ನಾನೊಂದು ಪುಟ್ಟ
ಗುಬ್ಬಚ್ಚಿ
ನೊಂದು ಹೇಳುವೆ
ದುಃಖ ಹೆಚ್ಚಿ
ಎಲ್ಲಿಯೂ ಗೂಡು
ಕಟ್ಟಲು ಇಲ್ಲ ಜಾಗ
ಆದರೂ ಹೊರಲೇಬೇಕು
ಜೀವನದ ನೊಗ
ಸಿಕ್ಕ ಸಿಕ್ಕಲ್ಲಿಗೂಡು
ಕಟ್ಟಬೇಕಾಯ್ತು
ಮರ ಗಿಡಗಳ
ಮಾರಣಹೋಮವಾಯ್ತು
ಮನುಷ್ಯನ ಆಸೆ
ಅತಿಯಾಯ್ತು
ಭೂತಾಯಿಗೂ
ಕೋಪ ಬಂತು
ಇವರ ಅಟ್ಟಹಾಸ
ನೋಡಿ ಕಣ್ಣು
ಕೆಂಪಾಯ್ತು
ಅದೇ ಬಣ್ಣ ಬಣ್ಣದ
ಕರೋನಾ ಆಯ್ತು
ಹೊರಬಂದು
ಮನುಷ್ಯನ
ಅಟ್ಟಾಡಿಸಿತು
ಈಗಲಾದರೂ
ಬುದ್ಧಿ ಬಂದೀತು
ಎಂದುಕೊಳ್ಳುವಳು
ಭೂತಾಯಿ
ನನ್ನ ಭುವಿಯ
ಎಲ್ಲ ಜೀವಿಗಳು
ಬದುಕಲಿ
ಆಗಲೇ ನಾ ತೆಲುವೇ
ಆನಂದದ ಅಲೆಯಲಿ
- ರೇಖಾ. ಮುತಾಲಿಕ್, ಬಾಗಲಕೋಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ