ನಾಳೆ ಕು|| ಸಹನಾ ಹೊಸಮನಿ ಭಾಸ್ಕರ್ "ಭರತನಾಟ್ಯ ರಂಗಪ್ರವೇಶ"

Chandrashekhara Kulamarva
0

 


ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ ರೂವಾರಿ 'ಕಲಾಭೂಷಿಣಿ' ಗುರು ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು|| ಸಹನಾ ಹೊಸಮನೆ ಭಾಸ್ಕರ್ "ಭರತನಾಟ್ಯ ರಂಗ ಪ್ರವೇಶ"ಕ್ಕೆ ಆಣೆಯಾಗಿದ್ದಾರೆ. ಈ ಕಾರ್ಯಕ್ರಮವನ್ನು ಇದೇ ಮಾರ್ಚ್ 31, ಭಾನುವಾರ ಸಂಜೆ 5-00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ .


ಭರವಸೆಯ ಪ್ರತಿಭೆ : ಕು|| ಸಹನಾ ಕಳೆದ 15 ವರ್ಷಗಳಿಂದ ನೃತ್ಯ ಅಭ್ಯಾಸಿಸುತ್ತಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಜೂನಿಯರ್, ಸೀನಿಯರ್ ಹಾಗೂ ಗಂಧರ್ವ ಪರೀಕ್ಷೆ ಮಧ್ಯಮ ಪೂರ್ಣಗಳನ್ನು ಉತ್ತಮ ದರ್ಜೆಯಲ್ಲಿ ಮುಗಿಸಿದ್ದಾರೆ. ಪ್ರಸ್ತುತ ವಿದ್ವತ್ ಅಂತ್ಯ ತಯಾರಿಯಲ್ಲಿರುವ ಸಹನಾ ಭರವಸೆಯ ನೃತ್ಯ ಕಲಾವಿದೆ.

 

ನೃತ್ಯ ದಿಶಾ ಸಂಸ್ಥೆಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಸಹನಾ ಸಂಸ್ಥೆಯ ನೃತ್ಯ ನೀರಾಜನ, ನೃತ್ಯ ಸಂಭ್ರಮ ಒಳಗೊಂಡು ಹಂಪಿ ಉತ್ಸವ, ದಸರಾ ಉತ್ಸವ, ದುಬೈನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ, G20 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

 

ಎಂಬಿಎ ಪದವಿಧರೆ ಸಹನಾ ಪ್ರಸ್ತುತ ವೃತ್ತಿ ನಿರತರಾಗಿದ್ದಾರೆ. 


ಇವರ ರಂಗಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಎಂ ಸೂರ್ಯ ಪ್ರಸಾದ್, ಎಸ್ ಕುಮಾರ್ ಬಂಗಾರಪ್ಪ, ಸೈಯದ್ ಸಲಾಉದ್ದೀನ್ ಪಾಶ, ಗುರು  ಪ್ರಕಾಶ್ ಎಸ್ ಅಯ್ಯರ್, ಕೃಷ್ಣಮೂರ್ತಿ ಲಕ್ಷ್ಮಣ ಆಗಮಿಸಲಿದ್ದಾರೆ . 

 

ಸಹನಾ ರಂಗ ಪ್ರವೇಶ ಪ್ರಸ್ತುತಿಗೆ ಗುರುದರ್ಶನಿ ಮಂಜುನಾಥ್ (ನಟ್ಟುವಾಂಗ), ವಿದುಷಿ  ಭಾರತಿ ವೇಣುಗೋಪಾಲ್ (ಗಾಯನ ), ವಿದ್ವಾನ್ ಎಸ್ ವಿ ಗಿರಿಧರ್ ( ಮೃದಂಗ ), ವಿದ್ವಾನ್ ಎಚ್.ಎಸ್. ವೇಣುಗೋಪಾಲ್ (ಕೊಳಲು), ವಿದ್ವಾನ್ ಕಾರ್ತಿಕ್ ವೈದಾತ್ರಿ (ರಿದಂ ಪ್ಯಾಡ್) ನಲ್ಲಿ ಸಹಕರಿಸಲಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top