1/4 ಕ್ರೌನ್ ಆಕಾರದ,ಅಂದಾಜು 600 ಪುಟಗಳ ಎಲ್ಲ ವಯೋಮಾನದವರಿಗೂ ರುಚಿಸುವಂತಹ ರಾಮಾಯಣದ ಕುರಿತು ವಿಶೇಷ ಹಂದರ _ ವ್ಯಾಪ್ತಿ ವಿಸ್ತಾರವುಳ್ಳ ಸಂಪುಟ ಇದಾಗಲಿದೆ.


 ದಾನವು ಭಾರತೀಯ ಪರಂಪರೆಯ ವಿಶೇಷತೆಯಾಗಿದ್ದು ಸಿರಿವಂತರ ಸಾಮಾಜಿಕ ಹೊಣೆಗಾರಿಕೆ ಎಂದೇ ಭಾವಿಸಲಾಗಿದೆ.


 ಸಹೃದಯಿ ಅಧ್ಯಾತ್ಮ ಬಂಧು, ಓದುಗರ ಔದಾರ್ಯದ  ದೇಣಿಗೆ ಸಂಗ್ರಹ ಮೂಲಕ ಈ ಯೋಜನೆ ಕಾರ್ಯಗತಗೊಳ್ಳಲಿದೆ.


 ನಿಮ್ಮಲ್ಲಿ ನಮ್ಮ ಮನವಿ:


 ಈ ಬೃಹತ್ ಗ್ರಂಥದ ಪ್ರಕಟಣೆಯ ಪ್ರಾಯೋಜಕರಾಗಿ ನೀವು ನಿಮ್ಮ ಸೇವೆಯನ್ನು ಹೀಗೆ ಸಲ್ಲಿಸಬಹುದು :


 *  ಪ್ರಕಟಣೆಯ ಪೂರ್ವಭಾವಿ ಖರೀದಿಗೆ ಮುಂಗಡ ಹಣಕೊಟ್ಟು ಕಾಯ್ದಿರಿಸಬಹುದು


 *  ಪುಟ ಪ್ರಾಯೋಜಕರಾಗಬಹುದು ( ಒಂದು ಲೇಖನಕ್ಕೆ ಕನಿಷ್ಠ ₹ ಒಂದು ಸಾವಿರ ) ಇಲ್ಲಿ ನಿಮ್ಮ ಅಥವಾ ನೀವು ಸೂಚಿಸಿದವರ ಹೆಸರನ್ನು ಪ್ರಕಟಿಸಲಾಗುವುದು.


 *ಗ್ರಂಥ ದಾಸೋಹಿಗಳಾಗಿ ನಿಮ್ಮ ಪರಮಾಪ್ತರಿಗೆ ಉಡುಗೊರೆಯಾಗಿ ನೀಡಬಹುದು.


 ಹೆಚ್ಚಿನ ವಿವರಗಳಿಗೆ 97393 69621 ಸಂಪರ್ಕಿಸಬಹುದು.


 ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸಂಚಾಲಕರು, ಶ್ರೀರಾಮ ಕಥಾ ಲೇಖನ ಅಭಿಯಾನ ಮತ್ತು 

 ಕಾರ್ಯನಿರ್ವಾಹಕರು, ಪ್ರಣವ ಮೀಡಿಯಾ ಹೌಸ್  ಪ್ರಕಾಶನ ಬೆಂಗಳೂರು.




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top