ಮಸ್ಕತ್‌ನಲ್ಲಿ ಜರಗಿತು ಚಾರಿತ್ರಿಕ ಶ್ರೀ ಸತ್ಯನಾರಾಯಣ ಪೂಜೆ

Upayuktha
0


ಮಸ್ಕತ್‌: "ಬಿರುವ ಜವನೆರ್" ಸಂಘಟನೆಯ ಆಶ್ರಯದಲ್ಲಿ ಮಸ್ಕತ್ ನ ದಾರಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜಾ ಸಹಿತ ಚಾರಿತ್ರಿಕ "ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ" ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಜರಗಿತು.


ಹೊರ ರಾಷ್ಟ್ರ ದಲ್ಲಿ ಮೊದಲ ಬಾರಿ ಶನೀಶ್ವರ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಪಡೆದ ಮಂಗಳೂರು ಪಕ್ಷಿಕೆರೆಯ ಪದ್ಮನಾಭ ಶೆಟ್ಟಿಗಾರ್ ಸಂಚಾಲಕತ್ವ ದ ಶ್ರೀ ಶನೀಶ್ವರ ಭಕ್ತ ವೃಂದ ದವರಿಂದ ಸತ್ಯನಾರಾಯಣ ಪೂಜಾ ಸಹಿತ ತಾಳಮದ್ದಳೆ ಸಂಪನ್ನ ಗೊಂಡಿತು.



ಕಳೆದ ಮೂರು ದಶಕಗಳಿಂದ ತಾಳಮದ್ದಳೆ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ತುಳುನಾಡಿನ ಈ ಖ್ಯಾತ ತಂಡವು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಗೂ ದುಬೈ, ಅಬುದಾಬಿ, ಮಸ್ಕತ್ ರಾಷ್ಟ್ರಗಳಲ್ಲಿ ಪೂಜಾ ಸಹಿತ ಶನೀಶ್ವರ ತಾಳಮದ್ದಳೆ ನಡೆಸಿ ಜನಪ್ರಿಯತೆ ಗಳಿಸಿವೆ.


ಈ ಪೂರ್ವದಲ್ಲಿ "ಬಿರುವ ಜವನೆರ್" ಇದೇ ತಂಡದಿಂದ ಎರಡು ಬಾರಿ ಶನಿ ಪೂಜೆಯನ್ನು ಮಸ್ಕತ್ ನಲ್ಲಿ ಆಯೋಜಿಸಿ ಯಶಸ್ವಿ ಆಗಿದ್ದರು.

ಈ ಸಂಘಟನೆಯು ಧಾರ್ಮಿಕ ಮತ್ತು ಸಮಾಜ ಸೇವಾ ಚಟುವಟಿಕೆಯನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ.


ಮಸ್ಕತ್ ನಲ್ಲಿ ನೆಲೆಸಿರುವ ತುಳುನಾಡಿನ ಎಲ್ಲಾ ಸಮುದಾಯದವರು, ಕನ್ನಡ ಸಂಘದವರು ನಾಲ್ಕು ಘಂಟೆಗಳ ಕಾಲ ಚಾಪೆಯಲ್ಲಿ ಕುಳಿತು ಕಥೆಯನ್ನು ಆಲಿಸಿದರು. ಸುಮಾರು ಒಂದೂವರೆ ಸಾವಿರ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಭೋಜನ ಸ್ವೀಕರಿಸಿದರು.


ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಕೋಡಿಕಲ್ ಹಾಗೂ ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಸದಾಶಿವ ಆಳ್ವ ತಲಪಾಡಿ,ಶಶಿಕಾಂತ್ ಶೆಟ್ಟಿ ಕಾರ್ಲ, ಪ್ರಸನ್ನ ಶೆಟ್ಟಿ ಅತ್ತೂರ್ ಗುತ್ತು, ಮನೋಹರ ಕುಂದರ್ ಎರ್ಮಾಳ್, ಪ್ರಜ್ವಲ್ ಶೆಟ್ಟಿ ಗುರುವಾಯನಕೆರೆ, ನಿತಿನ್ ಹುಣಸೆಕಟ್ಟೆ ಮತ್ತು ರವಿ ಭಟ್ ಪಡುಬಿದ್ರಿ ಅವರು ಪೂಜಾ ವ್ಯವಸ್ಥೆ ಯಲ್ಲಿ ಸಹಕರಿಸಿದ್ದರು.



ಉಮೇಶ್ ಬಂಟ್ವಾಳ್, ಪ್ರೇಮ ಹಾಗೂ ವಾಸು ಅಣ್ಣಯ್ಯ ಪೂಜಾರಿ, ಯಶೋಧ ದಂಪತಿಗಳು ಸತ್ಯ ನಾರಾಯಣ ಪೂಜಾ ಸಂಕಲ್ಪದೀಕ್ಷಿತರಾಗಿದ್ದರು.

ಮುಖ್ಯ ಅತಿಥಿಗಳಾಗಿ ಅಲ್ ಅನ್ಸಾರಿ ಟ್ರೇಡಿಂಗ್ ನ ಕಿರಣ್ ಆಶರ್ ದಂಪತಿಗಳು, ಮಸ್ಕತ್ ಫಾರ್ಮಸಿಯ ರವಿಕುಮಾರ್ ದಂಪತಿಗಳು ಪಾಲ್ಗೊಂಡಿದ್ದರು.


ಗುರುಪ್ರಸಾದ್ ನಾನಿಲ್ ಸ್ವಾಗತಿಸಿದರು, ನಿತಿನ್ ಹುಣಸೆಕಟ್ಟೆ ವಂದಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಎಲ್ಲಾ ಕಲಾವಿದರನ್ನು ಒಮಾನ್ ಲಾಂಛನದ ಪ್ರತಿಕೃತಿ ನೀಡಿ ಗೌರವಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top