ನಾಟಕ ಬೆಂಗ್ಳೂರು ವತಿಯಿಂದ 16ನೇ ಆವೃತ್ತಿಯ ರಂಗ ಸಂಭ್ರಮ

Upayuktha
0


ಬೆಂಗಳೂರು: ನಾಟಕ ಬೆಂಗ್ಳೂರು ರಂಗಸಂಭ್ರಮದ 16ನೇ ಆವೃತ್ತಿಯನ್ನು ಬೆಂಗಳೂರಿನ ರಂಗತಂಡಗಳು ವಿಭಿನ್ನವಾಗಿ ಆಚರಿಸಿದವು. ರವೀಂದ್ರ ಕಲಾಕ್ಷೇತ್ರಕ್ಕೆ 60 ವರ್ಷ ತುಂಬಿದ ಸಂಭ್ರಮದ ವರ್ಷ ಇದು. ಈ ಬಾರಿ ಉತ್ಸವದಲ್ಲಿ 30 ತಂಡಗಳು ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ನೀಡಿದವು. ಬೆಂಗಳೂರಿನ 'ಕಾಲೇಜುಗಳತ್ತ ಹವ್ಯಾಸಿ ರಂಗದ ನಡಿಗೆ' ಎಂಬ ವಿಶಿಷ್ಟ ರಂಗ ಚಟುವಟಿಕೆಗಳನ್ನು ನಡೆಸಿ ರಂಗ ಪ್ರಾತ್ಯಕ್ಷಿಕೆ, ಕಾರ್ಯಾಗಾರ, ನಾಟಕ ಪ್ರದರ್ಶನಗಳು ಮುಂತಾದ  ಚಟುವಟಿಕೆಗಳು ನಡೆದವು. ಕಲಾಕ್ಷೇತ್ರ 60- ವಜ್ರಮಹೋತ್ಸವ ವರ್ಷದ ನೆನಪನ್ನು ಹಸಿರಾಗಿಸಲು ರಾಜ್ಯ ಮಟ್ಟದ ನಾಟಕ ರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ಈ ಸ್ಪರ್ಧೆಗೆ 40 ನಾಟಕ ಕೃತಿಗಳು ಬಂದಿದ್ದವು. ಅವುಗಳಲ್ಲಿ ವಿದ್ಯಾರ್ಥಿಗಳಿಂದ 2 ನಾಟಕಗಳು ಬಂದಿದ್ದವು. ಒಂದು ವಿದ್ಯಾರ್ಥಿ ಬಹುಮಾನ ಸೇರಿದಂತೆ ಒಟ್ಟು 9 ನಾಟಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಮೂರು ನಾಟಕಗಳಿಗೆ ತಲಾ ₹10000/-  ನಗದು ಬಹುಮಾನ ಸೇರಿದಂತೆ ಇನ್ನೂ ಆರು ನಾಟಕಗಳಿಗೆ ತಲಾ ₹5000 /- ನಗದು ಬಹುಮಾನಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಒಂದು ಬಹುಮಾನ ವಿದ್ಯಾರ್ಥಿ ವಿಭಾಗದಲ್ಲಿ ನೀಡಲಾಯಿತು ಎಂದು ನಾಟಕ ಬೆಂಗ್ಳೂರು ಸಂಚಾಲನಾ ಸಮಿತಿ ಪ್ರಕಟಣೆ ತಿಳಿಸಿದೆ.


ಮಾರ್ಚ್ 26ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಈ ಸಂಭ್ರಮದ ಸಮಾರೋಪ ನಡೆಯಲಿದೆ. ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಲಿದೆ. ಚಿತ್ರರಂಗದ ಜೀವಮಾನ ಸಾಧನೆ ಪುರಸ್ಕೃತ ರಂಗ ನಿರ್ದೇಶಕ ಎಂ.ಎಸ್ ಸತ್ಯು ಅವರಿಗೆ ರಂಗ ಅಭಿನಂದನೆ ನಡೆಯಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಹಿರಿಯ ನಾಟಕಕಾರ, ಕಿರುತೆರೆ ನಿರ್ದೇಶಕ ಟಿ.ಎನ್ ಸೀತಾರಾಮ್, ಹಿರಿಯ ಚಿತ್ರಕಲಾವಿದ ಡಾ. ಎಂ.ಎಸ್. ಮೂರ್ತಿ, ಹಿರಿಯ ನಾಟಕಕಾರ ಡಾ. ರಾಜಪ್ಪ ದಳವಾಯಿ, ಖ್ಯಾತ ಲೇಖಕಿ ಸಂಧ್ಯಾರಾಣಿ, ಯುವ ನಾಟಕಕಾರ ಡಾ. ಬೇಲೂರು ರಘುನಂದನ ಭಾಗಿಯಾಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top