ಪುತ್ತೂರು: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ’ರಂಗಸ್ಥಳ’ ಚಲನಚಿತ್ರದ ಮುಹೂರ್ತ ಭಾನುವಾರ ನಡೆಯಿತು.
ಶ್ರೀ ಪಂಚಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ದೇಗುಲದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಪ್ರಸಾದವನ್ನು ಕ್ಯಾಮರಾಕ್ಕೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ಚಲನಚಿತ್ರದ ನಿರ್ಮಾಪಕ ರೇವಣ್ಣ ಮಂಡ್ಯ ಕ್ಲ್ಯಾಪ್ ಮಾಡುವ ಮೂಲಕ ಮುಹೂರ್ತ ನಡೆಸಿದರು. ಬೆಟ್ಟ ರಮೇಶ್ ಭಟ್ ಕ್ಯಾಮರಾಕ್ಕೆ ಚಾಲನೆ ನೀಡಿದರು.
ಮೊದಲ ಹಂತದಲ್ಲಿ 33 ದಿನಗಳು ಚಿತ್ರೀಕರಣ ನಡೆಯಲಿದ್ದು, ಎರಡನೇ ಹಂತದ ಚಿತ್ರೀಕರಣ ಜೂನ್‌ನಲ್ಲಿ ನಡೆಯಲಿದೆ. ಕರಾವಳಿ ಭಾಗದ ಸ್ಥಳೀಯ ಪ್ರತಿಭೆಗಳಿಗೆ ಚಿತ್ರದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಚಲನಚಿತ್ರದ ನಿರ್ಮಾಪಕರಾದ ರೇವಣ್ಣ ಅವರನ್ನು ಚಲನಚಿತ್ರ ತಂಡದವರು ಹಾಗೂ ದೇಗುಲದ ವತಿಯಿಂದ ಸನ್ಮಾನಿಸಲಾಯಿತು.
ಕಲ್ಮಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಕಲ್ಮಡ್ಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬೆಟ್ಟ ಉದಯಕುಮಾರ್, ಡಾ. ಸುಂದರ ಕೇನಾಜೆ, ಸುಬ್ರಾಯ ಭಟ್ ಓಣಿಯಡ್ಕ, ಪ್ರೀತಮ್ ರೈ ಬೆಳ್ಳಾರೆ, ಮಧುರಾಜ್ ಕುಂಬ್ರ, ಚಲನಚಿತ್ರದ ನಿರ್ದೇಶಕ ಈಶ್ವರ ನಿತಿನ್ ಭಾರದ್ವಾಜ್, ನಾಯಕ ನಟ ವಿಲೋಕ್ ರಾಜ್, ಛಾಯಾಗ್ರಾಹಕ ಇನೋಷ್ ಒಲಿವೇರ, ದೇವಸ್ಥಾನದ ಕಾರ್ಯದರ್ಶಿ ಸಂತೋಷ್ ಯಾದವ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ ಬಳ್ಪ, ಸತ್ಯ ನಾರಾಯಣ ಭಟ್ ಕಾಯಂಬಾಡಿ, ಧರ್ಮಣ್ಣ ನಾಯ್ಕ್ ಗರಡಿ ಹಾಗೂ ಚಲನಚಿತ್ರ ತಂಡವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ