ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನೂತನ ಕಟ್ಟಡಕ್ಕೆ ಸ್ಥಳಾಂತರ

Upayuktha
0




ಮಂಗಳೂರು
: ಮಂಗಳೂರು ನಾಟೆಕಲ್ಲಿನಲ್ಲಿರುವ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ನೂತನ ಭವ್ಯ ಕಟ್ಟಡಕ್ಕೆ ವಿಧಿವತ್ತಾದ ಪ್ರಾರ್ಥನೆಯೊಂದಿಗೆ ಇಂದು (ಮಾ.7) ಸ್ಥಳಾಂತರಿಸಲಾಯಿತು.



ಕುಂಬಳೆಯ ಸೈಯದ್ ಅಟ್ಟ ಕೋಯಾ ತಂಙಳ್ ಅವರು ಈ ನೂತನ‌ ಕಟ್ಟಡದ ಚಾಲನೆಯನ್ನು ಪ್ರಾರ್ಥನೆ ಮುಖಾಂತರ ನೆರವೇರಿಸಿದರು.



ಸಂಸ್ಥೆಯ ಮುಖ್ಯಸ್ಥರಾದ ಡಾ|| ಕಣಚೂರು ಮೋನು, ನಿರ್ದೇಶಕ  ಅಬ್ದುಲ್ ರೆಹೆಮಾನ್ , ಎ.ಎ. ಹೈದರ್ ಪರ್ತಿಪಾಡಿ, ಹಾಗೂ ಊರ ಪರವೂರ ಇತರ ಗಣ್ಯರೂ, ಕಣಚೂರು ಮೆಡಿಕಲ್ ಕಾಲೇಜಿನ ಪ್ರಾಚಾರ್ಯ, ಡೀನ್ ಮತ್ತಿತರ ಮುಖ್ಯಸ್ಥರೂ ಪಾಲ್ಗೊಂಡಿದ್ದ ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ಪ್ರಾಚಾರ್ಯೆ ಡಾ ವಿದ್ಯಾಪ್ರಭಾ, ವೈದ್ಯಕೀಯ ಅಧೀಕ್ಷಕ ಡಾ ಸುರೇಶ ನೆಗಳಗುಳಿ, ಡಾ ಕಾರ್ತಿಕ್, ಡಾ ಜೈನುದ್ದೀನ್, ಡಾ ಸಲೀಮಾ, ಡಾ ಕೇಶವ ರಾಜ್, ಮತ್ತಿತರ ವೈದ್ಯಕೀಯ ಹಾಗೂ ವೈದ್ಯಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top