ಕುಳಿತಲ್ಲೇ ಗ್ರಾ.ಪಂ ವಿವರ, ಸೇವೆಗಳಿಗೆ ಅರ್ಜಿ, ಕುಂದುಕೊರತೆ ದಾಖಲಿಸಲು ಸಾಧ್ಯ
ರೈತರಿಗೆ ಗ್ರಾಮ ಪಂಚಾಯತಿಯಿಂದ ಆಗಬೇಕಾದ ಬಹುತೇಕ ಕೆಲಸಗಳಿಗೆ, ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ, ಪರಿಹಾರ-ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೆ ಇನ್ನು ಮುಂದೆ ಕಿಲೋ ಮೀಟರ್‌ಗಟ್ಟಲೆ ಸುತ್ತಿ, ನೂರಾರು ರೂಪಾಯಿ ಖರ್ಚು ಮಾಡಿ, ದಿನಗಟ್ಟಲೆ ಸಮಯ ವ್ಯಯಿಸಿ ಒದ್ದಾಡಬೇಕಿಲ್ಲ!!
ಪಂಚಮಿತ್ರ ವಾಟ್ಸಪ್ ಚಾಟ್‌ನಲ್ಲಿ ನಿಮ್ಮ ಸಮಸ್ಯೆ ದೂರುಗಳನ್ನು ಮೊಬೈಲ್ ವಾಟ್ಸಪ್‌ನಲ್ಲಿ ದಾಖಲಿಸಬಹುದು. ಕುಂದು ಕೊರತೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
ಈ ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಕರ್ನಾಟಕದ ಎಲ್ಲ ಗ್ರಾಮ ಪಂಚಾಯತಿ ನಿವಾಸಿಗಳೂ ಬಳಸಿಕೊಳ್ಳಬಹುದು.
ಇಡೀ ರಾಜ್ಯಕ್ಕೆ ಒಂದೇ ವಾಟ್ಸಪ್ ನಂಬರ್.
8277506000
ವಾಟ್ಸ್ ಆ್ಯಪ್‌ಗೆ ಸಂಪರ್ಕ ಸಂಖ್ಯೆ : 8277506000
ಕುಂದು ಕೊರತೆಯ ಅರ್ಜಿ ಸಲ್ಲಿಸಿದ ನಂತರ ಒಂದು ಯುನಿಕ್ ಐಡಿ ನಂಬರ್ ಪ್ರತೀ ಅರ್ಜಿಗೂ ನೀಡಲಾಗುತ್ತದೆ.
ಪಂಚಮಿತ್ರ ವಾಟ್ಸಪ್ ಚಾಟ್‌ನಲ್ಲಿ
ಕುಂದುಕೊರತೆಯ ಆ ID ನಂಬರ್‌ನ್ನು ಬಳಸಿಕೊಂಡು WhatsApp ನಲ್ಲಿ ಅಥವಾ iPGRS ಜಾಲತಾಣದಲ್ಲಿ ಕುಂದುಕೊರತೆಯ ಸ್ಥಿತಿಯನ್ನು ತಿಳಿಯಬಹುದು. ಅಂದರೆ, ಗ್ರಾಪಂ ಸೇವೆಗಳಿಗೆ ಸಂಬಂಧಪಟ್ಟಂತೆ ಡಿಜಿಟಲ್ ವೇದಿಕೆ ಮೂಲಕ ಅರ್ಜಿ ಸಲ್ಲಿಸಿದ ನಂತರ, ಅರ್ಜಿಗಳ ಸ್ಥಿತಿಗತಿ ಪರಿಶೀಲನೆಗೂ ಅವಕಾಶವಿದೆ.
ನೀವು, ನಿಮ್ಮ ಸಮಸ್ಯೆಗಳನ್ನು, ಮಾಹಿತಿಗಳನ್ನು, ಕುಂದು ಕೊರತೆಯ ಅರ್ಜಿಗಳನ್ನು ಪಂಚಮಿತ್ರ ವಾಟ್ಸಪ್ ಚಾಟ್‌ನಲ್ಲಿ ಸಲ್ಲಿಸಿ.
**"
ಪಂಚಮಿತ್ರ ವಾಟ್ಸಪ್ ಚಾಟ್ ಬಳಸುವುದು ಹೇಗೆ?
ತುಂಬ ಸುಲಭ ಇದೆ.
ಈ ಡಿಜಿಟಲ್ ಸೇವೆ ಪಡೆಯಲು ಸ್ಮಾರ್ಟ್‌ಫೋನ್ ಅಗತ್ಯ.
ಈ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ಚಾಟ್ ಶುರು ಮಾಡಬಹುದು. ಮೊದಲಿಗೆ 'Hi' ಎಂದು ಸಂದೇಶ ಕಳುಹಿಸಬೇಕು.
ಆಗ ಸ್ಕ್ರೀನ್ ಮೇಲೆ ಭಾಷೆ ಆಯ್ಕೆ ಅವಕಾಶ ಸಿಗಲಿದೆ.
ಬಳಿಕ ಜಿಲ್ಲೆ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬೇಕು.
ನಂತರ ಸೇವೆ, ಮಾಹಿತಿ, ಕುಂದುಕೊರತೆ ಎಂಬ ಮೂರು ಆಯ್ಕೆ ಮೂಡಲಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ಮುಂಬರುವ ಸೂಚನೆಗಳನ್ನು ಪಾಲಿಸುತ್ತ ಅರ್ಜಿ ಸಲ್ಲಿಸಬಹುದು.
*"
ಸದ್ಯಕ್ಕೆ ಈಗ 39 ರೀತಿಯ ಕುಂದುಕೊರತೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ, ರಸ್ತೆ ಸಮಸ್ಯೆ, ಸೇತುವೆ ದುರಸ್ತಿ, ಮನರೇಗಾ ಯೋಜನೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಪಟ್ಟ 39 ರೀತಿಯ ಕುಂದುಕೊರತೆ ಗುರುತಿಸಲಾಗಿದೆ. ಈ ಸಮಸ್ಯೆಗಳ ಕುರಿತಂತೆ ಪೋರ್ಟಲ್ ಅಥವಾ ವಾಟ್ಸಾಪ್ ಮೂಲಕ ಅಹವಾಲು ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಅವಕಾಶವಿರುವುದು ವಿಶೇಷ.
ಪಂಚಮಿತ್ರ' ಪೋರ್ಟಲ್/ ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಲಭ್ಯವಿರುವ ಸೇವೆಗಳು
ಕಟ್ಟಡ ನಿರ್ಮಾಣ ಪರವಾನಗಿ,
ಹೊಸ ನೀರು ಪೂರೈಕೆ ಸಂಪರ್ಕ,
ನೀರು ಸರಬರಾಜಿನ ಸಂಪರ್ಕ ಕಡಿತ,
ಕುಡಿಯುವ ನೀರಿನ ನಿರ್ವಹಣೆ,
ಬೀದಿದೀಪದ ನಿರ್ವಹಣೆ,
ಗ್ರಾಮ ನೈರ್ಮಲ್ಯ ನಿರ್ವಹಣೆ,
ಉದ್ದಿಮೆ ಪರವಾನಗಿ, ಸ್ವಾಧೀನ ಪ್ರಮಾಣ ಪತ್ರ,
ನಾನಾ ಸೇವೆ ಸಂಬಂಧ ರಸ್ತೆ ಅಗೆತಕ್ಕೆ ಅನುಮತಿ,
ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ,
ನಿರಾಕ್ಷೇಪಣಾ ಪತ್ರ,
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಜಾಬ್‌ಕಾರ್ಡ್ ವಿತರಣೆ,
ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು,
ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ,
ಹೊಸ/ ಅಸ್ತಿತ್ವದಲ್ಲಿರುವ ಓವರ್ ಗ್ರೌಂಡ್ ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ.
ಜತೆಗೆ ನಮೂನೆ 9/11ಎ, ನಮೂನೆ 11ಬಿ.
ಈ ಎಲ್ಲ ಮಾಹಿತಿ ಲಭ್ಯ
ಚುನಾಯಿತ ಪ್ರತಿನಿಧಿಗಳ ವಿವರ,
ಸಿಬ್ಬಂದಿ ವಿವರ,
ಪೂರ್ಣಗೊಂಡ ಗ್ರಾಮ ಪಂಚಾಯಿತಿ ಸಭೆಗಳ ನಡಾವಳಿಗಳು,
ಗ್ರಾಮ ಪಂಚಾಯಿತಿಯ ಮುಂಬರುವ ಸಭೆಗಳ ಮಾಹಿತಿ,
ಆದಾಯ ಸಂಗ್ರಹ ಮಾಹಿತಿ,
ಸೇವೆಗಳ ವಿವರ,
ಸ್ವಸಹಾಯ ಗುಂಪಿನ ಮಾಹಿತಿ,
ಗ್ರಾಮ ಪಂಚಾಯತ್‌ಗಳ ಕಾರ್ಯಕ್ರಮಗಳು- ಉಪಕ್ರಮಗಳು.
ಹಾಗೆಯೇ 4(1)(ಎ) ಮತ್ತು 4(1)(ಬಿ) ಆರ್‌ಟಿಐ ದಾಖಲೆಗಳು ಲಭ್ಯವಿರುತ್ತವೆ.
ರೈತರಿಗೆ ಈ ವ್ಯವಸ್ಥೆ ಬಹಳ ಅನುಕೂಲವಾಗಬಹುದು ಅಂತ ಅನಿಸ್ತಾ ಇದೆ.
ರೈತರು, ಗ್ರಾಮಸ್ತರು ಪಂಚಮಿತ್ರ ವಾಟ್ಸಪ್ ಚಾಟ್ ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಾರೆ ಮತ್ತು ವ್ಯವಸ್ಥೆಯಲ್ಲಿ ಅಧಿಕಾರಿಗಳಿಂದ ಅದಕ್ಕೆ ಪ್ರತಿಸ್ಪಂದನ ಹೇಗೆ ದೊರೆಯುತ್ತದೆ ಎಂಬುದರ ಮೇಲೆ ಈ ಹೊಸ ಪಂಚಮಿತ್ರ ವಾಟ್ಸಪ್ ಚಾಟ್ ನ ಯಶಸ್ಸು ನಿಂತಿದೆ.
ನಾವು ರೈತ ಬಾಂಧವರೆಲ್ಲ ನಮ್ಮ ಕೆಲಸಗಳನ್ನು - ಕುಂದು ಕೊರತೆಗಳ ಬಗ್ಗೆ ಅರ್ಜಿ, ಮಾಹಿತಿ ಪಡೆಯುವಿಕೆ, ಗ್ರಾಮ ಪಂಚಾಯತಿಯಿಂದ ಸೇವೆ ಪಡೆಯುವುದು ಇತ್ಯಾದಿ - ಮಾಡೋಣ.
ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ