ಪೊಲಿಟಿಕಲ್ Punಚ್...: ಆಸೆ, ಆಕಾಂಕ್ಷೆ, ನಂಬಿಕೆ, ಮೂರೂ 'ಟುಸ್sssssss' ಅಂತ ಕೂಗುತ್ತೆ!!!

Upayuktha
0


***


ಭರವಸೆಗಳು ಬ್ಲಾಸ್ಟ್ ಆಗುತ್ತವೆ!!!


**


ಇದರಲ್ಲಿ ISI ಮಾರ್ಕ್ ಇದೆಯಾ? ISIS ಮಾರ್ಕ್ ಇದೆಯಾ? ಅನ್ನೋದೊಂದು ಅನುಮಾನ!!! (ಸ್ಪೋಟವಾಗುವ ಸಾಧ್ಯತೆ ಇದೆ)


**


ಪಾತ್ರೆ ವ್ಯಾಪಾರ ಮಾಡೋರು ಹಳೇ ಗುಜರಿ ಐಟಮ್‌ಗಳನ್ನು ಕೊಂಡುಕೊಳ್ತಾರೆ. ಚುನಾವಣೆ ಸಂದರ್ಭದಲ್ಲಿ ಕುಕ್ಕರ್ ಪಾತ್ರೆ ಕೊಡುವವರಿಗೆ ಕಟ್ಟಿಟ್ಟ ಹಳೇ ಚಪ್ಪಲಿ ಹಾಕಿ ಕಳಿಸಬೇಕು!!!


**


"ಈ ಕುಕ್ಕರ್‌ ಬಾಳಿಕೆಗೆ ಗ್ಯಾರಂಟಿ ಎಷ್ಟು ವರ್ಷ ಇದೆ ಸಾರ್!!?"


**


ಕುಕ್ಕರ್ ಓಕೆ ಸರ್. ಅನ್ನಭಾಗ್ಯ,  ಪಲ್ಯಭಾಗ್ಯ, ತಂಬುಳಿ ಭಾಗ್ಯದ ಹಣ ಇನ್ನೂ ಅಕೌಂಟಿಗೆ ಬಂದೇ ಇಲ್ವಲ್ಲ ಸಾರ್"


**


"ಕಳೆದ ಬಾರಿ ನೀವು ಕೊಟ್ಟ ಕುಕ್ಕರ್‌ನಲ್ಲಿ ಅನ್ನ ಬೆಂದ ಕೂಡಲೆ  ...ಸ್ತಾನ್ ಜಿಂದಾಬಾದ್ ಅಂತ ಕೂಗ್ತಿತ್ತು ಸಾರ್. ಈಗ ಏನಂತೆ ಕೂಗುತ್ತೆ ಸಾರ್?  ಕುಕ್ಕರ್‌ಗೆ ರಿಂಗ್ ಟೋನ್ ಏನ್ಹಾಕಿದಿರಿ?"


*


"ಸರ್, ಕುಕ್ಕರ್ ಕೊಡ್ತಿರೋದು, ನಾವು ತಗೋತಿರೋದರ ಒಂದು ಸೆಲ್ಫಿ ಫೋಟೋ ತಗೋತೀವಿ. ನಾಳೆ ರಿಪೇರಿಗೆ ಕುಕ್ಕರ್ ತಗೊಂಡು ಹೋಗುವಾಗ ದಾರಿಯಲ್ಲಿ ಪೋಲೀಸ್‌ನವರು "ಎಲ್ಲಿ ತಗೊಂಡಿದ್ದು? ಬಿಲ್ಲೆಲ್ಲಿ?, ಇನ್ಷ್ಯೂರೆನ್ಸ್ ಇದೆಯಾ?" ಅಂತೆಲ್ಲ ಕೇಳ್ತಾರೆ ಸರ್.


***


"ಸರ್, ಕುಕ್ಕರ್‌ನ್ನು ಒಂದ್ಲ ಓಪನ್ ಮಾಡಿ ತೋರ್ಸಿಬಿಡಿ ಸಾರ್. ಒಳಗೇನೂ ಇಲ್ಲ ಅಂತ ಗ್ಯಾರಂಟಿ ಮಾಡ್ಕೊಂಡು ತಗೋಬೇಕಂತೆ!!!"


**


"ಸರ್ ಈ ಕುಕ್ಕರ್‌ನಲ್ಲಿ ಕೇಂದ್ರದ ಅಕ್ಕಿ ಮಾತ್ರ ಬೇಯೋದು, ರಾಜ್ಯದ ಅಕ್ಕಿ ಬೇಯೊಲ್ಲ ಅಂತ ಇದೆಯಾ!!? ಹೋದ ಸಲ ಹಾಗೇ ಆಗಿತ್ತು ಸರ್!!*


**


"ಒಂದು ನಾಲ್ಕೈದು ಕುಕ್ಕರ್ ಕೊಡಿ ಸಾರ್. ಒಂದೊಂದು ದಿನ ಒಂದೊಂದು ಕುಕ್ಕರ್‌ನಲ್ಲಿ ಅಡಿಗೆ ಮಾಡ್ತೀವಿ, ನೀವು ಒಂದೊಂದು ದಿನ ಒಂದೊಂದು ಪಕ್ಷದಲ್ಲಿ ಇರ್ತೀರಲ್ಲ ಹಾಗೆ!!"


**


"ಈ ಕುಕ್ಕರ್‌ನ ಒಳಗೂ ಉಸಿರುಕಟ್ಟುವ ವಾತಾವರಣ ಇದ್ದು, ವಿಚಿತ್ರವಾಗಿ ಕೂಗುವ ವ್ಯವಸ್ಥೆ ಇದೆ ಅಲ್ವಾ ಸರ್!?"


**


"ಹೋದ್ಸಲ ನೀವು ಕೊಟ್ಟ ಕುಕ್ಕರ್‌ನಲ್ಲಿ ಬರೀ 40% ಅನ್ನ ಬೇಯ್ತಾ ಇತ್ತು, ಈಗ ಹ್ಯಾಗೆ ಸರ್!?"


*



- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top