ಬೆಂಗಳೂರು : ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾರ್ಚ್ 11 ರಿಂದ 17ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತ್ಯೋತ್ಸವದ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ದಾಸವಾಣಿ ಕಾರ್ಯಕ್ರಮವು ಮಾರ್ಚ್ 11 ರಿಂದ 14ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ, ಕ್ರಮವಾಗಿ : ಕು|| ಎಸ್.ವಿ. ಚಂದನ ಮತ್ತು ಸಂಗಡಿಗರು, ಕು|| ಅನನ್ಯ ಬೆಳವಾಡಿ ಮತ್ತು ಸಂಗಡಿಗರು, ಕು|| ಸುಶ್ರಾವ್ಯ ಆಚಾರ್ಯ ಮತ್ತು ಸಂಗಡಿಗರು, ಸುಷ್ಮಾ ಜೋಯಿಸ್ ಮತ್ತು ಸಂಗಡಿಗರಿಂದ ನಡೆಯಲಿದೆ.
ಶ್ರೀಲಕ್ಷ್ಮೀ ಶೋಭಾನೆ ಮತ್ತು ಭರತನಾಟ್ಯ ಕಾರ್ಯಕ್ರಮವು ಮಾರ್ಚ್ 15 - ಸಂಜೆ 5ಕ್ಕೆ ಟಿ ಟಿ ಡಿ ದಾಸಸಾಹಿತ್ಯ ಪ್ರಾಜೆಕ್ಟ್ ಮತ್ತು ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಶ್ರೀಲಕ್ಷ್ಮೀ ಪೂಜೆ ಸಹಿತ ಶ್ರೀ ಲಕ್ಷ್ಮೀ ಶೋಭಾನೆ. ನಂತರ ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ 'ಕಲಾಯೋಗಿ' ಶ್ರೀ ಸತೀಶ್ ಬಾಬು ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ". ಮಾರ್ಚ್ 16 : ಕು|| ಪ್ರಣೀತಾ ಟಿ. ಮಣೂರ್ ಮತ್ತು ಸಂಗಡಿಗರಿಂದ "ದಾಸರ ಪದಗಳ ರಸಧಾರೆ" ನಡೆಯಲಿದೆ.
ಶ್ರೀ ಶ್ರೀನಿವಾಸ ಕಲ್ಯಾಣ : ಮಾರ್ಚ್ 17, ಭಾನುವಾರ ಸಂಜೆ 6-00ಕ್ಕೆ : ಶ್ರೀವಾರಿ ಫೌಂಡೇಶನ್ ವತಿಯಿಂದ "ಶ್ರೀ ಶ್ರೀನಿವಾಸ ಕಲ್ಯಾಣ". ಭಾಗವಹಿಸುವ ಭಜನಾ ಮಂಡಳಿಗಳು : ಮಧ್ವರಾಜ ಭಜನಾ ಮಂಡಳಿ, ಚಂದ್ರಿಕಾ ಭಜನಾ ಮಂಡಳಿ, ಗುರುರಾಜ ಭಜನಾ ಮಂಡಳಿ, ಅಂಬರೀಶ ಭಜನಾ ಮಂಡಳಿ, ಹೃಷಿಕೇಶ ಭಜನಾ ಮಂಡಳಿ, ಜಯಗೋವಿಂದ ಭಜನಾ ಮಂಡಳಿ, ಪವಮಾನ ಭಜನಾ ಮಂಡಳಿ ಮತ್ತು ಶ್ರೀರಾಮ ಭಜನಾ ಮಂಡಳಿಗಳು ಭಾಗವಹಿಸಲಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ