ಪುತ್ತೂರು: ಅಯೋಧ್ಯೆಯ ಶ್ರೀರಾಮ ಮಂದಿರದ ಬ್ರಹ್ಮಕಲಶ ಮತ್ತು ಬಾಲರಾಮನ ಪ್ರಾಣಪರತಿಷ್ಠಾ, ಮಂಡಲೋತ್ಸವ ಮತ್ತು 1008 ಕಲಶಾಭಿಷೇಕದ ಅಂಗವಾಗಿ ಶ್ರೀರಾಮಚಂದ್ರಾಪುರ ಮಠ ಮತ್ತು ಗೋಕರ್ಣದ ಗೋಪಾಲ ಟ್ರಸ್ಟ್ ವತಿಯಿಂದ ನಡೆಸಲಾದ ದ್ವಿ ಕಲಶ ಪೂಜೆಗಳ ಕಲಶ ತೀರ್ಥ ವಿತರಣೆ ಮಾರ್ಚ್ 15ರಂದು ಮುಳಿಯ ಜ್ಯುವೆಲ್ಸ್‌ನಲ್ಲಿ ನಡೆಯಲಿದೆ.
ಸಂಜೆ 4 ಗಂಟೆಯಿಂದ ಸಾರ್ವಜನಿಕರಿಗೆ ಕಲಶ ತೀರ್ಥದ ವಿತರಣೆ ನಡೆಯಲಿದೆ.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ 48 ದಿನಗಳ ವೈಭವದ ಮಂಡಲೋತ್ಸವ ಮಾ.10ರಂದು ಮುಕ್ತಾಯಗೊಂಡಿದೆ.
1992ರಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾದ ಪುತ್ತೂರು ಸುತ್ತಮುತ್ತಲಿನ ಕಾರ್ಯಕರ್ತರನ್ನು ಅಭಿನಂದಿಸುವ ಹೆಮ್ಮೆಯ ಕಾರ್ಯವನ್ನು ಮುಳಿಯ ಜ್ಯುವೆಲ್ಸ್ ಮಾಡುತ್ತಿದೆ. ಅಂದಿನ ದಿನಗಳಲ್ಲಿ ಅಯೋಧ್ಯೆಗೆ ತೆರಳಿದವರು ಪುನಃ ಮನೆಗೆ ಜೀವಂತವಾಗಿ ಬರುತ್ತಾರೆ ಎಂಬ ಗ್ಯಾರಂಟಿ ಇಲ್ಲದಿದ್ದರೂ ಧೈರ್ಯದಿಂದ ಅಯೋಧ್ಯೆಗೆ ತೆರಳಿದವರು ಪುತ್ತೂರು ತಾಲೂಕಿನಲ್ಲಿ ನೂರಾರು ಮಂದಿ ಇದ್ದಾರೆ. ಕೆಲವರ ಮಾಹಿತಿ ಲಭ್ಯವಿದ್ದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವಾಗಿಯೇ 97431 75916 ನಂಬರ್ ಅನ್ನು ಸಂಪರ್ಕಿಸಿ ವಿವರ ತಿಳಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆ ಕೋರಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ